Thursday, 9 September 2021

ರಾಜ್ಯದಲ್ಲಿಂದು 1,074 ಮಂದಿಗೆ ಕೊರೋನ ದೃಢ, 4 ಮಂದಿ ಸಾವು

 

ರಾಜ್ಯದಲ್ಲಿಂದು 1,074 ಮಂದಿಗೆ ಕೊರೋನ ದೃಢ, 4 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಗುರುವಾರ 1,074 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 4 ಜನರು ಸೋಂಕಿಗೆ ಬಲಿಯಾಗಿದ್ದು, 1,136 ಜನರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 29,59,164ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 37,462ಕ್ಕೆ ತಲುಪಿದೆ. 

ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 16,992ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

4 ಸೋಂಕಿತರು ಬಲಿ: ಬೆಂಗಳೂರು ನಗರ 3, ಹಾಸನ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. 

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 1,074 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಳ್ಳಾರಿ 5, ಬೆಳಗಾವಿ 8, ಬೆಂಗಳೂರು ಗ್ರಾಮಾಂತರ 5, ಬೆಂಗಳೂರು ನಗರ 343, ಚಾಮರಾಜನಗರ 2, ಚಿಕ್ಕಬಳ್ಳಾಪುರ 5, ಚಿಕ್ಕಮಗಳೂರು 68, ಚಿತ್ರದುರ್ಗ 8, ದಕ್ಷಿಣ ಕನ್ನಡ 176, ದಾವಣಗೆರೆ 3, ಧಾರವಾಡ 7, ಹಾಸನ 81, ಕಲಬುರಗಿ 7, ಕೊಡಗು 59, ಕೋಲಾರ 12, ಮಂಡ್ಯ 15, ಮೈಸೂರು 48, ರಾಯಚೂರು 6, ರಾಮನಗರ 2, ಶಿವಮೊಗ್ಗ 39, ತುಮಕೂರು 22, ಉಡುಪಿ 126, ಉತ್ತರ ಕನ್ನಡ 25, ವಿಜಯಪುರ 1, ಯಾದಗಿರಿ ಜಿಲ್ಲೆಯಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.

ರಾಜಧಾನಿಯಲ್ಲಿ 343 ಜನರಿಗೆ ಕೊರೋನ ದೃಢ

ರಾಜಧಾನಿಯಲ್ಲಿ ಗುರುವಾರದಂದು 343 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 3 ಜನರು ಸೋಂಕಿಗೆ ಬಲಿಯಾಗಿದ್ದಾರೆ. 

ನಗರದಲ್ಲಿ ಇಲ್ಲಿಯವರೆಗೆ ಒಟ್ಟು 12,40,653 ಕೊರೋನ ಸೋಂಕಿತರು ದೃಢಪಟ್ಟಿದ್ದು, ಒಟ್ಟು 16,0443 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು 12,17,401 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 


SHARE THIS

Author:

0 التعليقات: