Sunday, 12 September 2021

ಆಪಲ್ ಸಂಸ್ಥೆಗೆ 100 ಬಿಲಿಯನ್ ಡಾಲರ್ ನಷ್ಟ !

 ಆಪಲ್ ಸಂಸ್ಥೆಗೆ 100 ಬಿಲಿಯನ್ ಡಾಲರ್ ನಷ್ಟ !

ನ್ಯೂಯಾರ್ಕ್: ನ್ಯಾಯಾಲಯ ನೀಡಿದ ಒಂದು ಆದೇಶವು ವಿಶ್ವದ ಪ್ರಮುಖ ತಂತ್ರಜ್ಞಾನ ಸಂಸ್ಥೆ ಆ್ಯಪಲ್ ಗೆ ಸುಮಾರು 100 ಬಿಲಿಯನ್ ಡಾಲರ್ ನಷ್ಟು ನಷ್ಟಕ್ಕೆ ಕಾರಣವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆ್ಯಪಲ್ ಟೆಕ್ನಾಲಜಿ ಸಂಸ್ಥೆಯ ಆ್ಯಪ್ಸ್ಟೋರ್ನಲ್ಲಿರುವ ಥರ್ಡ್ ಪಾರ್ಟಿ ಆ್ಯಪ್ ಪಾವತಿ ವ್ಯವಸ್ಥೆಯನ್ನು ಆ್ಯಪ್ ಡೆವಲಪರ್ಗಳು(ಮೊಬೈಲ್ ಅಪ್ಲಿಕೇಷನ್ ರೂಪಿಸುವವರು) ಬಳಸುವಂತಿಲ್ಲ ಎಂಬ ಆದೇಶವನ್ನು ಅಮೆರಿಕದ ಫೆಡರಲ್ ನ್ಯಾಯಾಧೀಶರು ರದ್ದುಗೊಳಿಸಿದ್ದಾರೆ.

ಆ್ಯಪ್ ಡೆವಲಪರ್ಗಳು ಇನ್-ಆ್ಯಪ್ (ಶುಲ್ಕ ಇರುವ) ಖರೀದಿ ಮಾತ್ರ ನಡೆಸಬೇಕು ಎಂದು ಕಡ್ಡಾಯಗೊಳಿಸುವಂತಿಲ್ಲ. ಆದ್ದರಿಂದ ಇತರ ಸಂವಹನ ಮಾರ್ಗಗಳ ಮೂಲಕ ವ್ಯವಹಾರ ನಡೆಸದಂತೆ ನಿರ್ಬಂಧಿಸಲು ಆ್ಯಪಲ್ ಸಂಸ್ಥೆಗೆ ಅವಕಾಶವಿಲ್ಲ ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ.

  ಈ ಆದೇಶ ಹೊರಬೀಳುತ್ತಿದ್ದಂತೆಯೇ ಶುಕ್ರವಾರದ ಶೇರು ಮಾರುಕಟ್ಟೆಯಲ್ಲಿ ಆ್ಯಪಲ್ ಸಂಸ್ಥೆಯ ಶೇರು ಮೌಲ್ಯ 3ಶೇ. ಕುಸಿದಿದ್ದು ಸಂಸ್ಥೆಗೆ ಸುಮಾರು 100 ಬಿಲಿಯನ್ ಡಾಲರ್ ನಷ್ಟವಾಗಿದೆ ಎಂದು ಸಿಎನ್ಬಿಸಿ ವರದಿ ಮಾಡಿದೆ. 1976ರಲ್ಲಿ ಸ್ಥಾಪನೆಯಾದ ಸಂಸ್ಥೆಯ ಶೇರುಗಳನ್ನು ಸ್ಟಾಕ್ ಎಕ್ಸ್ಚೇಂಜ್ನಲ್ಲಿ 1980ರಲ್ಲಿ ಲಿಸ್ಟಿಂಗ್ ಮಾಡಲಾಗಿದೆ. 2018ರ ಆಗಸ್ಟ್  ನಲ್ಲಿ ಆ್ಯಪಲ್ ಸಂಸ್ಥೆಯ ಶೇರು ಮೌಲ್ಯ 1 ಟ್ರಿಲಿಯನ್ ಡಾಲರ್ನಷ್ಟಿತ್ತು.SHARE THIS

Author:

0 التعليقات: