ಗಣೇಶನ ವಿಸರ್ಜನೆ ವೇಳೆ ಭಾರಿ ದುರಂತ:
ಹಸುಗೂಸು ಸೇರಿ 10 ಮಕ್ಕಳು ನೀರು ಪಾಲು!
ಭೋಪಾಲ್(ಮಧ್ಯಪ್ರದೇಶ): ಗಣೇಶ ವಿಸರ್ಜನೆಗೆ ಹೋದ ಒಂದು ಹಸುಗೂಸು ಸೇರಿ 10 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಮಧ್ಯಪ್ರದೇಶದ ವಿವಿಧ ಭಾಗಗಳಲ್ಲಿ ನಡೆದಿದೆ.
ಭಿಂಡ್ನಲ್ಲಿ ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆ. ಇವರನ್ನು ಮೃತ ಮಕ್ಕಳನ್ನು ಅಭಿಷೇಕ್ ಕುಶ್ವಾಹ, ಸಚಿನ್ ರಾಜಾವತ್, ಹರ್ಷಿತ್ ರಾಜಾವತ್, ಪ್ರಶಾಂತ್ ಕುಶ್ವಾಹ ಎಂದು ಗುರುತಿಸಲಾಗಿದೆ. ಎಲ್ಲರೂ 12-13 ವರ್ಷ ವಯಸ್ಸಿನವರಾಗಿದ್ದು ಅವರ ಶವಗಳನ್ನು ತೆಗೆಯಲಾಗಿದೆ.
ಸಾತ್ನಾ ಜಿಲ್ಲೆಯಲ್ಲಿ, ಜುರಾ ಗ್ರಾಮದ ಕೊಳದಲ್ಲಿ ಮುಳುಗಿ ನಾಲ್ವರು ಮಕ್ಕಳು ಸತ್ತಿದ್ದಾರೆ. ಎಲ್ಲರೂ 8 ರಿಂದ 10 ವರ್ಷ ವಯಸ್ಸಿನವರಾಗಿದ್ದರು. ರಾಜ್ಘರ್ನಲ್ಲಿ ಒಂದು ಹಸುಮಗು ನೀರಿನಲ್ಲಿ ಮುಳುಗಿ ಮೃತಪಟ್ಟಿದೆ. ಈ ದುರಂತ ನಡೆಯುತ್ತಿದ್ದಂತೆಯೇ ಶಾಸಕ ನಾರಾಯಣ್ ತ್ರಿಪಾಠಿ, ಎಸ್ ಡಿಒಪಿ ಹಿಮಾಲಿ ಸೋನಿ ಮತ್ತು ಎಸ್ ಡಿಎಂ ಧೀರೇಂದ್ರ ಮಿಶ್ರಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
0 التعليقات: