Tuesday, 7 September 2021

ಕೇರಳ: 11 ಮಂದಿಗೆ ನಿಫಾ ರೋಗ ಲಕ್ಷಣ, 30 ಆರೋಗ್ಯ ಕಾರ್ಯಕರ್ತರಿಗೆ ಕ್ವಾರಂಟೈನ್

   

   ಕೇರಳ: 11 ಮಂದಿಗೆ ನಿಫಾ ರೋಗ ಲಕ್ಷಣ, 30 ಆರೋಗ್ಯ ಕಾರ್ಯಕರ್ತರಿಗೆ ಕ್ವಾರಂಟೈನ್

ತಿರುವನಂತಪುರ :ಮಾರಣಾಂತಿಕ ನಿಫಾ ವೈರಸ್ ಸೋಂಕಿನಿಂದ ಮೃತಪಟ್ಟ 12 ವರ್ಷದ ಬಾಲಕನೊಂದಿಗೆ ಸಂಪರ್ಕ ಹೊಂದಿದ್ದ 11 ಮಂದಿಯಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸೋಮವಾರ ತಿಳಿಸಿದ್ದಾರೆ.

ನಿಫಾ ವೈರಸ್ ಸೋಂಕಿನ ಲಕ್ಷಣ ಕಾಣಿಸಿಕೊಂಡವರಲ್ಲಿ ಬಾಲಕನ ಪೋಷಕರು ಹಾಗೂ ಅವರ ಇಬ್ಬರು ಸಂಬಂಧಿಕರು ಇದ್ದಾರೆ. ಅವರು ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಬಾಲಕನ ತಾಯಿಗೆ ರವಿವಾರ ಜ್ವರ ಇತ್ತು. ಆದರೆ, ಅದು ಈಗ ಕಡಿಮೆ ಆಗಿದೆ ಎಂದು ವೀಣಾ ಜಾರ್ಜ್ ತಿಳಿಸಿದ್ದಾರೆ.

ಬಾಲಕನ ಜೊತೆ ಸಂಪರ್ಕ ಹೊಂದಿದ್ದ 251 ಮಂದಿಯನ್ನು ಸರಕಾರ ಗುರುತಿಸಿದ್ದು, 129 ಮಂದಿ ಆರೋಗ್ಯ ಕಾರ್ಯಕರ್ತರು. ಇವರಲ್ಲಿ 30 ಮಂದಿ ಆರೋಗ್ಯ ಕಾರ್ಯಕರ್ತರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಅವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ಜಾರ್ಜ್ ಹೇಳಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸುವುದಕ್ಕಿಂತ ಮುನ್ನ ಬಾಲಕನನ್ನು ಕೋಝಿಕ್ಕೋಡ್ನ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ (ಎಂಸಿಎಚ್) ಸೇರಿದಂತೆ ಕನಿಷ್ಠ 4 ಆರೋಗ್ಯ ಸೇವೆಯ ಸಂಸ್ಥೆಗಳಿಗೆ ಕರೆದೊಯ್ಯಲಾಗಿತ್ತು. ಇದರಿಂದ ಅತ್ಯಧಿಕ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಗುಲಿದೆ ಎಂದು ವೀಣಾ ಜಾರ್ಜ್ ತಿಳಿಸಿದ್ದಾರೆ.

ರಾಜ್ಯ ಸರಕಾರ ಕಣ್ಣೂರು, ಮಲಪ್ಪುರಂ ಹಾಗೂ ವಯನಾಡ್ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ನೀಡಿದೆ. ಬಾಲಕ ಮೃತಪಟ್ಟ ಕೋಝಿಕ್ಕೋಡ್ನೊಂದಿಗೆ ಈ ಎಲ್ಲಾ ಜಿಲ್ಲೆಗಳು ತಮ್ಮ ಗಡಿಯನ್ನು ಹಂಚಿಕೊಂಡಿವೆ.SHARE THIS

Author:

0 التعليقات: