Thursday, 30 September 2021

 ಕೇರಳದಲ್ಲಿ ಸಿಎಎಯನ್ನು ಕಾರ್ಯರೂಪಕ್ಕೆ ತರುವುದಿಲ್ಲ: ಸಿಎಂ ಪಿಣರಾಯಿ ವಿಜಯನ್‌

ಕೇರಳದಲ್ಲಿ ಸಿಎಎಯನ್ನು ಕಾರ್ಯರೂಪಕ್ಕೆ ತರುವುದಿಲ್ಲ: ಸಿಎಂ ಪಿಣರಾಯಿ ವಿಜಯನ್‌

ಕೇರಳದಲ್ಲಿ ಸಿಎಎಯನ್ನು ಕಾರ್ಯರೂಪಕ್ಕೆ ತರುವುದಿಲ್ಲ: ಸಿಎಂ ಪಿಣರಾಯಿ ವಿಜಯನ್‌

ತಿರುವನಂತಪುರ: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯನ್ನು ಕೇರಳದಲ್ಲಿ ಕಾರ್ಯರೂಪಕ್ಕೆ ತರುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸ್ಪಷ್ಟಪಡಿಸಿದ್ದಾರೆ.

ವರ್ಚುವಲ್‌ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಪಿಣರಾಯಿ ವಿಜಯನ್‌ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭ, 'ಇದು ಆರಂಭದಿಂದಲೂ ಎಡ ಪಕ್ಷದ ಸರ್ಕಾರ ತೆಗೆದುಕೊಂಡಿರುವ ನಿಲುವು. ಕೇರಳದಲ್ಲಿ ಸಿಎಎ ಕಾರ್ಯರೂಪಕ್ಕೆ ತರುವುದಿಲ್ಲ' ಎಂದು ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

'ನಮ್ಮ ರಾಷ್ಟ್ರದಲ್ಲಿ ಧರ್ಮಗಳ ಆಧಾರದಲ್ಲಿ ಪೌರತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ. ಒಂದು ಧರ್ಮಕ್ಕೆ ಸೇರಿದ ಕಾರಣವನ್ನು ಮುಂದಿಟ್ಟುಕೊಂಡು ಪೌರತ್ವವನ್ನು ನಿರ್ಣಯಿಸಲು ಸಾಧ್ಯವಿಲ್ಲ. ಧರ್ಮಗಳಲ್ಲಿ ನಂಬಿಕೆ ಇಡುವುದು ಮತ್ತು ಇಡದೇ ಇರುವುದು ಪ್ರತಿಯೊಬ್ಬನ ಹಕ್ಕು' ಎಂದು ಪಿಣರಾಯಿ ವಿಜಯನ್‌ ಪ್ರತಿಪಾದಿಸಿದರು.

'ಧರ್ಮಗಳ ಆಧಾರದಲ್ಲಿ ಜನರನ್ನು ವಿಭಜಿಸಲು ಕೇಂದ್ರ ಸರ್ಕಾರ ಸಿಎಎಯನ್ನು ತಂದಿದೆ. ರಾಷ್ಟ್ರದೆಲ್ಲೆಡೆ ವ್ಯಕ್ತವಾಗುತ್ತಿರುವ ಪ್ರಬಲ ಪ್ರತಿಭಟನೆಗಳು ಸಿಎಎಗೆ ವಿರೋಧ ಇರುವುದಕ್ಕೆ ಸಾಕ್ಷಿ. ಇಂತಹ ವಿಚಾರಗಳಲ್ಲಿ ಎಡ ಪಕ್ಷಗಳ ನಿಲುವುದು ಎಂದಿಗೂ ಒಂದೇ ಆಗಿರಲಿದೆ. ನಮ್ಮ ನಿಲುವಿನಲ್ಲಿ ಸ್ಪಷ್ಟತೆ ಇದೆ. ರಾಜ್ಯದಲ್ಲಿ ಸಿಎಎಯನ್ನು ಕಾರ್ಯರೂಪಕ್ಕೆ ತರಲು ಸಿದ್ಧರಿಲ್ಲ' ಎಂದರು.

ನಮ್ಮ ನಿರ್ಧಾರದ ಕುರಿತು ಕೆಲವರು, ಕೇಂದ್ರ ಸರ್ಕಾರ ಜಾರಿಗೆ ತಂದ ಕಾಯ್ದೆಯನ್ನು ಒಂದು ರಾಜ್ಯ ಹೇಗೆ ಕಾರ್ಯರೂಪಕ್ಕೆ ತರದೆ ಇರಲು ಸಾಧ್ಯ ಎಂದೆಲ್ಲ ತಮಾಷೆ ಮಾಡಿದ್ದರು. ಅಂದು ಇದೇ ನಿರ್ಧಾರ ತೆಗೆದುಕೊಂಡಿದ್ದೆವು. ಇಂದು ಕೂಡ ಇದೇ ನಿರ್ಧಾರಕ್ಕೆ ಕಟಿಬದ್ಧರಾಗಿದ್ದೇವೆ. ನಾಳೆಯೂ ಇದೇ ನಿರ್ಧಾರವನ್ನು ತಳೆಯುತ್ತೇವೆ. ಕೇರಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕಾರ್ಯರೂಪಕ್ಕೆ ತರುವುದಿಲ್ಲ ಎಂದು ಸಿಎಂ ಪುನರುಚ್ಚರಿಸಿದ್ದಾಗಿ ಎಎನ್‌ಐ ವರದಿ ಮಾಡಿದೆ.


 ರಾಜ್ಯದಲ್ಲಿ ಇಂದಿನಿಂದ 4 ದಿನ ಭಾರೀ ಮಳೆ :

ರಾಜ್ಯದಲ್ಲಿ ಇಂದಿನಿಂದ 4 ದಿನ ಭಾರೀ ಮಳೆ :


ರಾಜ್ಯದಲ್ಲಿ ಇಂದಿನಿಂದ 4 ದಿನ ಭಾರೀ ಮಳೆ :

11 ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್' ಘೋಷಣೆ

ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಮುಂದಿನ ನಾಲ್ಕು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಶಾಹೀನ್ ಚಂಡಮಾರುತದ ಪರಿಣಾಮ ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ 4 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇಂದಿನಿಂದ ಅ,4 ರವರೆಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಮಂಡ್ಯ, ರಾಮನಗರ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಳ್ಳಾರಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು ,ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೊಡಗು, ಜಿಲ್ಲೆಗಳಲ್ಲಿ ಇಂದು ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 ಪೆಟ್ರೋಲ್ ಡೀಸೆಲ್ ಮೇಲೆ ಮತ್ತೆ 1.ರೂ ವರೆಗೆ ಬೆಲೆ ಏರಿಕೆ

ಪೆಟ್ರೋಲ್ ಡೀಸೆಲ್ ಮೇಲೆ ಮತ್ತೆ 1.ರೂ ವರೆಗೆ ಬೆಲೆ ಏರಿಕೆ

ಪೆಟ್ರೋಲ್ ಡೀಸೆಲ್ ಮೇಲೆ ಮತ್ತೆ 1.ರೂ ವರೆಗೆ ಬೆಲೆ ಏರಿಕೆ

ಬೆಂಗಳೂರು (ಅಕ್ಟೋಬರ್​ 01); ರಾಜ್ಯ ರಾಜಧಾನಿ ಬೆಂಗಳೂರು (Bengalore) ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಗರಿಷ್ಠ 1.ರೂ ವರೆಗೆ ಪೆಟ್ರೋಲ್ ಮತ್ತು ಡೀಸೆಲ್​ (Petrol-Diesel Price) ಮೇಲೆ ಬೆಲೆ ಏರಿಕೆ ಮಾಡಲಾಗಿದೆ. ಪರಿಣಾಮ ತೈಲ ಬೆಲೆ ದಿನದಿಂದ ದಿನಕ್ಕೆ ತುಟ್ಟಿಯಾಗುತ್ತಲೇ ಇದೆ. ನಿನ್ನೆ ಬೆಂಗಳೂರಿನಲ್ಲಿ 1 ಲೀಟರ್​ ಪೆಟ್ರೋಲ್ ಬೆಲೆ 104.92 ರೂ ಇತ್ತು. ಆದರೆ, ಇಂದು 26 ಪೈಸೆ ಏರಿಸಲಾಗಿದೆ. ಇನ್ನೂ ಡೀಸೆಲ್ ಮೇಲೆ 68 ಪೈಸೆ ಏರಿಸಿದ್ದು 1 ಲೀಟರ್​ ಡೀಸೆಲ್ ಅನ್ನು 95.38 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ದಾವಣಗೆರೆಯಲ್ಲಿ ಇಂದು ಪೆಟ್ರೋಲ್ ಬೆಲೆ 1.18 ರೂ.ಗರಿಷ್ಠ ಮಟ್ಟಕ್ಕೆ ಏರಿಸಲಾಗಿದ್ದು, 1 ಲೀಟರ್​ ಪೆಟ್ರೋಲ್ ಅನ್ನು 106.99 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದಲ್ಲದೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇಂದು ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ಆ ಕುರಿತ ವಿವರ ಇಲ್ಲಿದೆ.


ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ;

ಬಾಗಲಕೋಟೆ - 106.12 ರೂ. (22ಪೈಸೆ ಏರಿಕೆ)

ಬೆಂಗಳೂರು - 105.18 ರೂ. (26 ಪೈಸೆ ಏರಿಕೆ)

ಬೆಂಗಳೂರು ಗ್ರಾಮಾಂತರ -105.25ರೂ. (17 ಪೈಸೆ ಏರಿಕೆ)

ಬೆಳಗಾವಿ - 105.62 ರೂ. (95 ಪೈಸೆ ಏರಿಕೆ)

ಬಳ್ಳಾರಿ - 106.43 ರೂ. (55 ಪೈಸೆ ಏರಿಕೆ )

ಬೀದರ್ - 105.71 ರೂ. (32 ಪೈಸೆ ಏರಿಕೆ)

ಬಿಜಾಪುರ - 105.39 ರೂ. (64 ಪೈಸೆ ಏರಿಕೆ)

ಚಾಮರಾಜನಗರ - 105.31 ರೂ. (31 ಪೈಸೆ ಏರಿಕೆ)

ಚಿಕ್ಕಬಳ್ಳಾಪುರ - 105.66 ರೂ. (55 ಪೈಸೆ ಏರಿಕೆ)

ಚಿಕ್ಕಮಗಳೂರು - 105.71ರೂ. (69 ಪೈಸೆ ಇಳಿಕೆ)

ಚಿತ್ರದುರ್ಗ - 107.25 ರೂ. (01.7ರೂ ಏರಿಕೆ)

ದಕ್ಷಿಣ ಕನ್ನಡ - 104.24 ರೂ. (14 ಪೈಸೆ ಏರಿಕೆ)

ದಾವಣಗೆರೆ - 106.99 ರೂ. (1.18 ರೂ ಏರಿಕೆ)

ಧಾರವಾಡ - 105.46 ರೂ. (67 ಪೈಸೆ ಏರಿಕೆ)

ಗದಗ - 105.74 ರೂ. (23 ಪೈಸೆ ಏರಿಕೆ)

ಗುಲಬರ್ಗ - 104.89 ರೂ. (26 ಪೈಸೆ ಏರಿಕೆ)

ಹಾಸನ - 104.93 ರೂ. (26 ಪೈಸೆ ಏರಿಕೆ)

ಹಾವೇರಿ - 105.47 ರೂ. (27 ಪೈಸೆ ಇಳಿಕೆ)

ಕೊಡಗು - 106.39 ರೂ. (05 ಪೈಸೆ ಇಳಿಕೆ)

ಕೋಲಾರ - 104.86 ರೂ. (19 ಪೈಸೆ ಇಳಿಕೆ)

ಕೊಪ್ಪಳ- 106.03 ರೂ. (17 ಪೈಸೆ ಏರಿಕೆ)

ಮಂಡ್ಯ - 104.67 ರೂ. (04 ಪೈಸೆ ಇಳಿಕೆ)

ಮೈಸೂರು - 105.16 ರೂ. (61 ಪೈಸೆ ಏರಿಕೆ )

ರಾಯಚೂರು - 105.39 ರೂ. (32 ಪೈಸೆ ಏರಿಕೆ)

ರಾಮನಗರ - 105.93 ರೂ. (71 ಪೈಸೆ ಏರಿಕೆ)

ಶಿವಮೊಗ್ಗ - 106.66 ರೂ. (26 ಪೈಸೆ ಏರಿಕೆ)

ತುಮಕೂರು - 105.45 ರೂ. (06 ಪೈಸೆ ಇಳಿಕೆ)

ಉಡುಪಿ - 105.04 ರೂ. (45 ಪೈಸೆ ಏರಿಕೆ)

ಉತ್ತರಕನ್ನಡ - 105.63 ರೂ . (27 ಪೈಸೆ ಏರಿಕೆ)

ಯಾದಗಿರಿ - 105.63 ರೂ. (15 ಪೈಸೆ ಏರಿಕೆ ).


ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ - 96.27

ಬೆಂಗಳೂರು - 95.38

ಬೆಂಗಳೂರು ಗ್ರಾಮಾಂತರ : 95.45

ಬೆಳಗಾವಿ - 95.81

ಬಳ್ಳಾರಿ - 96.56

ಬೀದರ್ -95.89

ಬಿಜಾಪುರ - 95.60

ಚಾಮರಾಜನಗರ - 95.49

ಚಿಕ್ಕಬಳ್ಳಾಪುರ - 95.82

ಚಿಕ್ಕಮಗಳೂರು - 95.76

ಚಿತ್ರದುರ್ಗ - 97.15

ದಕ್ಷಿಣ ಕನ್ನಡ - 94.76

ದಾವಣಗೆರೆ -96.92

ಧಾರವಾಡ - 95.66

ಗದಗ - 95.92

ಗುಲಬರ್ಗ - 95.14

ಹಾಸನ - 95.04

ಹಾವೇರಿ - 95.67

ಕೊಡಗು - 96.37

ಕೋಲಾರ - 95.10

ಕೊಪ್ಪಳ- 96.20

ಮಂಡ್ಯ - 94.87

ಮೈಸೂರು -94.92

ರಾಯಚೂರು - 95.62

ರಾಮನಗರ - 96.07

ಶಿವಮೊಗ್ಗ - 96.66

ತುಮಕೂರು -95.62

ಉಡುಪಿ - 95.22

ಉತ್ತರಕನ್ನಡ - 95.82

ಯಾದಗಿರಿ - 95.82

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 99.36 ರೂ ಇದ್ದರೆ ಡೀಸೆಲ್​ ಬೆಲೆ 94.45 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅದರಂತೆ ಹೈದ್ರಾಬಾದ್​ನಲ್ಲಿ ಪೆಟ್ರೋಲ್​ ಬೆಲೆ 105.74 ರೂ ಆಗಿದ್ದರೆ, ಡೀಸೆಲ್​ ಬೆಲೆ 98.06 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ನೋಡ್ಡಾದಲ್ಲಿ ಒಂದು ಲೀಟರ್​ ಪೆಟ್ರೋಲ್ ಬೆಲೆ 101.64 ರೂ ಆಗಿದ್ದರೆ, ದೆಹಲಿಯಲ್ಲಿ 89.87 ರೂ ಮತ್ತು ಮಹಾರಾಷ್ಟ್ರದಲ್ಲಿ 107.71 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ರಾಜಸ್ಥಾನದ ಜೈಪುರದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 108.61 ರೂ ಇದೆ. ಇದು ದೇಶದಲ್ಲೇ ಅತ್ಯಂತ ಹೆಚ್ಚಿನ ಬೆಲೆ ಎಂದು ಗುರುತಿಸಿಕೊಂಡಿದೆ.

ಭಾರತದಲ್ಲಿ ಪೆಟ್ರೋಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 06:00 ಗಂಟೆಗೆ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜಾಗತಿಕ ತೈಲ ಬೆಲೆಯಲ್ಲಿ ಒಂದು ನಿಮಿಷದ ವ್ಯತ್ಯಾಸವನ್ನು ಇಂಧನ ಬಳಕೆದಾರರು ಮತ್ತು ವಿತರಕರಿಗೆ ರವಾನಿಸಬಹುದು ಎಂದು ಇದು ಖಚಿತಪಡಿಸುತ್ತದೆ. ಇಂಧನದ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಅನ್ನು ಒಳಗೊಂಡಿದೆ. ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.

ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟ ಬೆಲೆ ದ್ವಿಗುಣಗೊಳ್ಳುತ್ತದೆ. ವಿವಿಧ ಅಂಶಗಳು ಇಂಧನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ಇವುಗಳಲ್ಲಿ ರೂಪಾಯಿಗಳಿಂದ ಯುಎಸ್ ಡಾಲರ್ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ಸೂಚನೆಗಳು, ಇಂಧನದ ಬೇಡಿಕೆ ಇತ್ಯಾದಿಗಳು ಸೇರಿವೆ. ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಹೆಚ್ಚಾದಾಗ ಭಾರತದಲ್ಲೂ ಸಾಮಾನ್ಯವಾಗಿ ಬೆಲೆ ಏರಿಕೆಯಾಗುವುದು ವಾಡಿಕೆಯಾಗಿದೆ.

 ಸನ್ ರೈಸರ್ಸ್ ವಿರುದ್ಧ ಚೆನ್ನೈ ಜಯಭೇರಿ, ಪ್ಲೇ ಆಫ್ ಗೆ ತೇರ್ಗಡೆ.

ಸನ್ ರೈಸರ್ಸ್ ವಿರುದ್ಧ ಚೆನ್ನೈ ಜಯಭೇರಿ, ಪ್ಲೇ ಆಫ್ ಗೆ ತೇರ್ಗಡೆ.


ಸನ್ ರೈಸರ್ಸ್ ವಿರುದ್ಧ ಚೆನ್ನೈ ಜಯಭೇರಿ, ಪ್ಲೇ ಆಫ್ ಗೆ ತೇರ್ಗಡೆ.

ಶಾರ್ಜಾ, ಸೆ.30: ಆರಂಭಿಕ ಬ್ಯಾಟ್ಸ್ ಮನ್ ಗಳಾದ ಋತುರಾಜ್ ಗಾಯಕ್ವಾಡ್(45, 38 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ಎಫ್ ಡು ಪ್ಲೆಸಿಸ್(41, 36 ಎಸೆತ, 3 ಬೌಂಡರಿ, 2 ಸಿಕ್ಸರ್)ಮೊದಲ ವಿಕೆಟ್ ಗೆ ನಡೆಸಿದ 75 ರನ್ ಜೊತೆಯಾಟ ಹಾಗೂ ಅಂಬಟಿ ರಾಯುಡು(ಔಟಾಗದೆ 17) ಹಾಗೂ ನಾಯಕ ಧೋನಿಯವರ(ಔಟಾಗದೆ 14) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ ಟ್ವೆಂಟಿ-20 ಟೂರ್ನಿಯ 44ನೇ ಪಂದ್ಯದಲ್ಲಿ ಆರು ವಿಕೆಟ್ ಗಳ ಅಂತರದಿಂದ ಗೆಲುವು ದಾಖಲಿಸಿದೆ.

ಈ ಗೆಲುವಿನ ಮೂಲಕ ಚೆನ್ನೈ ತಂಡ 14ನೇ ಆವೃತ್ತಿಯ ಐಪಿಎಲ್ ನಲ್ಲಿ ಸೆಮಿ ಫೈನಲ್  ಆಗಿರುವ ಪ್ಲೇ ಆಫ್ ಹಂತಕ್ಕೆ ತೇರ್ಗಡೆಯಾದ ಮೊದಲ ತಂಡವೆಂಬ ಹಿರಿಮೆಗೆ ಪಾತ್ರವಾಯಿತು. ಚೆನ್ನೈ 11ನೇ ಬಾರಿ ಸೆಮಿ ಫೈನಲ್ ತಲುಪಿದೆ.

ಗುರುವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 135 ರನ್ ಗುರಿ ಪಡೆದ ಚೆನ್ನೈ 19.4 ಓವರ್ ಗಳಲ್ಲಿ 4  ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿ ಜಯಭೇರಿ ಬಾರಿಸಿತು.

ಹೈದರಾಬಾದ್ ಬೌಲಿಂಗ್ ವಿಭಾಗದಲ್ಲಿ ಜೇಸನ್ ಹೋಲ್ಡರ್(3-27)ಮೂರು ವಿಕೆಟ್ ಕಬಳಿಸಿದರು.


ಬೆಳ್ಳಂಬೆಳಗ್ಗೆ ಶೋಪಿಯಾನ್ ನಲ್ಲಿ ಎನ್'ಕೌಂಟರ್

ಬೆಳ್ಳಂಬೆಳಗ್ಗೆ ಶೋಪಿಯಾನ್ ನಲ್ಲಿ ಎನ್'ಕೌಂಟರ್


ಬೆಳ್ಳಂಬೆಳಗ್ಗೆ ಶೋಪಿಯಾನ್ ನಲ್ಲಿ ಎನ್'ಕೌಂಟರ್ 

ಶೋಪಿಯಾನ್ : ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ನ ರಖಾಮಾ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಎನ್ ಕೌಂಟರ್ (encounter) ಸಂಭವಿಸಿದೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರ ಪ್ರಕಾರ, ಈ ಕಾರ್ಯಾಚರಣೆಯಲ್ಲಿ ಒಬ್ಬ ಅಪರಿಚಿತ ಉಗ್ರನನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿದು ಬಂದಿದೆ.

ಪೊಲೀಸರು ಮತ್ತು ಭದ್ರತಾ ಪಡೆಗಳು ಕೈಗೊಳ್ಳುತ್ತಿರುವ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಎರಡು ದಿನಗಳ ಹಿಂದಷ್ಟೇ ಜಮ್ಮು ಕಾಶ್ಮೀರದಲ್ಲಿ ಓರ್ವ ಉಗ್ರನನ್ನು ಸೆರೆ ಹಿಡಿಯಲಾಗಿತ್ತು,ಮತ್ತೋರ್ವ ಉಗ್ರನನ್ನು ಭದ್ರತಾ ಪಡೆ ಹತ್ಯೆ ಮಾಡಿತ್ತು.


 ಪ್ರಮುಖ ನೇಮಕಾತಿ ಹಿಂಪಡೆಯಲು ಸಿಎಂ ಚನ್ನಿ ಒಪ್ಪಿಗೆ:ಅಧ್ಯಕ್ಷರಾಗಿ ನವಜೋತ್ ಸಿಧು ಮುಂದುವರಿಯುವ ಸಾಧ್ಯತೆ

ಪ್ರಮುಖ ನೇಮಕಾತಿ ಹಿಂಪಡೆಯಲು ಸಿಎಂ ಚನ್ನಿ ಒಪ್ಪಿಗೆ:ಅಧ್ಯಕ್ಷರಾಗಿ ನವಜೋತ್ ಸಿಧು ಮುಂದುವರಿಯುವ ಸಾಧ್ಯತೆ

 ಪ್ರಮುಖ ನೇಮಕಾತಿ ಹಿಂಪಡೆಯಲು ಸಿಎಂ ಚನ್ನಿ ಒಪ್ಪಿಗೆ:ಅಧ್ಯಕ್ಷರಾಗಿ ನವಜೋತ್ ಸಿಧು ಮುಂದುವರಿಯುವ ಸಾಧ್ಯತೆ

ಹೊಸದಿಲ್ಲಿ: ನವಜೋತ್ ಸಿಂಗ್ ಸಿಧು ಸದ್ಯಕ್ಕೆ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿ ಮುಂದುವರಿಯಬಹುದು ಎಂದು ಮೂಲಗಳು ತಿಳಿಸಿದ್ದು, ಮುಖ್ಯಮಂತ್ರಿ ಚರಣಜೀತ್ ಸಿಂಗ್ ಚನ್ನಿ  ಅವರು ಗುರುವಾರ ಸಿಧು ಅವರೊಂದಿಗೆ ನಡೆಸಿರುವ ಸಭೆಯಲ್ಲಿ ಪ್ರಮುಖ ನೇಮಕಾತಿಯನ್ನು ಹಿಂತೆಗೆದುಕೊಳ್ಳಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಸಿಧು ಮಂಗಳವಾರ ದಿಢೀರನೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮೊದಲ ಬಾರಿ ಸಿಧು-ಚನ್ನಿ ಭೇಟಿ ನಡೆದಿದೆ.

ಕೆಲವು ಸಚಿವರು, ಪೊಲೀಸ್ ಮುಖ್ಯಸ್ಥರು ಹಾಗೂ  ಅಟಾರ್ನಿ ಜನರಲ್ ಸೇರಿದಂತೆ ಪ್ರಮುಖ ನೇಮಕಾತಿಗಳ ಬಗ್ಗೆ  ಸಿಧು ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ಚನ್ನಿ ತಾನು ಅಂಟಿಕೊಂಡಿರುವ ಕೆಲವು ಅಂಶಗಳಲ್ಲಿ ಒಂದನ್ನು ಸಡಿಲಿಸುವ ಸಾಧ್ಯತೆ ಇದೆ. ಚನ್ನಿ ಅವರು ಇಕ್ಬಾಲ್ ಪ್ರೀತ್ ಸಿಂಗ್ ಸಹೋತಾ ಅವರನ್ನು ಪಂಜಾಬ್ ಪೊಲೀಸ್ ಮುಖ್ಯಸ್ಥ  ಹುದ್ದೆಯಿಂದ  ಕೈಬಿಡಬಹುದು. ಸಹೋತಾ ಅವರು ವಿವಾದಾತ್ಮಕ ಆಯ್ಕೆಯಾಗಿದ್ದರು. ಏಕೆಂದರೆ ಅವರು 2015 ರಲ್ಲಿ ಅಕಾಲಿ ಸರಕಾರದಿಂದ ರಚಿಸಲ್ಪಟ್ಟ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿದ್ದರು ಹಾಗೂ  ಗುರು ಗ್ರಂಥ ಸಾಹಿಬ್‌ ಅನ್ನು ಅವಹೇಳನ ಮಾಡಿದವರ ವಿರುದ್ಧ ಪ್ರತಿಭಟಿಸಿದವರ ಮೇಲೆ ಗುಂಡಿನ ದಾಳಿ ಅಥವಾ ಪೊಲೀಸ್ ಗುಂಡಿನ ದಾಳಿಯನ್ನು ತನಿಖೆ ಮಾಡಿದ್ದರು.

 ಅಕ್ಟೋಬರ್ 2ಕ್ಕೆ ನೂತನ ವಿಜಯನಗರ ಜಿಲ್ಲೆ ಉದ್ಘಾಟನೆ: ಸಚಿವ ಆನಂದ್ ಸಿಂಗ್

ಅಕ್ಟೋಬರ್ 2ಕ್ಕೆ ನೂತನ ವಿಜಯನಗರ ಜಿಲ್ಲೆ ಉದ್ಘಾಟನೆ: ಸಚಿವ ಆನಂದ್ ಸಿಂಗ್

 ಅಕ್ಟೋಬರ್ 2ಕ್ಕೆ ನೂತನ ವಿಜಯನಗರ ಜಿಲ್ಲೆ ಉದ್ಘಾಟನೆ: ಸಚಿವ ಆನಂದ್ ಸಿಂಗ್

ವಿಜಯನಗರ: ರಾಜ್ಯದ ಮೂವತ್ತೊಂದನೆ ನೂತನ ವಿಜಯನಗರ ಜಿಲ್ಲೆಯನ್ನು ಅಕ್ಟೋಬರ್ 2ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿದ್ಯುಕ್ತವಾಗಿ ಉದ್ಘಾಟಿಸಲಿದ್ದಾರೆ. ಕೋವಿಡ್ ಮಾರ್ಗಸೂಚಿ ಅನುಸರಿಸಿ ಜಿಲ್ಲೆ ಉದ್ಘಾಟನೆಯನ್ನು ಅದ್ದೂರಿಯಾಗಿ ನೆರವೇರಿಸಲಾಗುವುದು ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.

ಗುರುವಾರ ಇಲ್ಲಿನ ಹೊಸಪೇಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಘಾಟನಾ ಕಾರ್ಯಕ್ರಮ ನಡೆಯಲಿರುವ ನಗರದ ಕ್ರೀಡಾಂಗಣದ ಸುತ್ತ ಎಂಟು ಬೃಹತ್ ಎಲ್‍ಇಡಿ ಪರದೆ ಅಳವಡಿಸಲಾಗುವುದು. ನಗರದ ಪ್ರಮುಖ ಮೈದಾನಗಳಲ್ಲೂ ಎಲ್‍ಇಡಿ ವ್ಯವಸ್ಥೆ ಮಾಡಲಾಗುತ್ತದೆ. ಜಿಲ್ಲೆಯ ಎಲ್ಲ್ಲ ತಾಲೂಕುಗಳಲ್ಲಿ ಎಲ್‍ಇಡಿ ಪರದೆ, ಆಸನ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಾಮಾಜಿಕ ಜಾಲತಾಣಗಳಲ್ಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಗುವುದು. ಅ.2ರ ಸಂಜೆ 4ಕ್ಕೆ ನಗರದ ವಡಕರಾಯ ದೇವಸ್ಥಾನದಿಂದ ಕಾರ್ಯಕ್ರಮ ನಡೆಯಲಿರುವ ಕ್ರೀಡಾಂಗಣದ ವರೆಗೆ ಕಲಾ ತಂಡಗಳ ಮೆರವಣಿಗೆ ನಡೆಯಲಿದೆ. ಸ್ಥಳೀಯ ಮತ್ತು ರಾಜ್ಯದ ನಾನಾ ಭಾಗಗಳ 80 ಕಲಾ ತಂಡಗಳು ಇದರಲ್ಲಿ ಪಾಲ್ಗೊಳ್ಳಲಿವೆ ಎಂದು ಆನಂದ್ ಸಿಂಗ್ ವಿವರ ನೀಡಿದರು.

ಅ.2ರ ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೂತನ ಜಿಲ್ಲೆ ಉದ್ಘಾಟಿಸಲಿದ್ದು, ನೂತನ ಜಿಲ್ಲೆ ರಚನೆಗೆ ಕಾರಣಕರ್ತರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮದಿನ ಆಚರಿಸಲಾಗುವುದು. ಇದೇ ವೇಳೆ 350 ಕೋಟಿ ರೂ.ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.

ಅ.3ರ ಸಂಜೆ 4ಕ್ಕೆ ತಾಲೂಕಿನ ಗಾಳೆಮ್ಮನ ಗುಡಿಯಿಂದ ಎತ್ತಿನ ಬಂಡಿಗಳ ಸ್ಪರ್ಧೆ ನಡೆಯಲಿದೆ. ಕೃಷಿ ಸಚಿವ ಬಿ.ಸಿ.ಪಾಟೀಲ್ ಚಾಲನೆ ನೀಡಲಿದ್ದು, ಅತ್ಯುತ್ತಮ ಎತ್ತಿನ ಬಂಡಿಗಳಿಗೆ ಬಹುಮಾನ ನೀಡಲಾಗುವುದು. ಸಂಜೆ 6ಕ್ಕೆ ನಡೆಯಲಿರುವ ಸಮಾರೋಪದಲ್ಲಿ ಕೇಂದ್ರ ಕೌಶಲ ಅಬಿವೃದ್ಧಿ, ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ್ ಖೂಬಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ವಿದ್ಯಾರಣ್ಯರ ಹೆಸರು: ನೂತನ ಜಿಲ್ಲೆ ಉದ್ಘಾಟನಾ ಸಮಾರಂಭದ ವೇದಿಕೆಗೆ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾದ ಗುರು ವಿದ್ಯಾರಣ್ಯರ ಹೆಸರಿಡಲಾಗಿದೆ. ಮುಖ್ಯ ದ್ವಾರಗಳಿಗೆ ಹಕ್ಕ–ಬುಕ್ಕರ ಹೆಸರು ಇರಿಸಿದ್ದು, ವೇದಿಕೆಯ ಎರಡೂ ಬದಿಯಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ವಿವಿಧ ಸ್ವಸಹಾಯ ಸಂಘಗಳ ಮಳಿಗೆಗಳಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

ನೂತನ ವಿಜಯನಗರ ಜಿಲ್ಲೆ ಉದ್ಘಾಟನಾ ಸಮಾರಂಭ ನಿಮಿತ್ತ ಎರಡು ದಿನ ನಡೆಯಲಿರುವ ಕಾರ್ಯಕ್ರಮಕ್ಕೆ ಒಟ್ಟು 5 ಕೋಟಿ ರೂ. ವೆಚ್ಚವಾಗಲಿದ್ದು, ನಾಲ್ಕು ಕೋಟಿ ರೂ.ಗಳನ್ನು ರಾಜ್ಯ ಸರಕಾರವು, ಉಳಿದ ಹಣವನ್ನು ಸಂಘ-ಸಂಸ್ಥೆಗಳು, ಸಿಎಸ್‍ಆರ್ ಅಡಿಯಲ್ಲಿ ನೆರವು ಪಡೆದುಕೊಳ್ಳಲಾಗುವುದು. ಎರಡು ಸಾವಿರ ಮಂದಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗುವುದು. ಗಣ್ಯರು ಮತ್ತು ಸಾರ್ವಜನಿಕರಿಗೆ ಪಾಸ್ ವಿತರಣೆ ಮಾಡಲಾಗುವುದು ಎಂದು ವಿಶೇಷ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್ ತಿಳಿಸಿದರು.

 ಮೂರು ವರ್ಷಗಳ ಡಿಪ್ಲೊಮಾ ಶಿಕ್ಷಣ ಪಿಯುಸಿಗೆ ಸಮ: ರಾಜ್ಯ ಸರಕಾರ ಆದೇಶ

ಮೂರು ವರ್ಷಗಳ ಡಿಪ್ಲೊಮಾ ಶಿಕ್ಷಣ ಪಿಯುಸಿಗೆ ಸಮ: ರಾಜ್ಯ ಸರಕಾರ ಆದೇಶ


 ಮೂರು ವರ್ಷಗಳ ಡಿಪ್ಲೊಮಾ ಶಿಕ್ಷಣ ಪಿಯುಸಿಗೆ ಸಮ: ರಾಜ್ಯ ಸರಕಾರ ಆದೇಶ

ಬೆಂಗಳೂರು: ಮೂರು ವರ್ಷಗಳ ಡಿಪ್ಲೊಮಾ ಕೋರ್ಸ್ ಅನ್ನು ಪಿಯುಸಿ ವಿದ್ಯಾರ್ಹತೆಗೆ ತತ್ಸಮಾನವೆಂದು ರಾಜ್ಯ ಸರಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ನೇರ ನೇಮಕಾತಿ ಅಥವಾ ಅನುಕಂಪದ ಆಧಾರದ ಮೇಲೆ ನೇಮಕಾತಿ ಹೊಂದಲು ಮತ್ತು ಉನ್ನತ ಶಿಕ್ಷಣ ಪಡೆಯಲು ತಾಂತ್ರಿಕ ಶಿಕ್ಷಣ ಇಲಾಖೆಯ ಮೂರು ವರ್ಷಗಳ ಡಿಪ್ಲೊಮಾ ಶಿಕ್ಷಣವನ್ನು ಪಿಯುಸಿಗೆ ಸಮ ಎಂದು ಸರಕಾರ ಘೋಷಿಸಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಷಯದಲ್ಲಿ ಗೊಂದಲ ಇದ್ದ ಕಾರಣ ತಾನು ಹಲವು ಸಭೆಗಳನ್ನು ಮಾಡಿದ್ದು, ಇದೀಗ ಈ ತೀರ್ಮಾನ ಮಾಡಲಾಗಿದೆ. 2015ಕ್ಕಿಂತ ಹಿಂದಿನ ವರ್ಷಗಳಲ್ಲಿ ಡಿಪ್ಲೊಮಾ ಉತ್ತೀರ್ಣರಾದ ವಿದ್ಯಾರ್ಥಿಗಳು ಕೆಪಿಎಸ್ಸಿ ನಡೆಸುವ ಇಲಾಖಾ ಪರೀಕ್ಷೆಗಳ ಜತೆಗೆ ಕನ್ನಡ ಭಾಷೆ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದನ್ನು ಕಡ್ಡಾಯ ಮಾಡಲಾಗಿದೆ ಎಂದು ಅಶ್ವತ್ಥ ನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

 ಸ್ಟಾರ್ ಡ್ರ್ಯಾಗ್-ಫ್ಲಿಕರ್ ರೂಪಿಂದರ್ ಪಾಲ್ ಸಿಂಗ್ ಅಂತಾರಾಷ್ಟ್ರೀಯ ಹಾಕಿಗೆ ವಿದಾಯ

ಸ್ಟಾರ್ ಡ್ರ್ಯಾಗ್-ಫ್ಲಿಕರ್ ರೂಪಿಂದರ್ ಪಾಲ್ ಸಿಂಗ್ ಅಂತಾರಾಷ್ಟ್ರೀಯ ಹಾಕಿಗೆ ವಿದಾಯ


 ಸ್ಟಾರ್ ಡ್ರ್ಯಾಗ್-ಫ್ಲಿಕರ್ ರೂಪಿಂದರ್ ಪಾಲ್ ಸಿಂಗ್ ಅಂತಾರಾಷ್ಟ್ರೀಯ ಹಾಕಿಗೆ ವಿದಾಯ

ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್ ಅಭಿಯಾನದಲ್ಲಿ ಭಾರತೀಯ ಹಾಕಿ ತಂಡ ಐತಿಹಾಸಿಕ ಕಂಚು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡ್ರ್ಯಾಗ್-ಫ್ಲಿಕರ್ ರೂಪಿಂದರ್ ಪಾಲ್ ಸಿಂಗ್ ಗುರುವಾರ ತಕ್ಷಣದಿಂದ ಜಾರಿಗೆ ಬರುವಂತೆ   ಅಂತರ್ ರಾಷ್ಟ್ರೀಯ ಪಂದ್ಯದಿಂದ ನಿವೃತ್ತಿಯನ್ನು  ಘೋಷಿಸಿದರು. 'ಯುವಕರಿಗೆ ದಾರಿ ಮಾಡಿಕೊಡಲು' ನಿವೃತ್ತಿ ನಿರ್ಧಾರ ಮಾಡಿದ್ದಾಗಿ ತಿಳಿಸಿದ್ದಾರೆ.

30 ರ ಹರೆಯದ ಸಿಂಗ್  ದೇಶದ ಅತ್ಯುತ್ತಮ ಡ್ರ್ಯಾಗ್-ಫ್ಲಿಕರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದರು. 223 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

'ಬಾಬ್' ಎಂದು ಖ್ಯಾತರಾಗಿರುವ ರೂಪಿಂದರ್, ಟೋಕಿಯೊದಲ್ಲಿ ನಡೆದ  ಒಲಿಂಪಿಕ್ಸ್ ವೇಳೆ ಭಾರತದ ಕಂಚಿನ ಪದಕ ವಿಜೇತ ಅಭಿಯಾನದ ಸಂದರ್ಭದಲ್ಲಿ ಜರ್ಮನಿ ವಿರುದ್ಧದ ಮೂರನೇ ಸ್ಥಾನಕ್ಕಾಗಿ ನಡೆದಿದ್ದ ಪಂದ್ಯದಲ್ಲಿ ಪೆನಾಲ್ಟಿ ಸ್ಟ್ರೋಕ್ ಸೇರಿದಂತೆ ನಾಲ್ಕು ನಿರ್ಣಾಯಕ ಗೋಲುಗಳನ್ನು ಗಳಿಸಿದ್ದರು. ಅವರ ಫಿಟ್‌ನೆಸ್ ಹಾಗೂ  ಫಾರ್ಮ್‌ನ ಪ್ರಕಾರ, ಅವರು ಹಾಕಿ ಕ್ರೀಡೆಯಲ್ಲಿ ಇನ್ನೂ ಕೆಲವು ವರ್ಷ ಆಡಬಹುದಿತ್ತು. ಆದಾಗ್ಯೂ ಅವರ  ಈ ನಿರ್ಧಾರವು ಆಶ್ಚರ್ಯ ವುಂಟು ಮಾಡಿದೆ.

 ಕನ್ನಡ ಕಿರುತೆರೆ ನಟಿ ಸೌಜನ್ಯಾ ಆತ್ಮಹತ್ಯೆ

ಕನ್ನಡ ಕಿರುತೆರೆ ನಟಿ ಸೌಜನ್ಯಾ ಆತ್ಮಹತ್ಯೆ


 ಕನ್ನಡ ಕಿರುತೆರೆ ನಟಿ ಸೌಜನ್ಯಾ ಆತ್ಮಹತ್ಯೆ

ಬೆಂಗಳೂರು: ನಟಿ ಸೌಜನ್ಯಾ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ಕುಂಬಳಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ದೊಡ್ಡಬೆಲೆ ಗ್ರಾಮದ ಅಪಾರ್ಟ್‌ಮೆಂಟ್ ಕೊಠಡಿವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಆತ್ಮಹತ್ಯೆಗೂ ಮುನ್ನ, ಸೌಜನ್ಯಾ ಇಂಗ್ಲಿಷ್‌ನಲ್ಲಿ ಬರೆದಿರುವ 4 ಪುಟದ ಡೆತ್‌ನೋಟ್‌ ಪತ್ತೆಯಾಗಿದೆ. ಇದರಲ್ಲಿ ಅಮ್ಮ ನನ್ನನ್ನು ಕ್ಷಮಿಸಿ. ನಾನು, ನಿಮ್ಮಿಬ್ಬರನ್ನೂ ತುಂಬಾ ಪ್ರೀತಿಸುವೆ. ಸದ್ಯ ನನ್ನ ಮನಸ್ಥಿತಿ ಸರಿ ಇಲ್ಲ. ಅನಾರೋಗ್ಯ ನನ್ನನ್ನು ತೀವ್ರವಾಗಿ ಕಾಡುತ್ತಿದೆ. ನಾನು ಸಾವಿನ ಮನೆಗೆ ಹೋಗುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.

ಇದರಲ್ಲಿ ಸ್ನೇಹಿತರು ಮತ್ತು ಸಹೋದರರ ಹೆಸರನ್ನೂ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಸೌಜನ್ಯಾ ಮೂಲತಃ ಕೊಡಗು ಜಿಲ್ಲೆಯ ಕುಶಾಲನಗರ ಮೂಲದವರಾಗಿದ್ದಾರೆ. 

ಧಾರಾವಾಹಿಗಳು ಹಾಗೂ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದರು. ಸದ್ಯಕ್ಕೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಕುಂಬಳಗೂಡು ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

 "ಬಾಂಬೆ ಹೈಕೋರ್ಟಿನ 'ಚರ್ಮದಿಂದ ಚರ್ಮಕ್ಕೆ ಸಂಪರ್ಕ' ತೀರ್ಪು ಇತರ ಪೋಕ್ಸೋ ಕೇಸುಗಳ ಮೇಲೆ ವಿನಾಶಕಾರಿ ಪರಿಣಾಮ ಬೀರಬಹುದು"

"ಬಾಂಬೆ ಹೈಕೋರ್ಟಿನ 'ಚರ್ಮದಿಂದ ಚರ್ಮಕ್ಕೆ ಸಂಪರ್ಕ' ತೀರ್ಪು ಇತರ ಪೋಕ್ಸೋ ಕೇಸುಗಳ ಮೇಲೆ ವಿನಾಶಕಾರಿ ಪರಿಣಾಮ ಬೀರಬಹುದು"


 "ಬಾಂಬೆ ಹೈಕೋರ್ಟಿನ 'ಚರ್ಮದಿಂದ ಚರ್ಮಕ್ಕೆ ಸಂಪರ್ಕ' ತೀರ್ಪು ಇತರ ಪೋಕ್ಸೋ ಕೇಸುಗಳ ಮೇಲೆ ವಿನಾಶಕಾರಿ ಪರಿಣಾಮ ಬೀರಬಹುದು"

ಹೊಸದಿಲ್ಲಿ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಕೆಲ ಸಮಯದ ಹಿಂದೆ ನೀಡಿದ್ದ "ಚರ್ಮದಿಂದ ಚರ್ಮಕ್ಕೆ ಸಂಪರ್ಕ" ತೀರ್ಪು  ಕೆಳಗಿನ ಹಂತಗಳ ನ್ಯಾಯಾಲಯಗಳ ಮುಂದಿರುವ ಬಾಕಿ ಪ್ರಕರಣಗಳ ಮೇಲೆ "ವಿನಾಶಕಾರಿ ಪರಿಣಾಮ" ಬೀರಬಹುದು ಎಂದು ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಬುಧವಾರ ಸುಪ್ರೀಂ ಕೋರ್ಟಿಗೆ ತಿಳಿಸಿದ್ದಾರೆ.

ಬಟ್ಟೆ ಬಿಚ್ಚದೆ ಅಪ್ರಾಪ್ತೆಯೊಬ್ಬಳ ಎದೆ ಸವರುವುದು  ಪೋಕ್ಸೋ ಅಡಿ ಲೈಂಗಿಕ ದೌರ್ಜನ್ಯ ಎಂದು ಪರಿಗಣಿತವಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್‍ನ ನಾಗ್ಪುರ್ ಪೀಠ ಜನವರಿಯಲ್ಲಿ ಹೇಳಿತ್ತಲ್ಲದೆ, ಈ ಕೃತ್ಯ ಐಪಿಸಿಯ ಸೆಕ್ಷನ್ 354 ಅಡಿಯಲ್ಲಿ ಅಪರಾಧವಾಗುತ್ತದೆ ಎಂದು ಹೇಳಿತ್ತು.

ಹನ್ನೆರಡು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ  39 ವರ್ಷದ ವ್ಯಕ್ತಿಯೊಬ್ಬನನ್ನು ತಪ್ಪಿತಸ್ಥ ಎಂದು  ತೀರ್ಪು ನೀಡಿದ್ದ ಸೆಷನ್ಸ್ ನ್ಯಾಯಾಲಯದ ಆದೇಶದಲ್ಲಿ ಮಾರ್ಪಾಟು ತಂದು ಹೈಕೋರ್ಟ್ ಆದೇಶ ಹೊರಡಿಸಿತ್ತು.

ಬಾಂಬೆ ಹೈಕೋರ್ಟ್ ಆದೇಶವನ್ನು ಹಿಂತೆಗೆದುಕೊಳ್ಳಬೇಕೆಂದು ವೇಣುಗೋಪಾಲ್ ಸುಪ್ರೀಂ ಕೋರ್ಟ್ ಅನ್ನು ಆಗ್ರಹಿಸಿದರು. ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಮಹಾರಾಷ್ಟ್ರ ಸರಕಾರವು ಬಾಂಬೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಅಪೀಲು ಸಲ್ಲಿಸಿದ್ದವು.

"ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುವ ಅಪಾಯ ಹೆಚ್ಚು ಎದುರಿಸುತ್ತಾರೆ. ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದ ಮಕ್ಕಳ ರಕ್ಷಣೆಗಿರುವ ಪೋಕ್ಸೋ ಕಾಯಿದೆಯ ಮಹತ್ವವನ್ನು ಅರಿಯಲು ಆ ತೀರ್ಪು ನೀಡಿದ ನ್ಯಾಯಾಧೀಶರಿಗೆ ಸಂವೇದಿತನದ ಕೊರತೆಯಿದೆ" ಎಂದು ಅವರು ಹೇಳಿದರು.


 ಮುಂಬೈ: 29 ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಕೊರೋನ ಸೋಂಕು

ಮುಂಬೈ: 29 ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಕೊರೋನ ಸೋಂಕು


 ಮುಂಬೈ: 29 ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಕೊರೋನ ಸೋಂಕು

ಮುಂಬೈ: ಮಹಾರಾಷ್ಟ್ರದ ಮುಂಬೈನ ಸರಕಾರಿ ಸ್ವಾಮ್ಯದ ಕಿಂಗ್ ಎಡ್ವರ್ಡ್ ಮೆಮೋರಿಯಲ್ (ಕೆಇಎಂ) ಆಸ್ಪತ್ರೆಯ ಕನಿಷ್ಠ 29 ವಿದ್ಯಾರ್ಥಿಗಳು ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ. ಅವರಲ್ಲಿ 27 ವಿದ್ಯಾರ್ಥಿಗಳಿಗೆ ರೋಗದ ವಿರುದ್ಧ ಸಂಪೂರ್ಣ ಲಸಿಕೆ ಹಾಕಲಾಗಿದೆ.

ಸೋಂಕಿತ ವಿದ್ಯಾರ್ಥಿಗಳಲ್ಲಿ 23 ಮಂದಿ ಎಂಬಿಬಿಎಸ್ ಎರಡನೇ ವರ್ಷದಲ್ಲಿದ್ದರೆ, ಆರು ವಿದ್ಯಾರ್ಥಿಗಳು ಮೊದಲ ವರ್ಷದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರು ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ನಗರದ ಸೆವೆನ್ ಹಿಲ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇತರ ವಿದ್ಯಾರ್ಥಿಗಳನ್ನು ಕ್ವಾರಂಟೈನ್ ಮಾಡಲು ತಿಳಿಸಲಾಗಿದೆ.

ಕಾಲೇಜಿನಿಂದ ಒಟ್ಟು 1,100 ವಿದ್ಯಾರ್ಥಿಗಳು ಎಂಬಿಬಿಎಸ್ ಕೋರ್ಸ್ ಕಲಿಯುತ್ತಿದ್ದಾರೆ. ಪರೀಕ್ಷೆಗೆ ಒಳಪಟ್ಟ ಎಲ್ಲ 29 ವಿದ್ಯಾರ್ಥಿಗಳು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಕೆಇಎಂ ಆಸ್ಪತ್ರೆಯ ಡೀನ್ ಡಾ.ಹೇಮಂತ್ ದೇಶಮುಖ್ ತಿಳಿಸಿದ್ದಾರೆ.


 ಚಾಮರಾಜನಗರ: 4 ಕೆ.ಜಿ. ಗೂ ಅಧಿಕ ಪ್ರಮಾಣದ ಗಾಂಜಾ ವಶ, ಆರೋಪಿ ಸೆರೆ

ಚಾಮರಾಜನಗರ: 4 ಕೆ.ಜಿ. ಗೂ ಅಧಿಕ ಪ್ರಮಾಣದ ಗಾಂಜಾ ವಶ, ಆರೋಪಿ ಸೆರೆ

 ಚಾಮರಾಜನಗರ: 4 ಕೆ.ಜಿ. ಗೂ ಅಧಿಕ ಪ್ರಮಾಣದ ಗಾಂಜಾ ವಶ, ಆರೋಪಿ ಸೆರೆ

ಚಾಮರಾಜನಗರ : ಗಾಂಜಾ ಸಂಗ್ರಹಣೆ ಮಾಡಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ, 4 ಕೆ.ಜಿ.ಗೂ ಅಧಿಕ ಪ್ರಮಾಣದ ಗಾಂಜಾ ವಶಪಡಿಸಿ ಕೊಳ್ಳುವಲ್ಲಿ ಚಾಮರಾಜನಗರ ಜಿಲ್ಲೆಯ ಅಬಕಾರಿ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪುಷ್ಪಾಪುರ ಗ್ರಾಮದ ಕಬ್ಬಾಲ (65) ಬಂಧಿತ ಆರೋಪಿಯಾಗಿದ್ದು, ಈತ ಮಾರಾಟ ಮಾಡುವ ಉದ್ದೇಶದಿಂದ ಮನೆಯಲ್ಲಿ ಗಾಂಜಾ ಸಂಗ್ರಹಣೆ ಮಾಡಿರುವುದಾಗಿ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು.

ಮಾಹಿತಿಯನ್ವಯ ಅಬಕಾರಿ ಜಂಟಿ ಆಯುಕ್ತ ಮಾದೇಶ್, ಉಪಾಯುಕ್ತ ಮುರಳಿ ಅವರ ಸೂಚನೆ ಮೇರೆಗೆ ಅಬಕಾರಿ ಡಿವೈಎಸ್ಪಿ ಮೋಹನ್‍ ಕುಮಾರ್ ಅವರ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ನಂದಿನಿ ಮತ್ತು ತಂಡ ಗುರುವಾರ ದಾಳಿ ನಡೆಸಿ ಆರೋಪಿ ಹಾಗು ಗಾಂಜಾವನ್ನು ವಶಪಡಿಸಿಕೊಂಡು ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಾಳಿಯಲ್ಲಿ ಅಬಕಾರಿ ಇಲಾಖೆಯ ಇನ್ಸ್ ಪೆಕ್ಟರ್ ಮೀನಾ, ಮಣಿಕಂಠ, ಮಹೇಂದ್ರ, ಸೋಮಣ್ಣ, ವೀರತಪ್ಪ, ಸಿದ್ಧಯ್ಯ ಇನ್ನಿತರರು ಹಾಜರಿದ್ದರು.

 ಬಂಟ್ವಾಳ: ನೀರು ಎಂದು ಪೆಟ್ರೋಲ್ ಕುಡಿದು ಅಸ್ವಸ್ಥಗೊಂಡಿದ್ದ ಮಹಿಳೆ ಮೃತ್ಯು

ಬಂಟ್ವಾಳ: ನೀರು ಎಂದು ಪೆಟ್ರೋಲ್ ಕುಡಿದು ಅಸ್ವಸ್ಥಗೊಂಡಿದ್ದ ಮಹಿಳೆ ಮೃತ್ಯು


 ಬಂಟ್ವಾಳ: ನೀರು ಎಂದು ಪೆಟ್ರೋಲ್ ಕುಡಿದು ಅಸ್ವಸ್ಥಗೊಂಡಿದ್ದ ಮಹಿಳೆ ಮೃತ್ಯು

ಬಂಟ್ವಾಳ: ನೀರು ಎಂದು ಭಾವಿಸಿ ಪೆಟ್ರೋಲ್ ಕುಡಿದು ಅಸ್ವಸ್ಥಗೊಂಡಿದ್ದ ವೃದ್ಧೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ತಾಲೂಕಿನ ಪೆರ್ನೆ ಸಂಪದಕೋಡಿ ಎಂಬಲ್ಲಿ ನಡೆದಿದೆ.

ಬಂಟ್ವಾಳ ನಿವಾಸಿ ಪದ್ಮಾವತಿ (79) ಮೃತ ಮಹಿಳೆ. ಬಂಟ್ವಾಳದಿಂದ ಪೆರ್ನೆಯಲ್ಲಿರುವ ತನ್ನ ಮಗಳ ಮನೆಗೆ ತೆರಳಿದ್ದ ಅವರು ಹುಲ್ಲು ಕತ್ತರಿಸುವ ಯಂತ್ರದ ಬಳಕೆಯ ಉದ್ದೇಶದಿಂದ ಬಾಟಲಿಯಲ್ಲಿ ತಂದಿರಿಸಿದ್ದ ಪೆಟ್ರೋಲನ್ನು ನೀರು ಎಂದು ಭಾವಿಸಿ ಕುಡಿದು ಅಸ್ವಸ್ಥಗೊಂಡಿದ್ದರು ಎನ್ನಲಾಗಿದೆ. ಅವರು ದೃಷ್ಟಿ ದೋಷ ಹೊಂದಿದ್ದರು. ಸೆ. 26ರಂದು ಈ ಘಟನೆ ನಡೆದಿದ್ದು ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೆ.29ರಂದು ಮೃತಪಟ್ಟಿದ್ದಾರೆ.

ಮೃತರ ಅಳಿಯ ಉಮಾನಾಥ್ ನೀಡಿದ ದೂರಿನಂತೆ ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Wednesday, 29 September 2021

ಮೇಘಾಲಯ:  ಮಧ್ಯರಾತ್ರಿ ನದಿಗೆ ಬಿದ್ದ ಬಸ್, ನಾಲ್ವರು ಪ್ರಯಾಣಿಕರು ಸಾವು,   ಗಾಯಗೊಂಡವರು ಆಸ್ಪತ್ರೆಗೆ ದಾಖಲು

ಮೇಘಾಲಯ: ಮಧ್ಯರಾತ್ರಿ ನದಿಗೆ ಬಿದ್ದ ಬಸ್, ನಾಲ್ವರು ಪ್ರಯಾಣಿಕರು ಸಾವು, ಗಾಯಗೊಂಡವರು ಆಸ್ಪತ್ರೆಗೆ ದಾಖಲು


ಮೇಘಾಲಯ:
ಮಧ್ಯರಾತ್ರಿ ನದಿಗೆ ಬಿದ್ದ ಬಸ್, ನಾಲ್ವರು ಪ್ರಯಾಣಿಕರು ಸಾವು, 
ಗಾಯಗೊಂಡವರು ಆಸ್ಪತ್ರೆಗೆ ದಾಖಲು

ಶಿಲ್ಲಾಂಗ್: ಮೇಘಾಲಯದ ಶಿಲ್ಲಾಂಗ್​​ನ ನೊಂಗ್ಚ್ರಮ್ ಎಂಬಲ್ಲಿ ಬಸ್​​ ರಿಂಗ್ಡಿ ನದಿಗೆ ಬಿದ್ದು ನಾಲ್ವರು ಪ್ರಯಾಣಿಕರು ಮೃತಪಟ್ಟ ದುರ್ಘಟನೆ ನಡೆದಿದೆ. ಈ ಬಸ್ ನಿನ್ನೆ ರಾತ್ರಿ​ ತುರಾದಿಂದ ಶಿಲ್ಲಾಂಗ್​​ಗೆ ಹೋಗುತ್ತಿತ್ತು..ಇದರಲ್ಲಿ ಸುಮಾರು 21 ಮಂದಿ ಪ್ರಯಾಣಿಕರು ಇದ್ದರು. ಮಧ್ಯರಾತ್ತಿ 12 ಗಂಟೆಹೊತ್ತಿಗೆ ನೊಂಗ್ಚ್ರಮ್ ಬಳಿ ರಿಂಗ್ಡಿ ನದಿಗೆ ಬಿದ್ದಿದೆ.

ಬಸ್​ ನದಿಗೆ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ರಕ್ಷಣಾ ತಂಡ ಅಲ್ಲಿಗೆ ಧಾವಿಸಿ, ಪ್ರಯಾಣಿಕರಿಗೆ ಸಹಾಯ ಮಾಡಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದುವರೆಗೆ 16 ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಬಸ್​​ನಲ್ಲಿ ಚಾಲಕ ಸೇರಿ ಒಟ್ಟು 22 ಮಂದಿ ಇದ್ದರು. ಬಸ್ ಚಾಲಕ ಮೃತಪಟ್ಟಿದ್ದಾಗಿ ಸ್ಥಳೀಯ ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಗಲಾಟೆ ಮಾಡಿದ್ದಕ್ಕೆ ಬಾಲಕನ ನಾಲಿಗೆ ಕಟ್! ಸ್ನೇಹಿತನ ಕುಟುಂಬಸ್ಥರಿಂದಲೇ ನಡೀತು ಹೇಯ ಕೃತ್ಯ..!

ಗಲಾಟೆ ಮಾಡಿದ್ದಕ್ಕೆ ಬಾಲಕನ ನಾಲಿಗೆ ಕಟ್! ಸ್ನೇಹಿತನ ಕುಟುಂಬಸ್ಥರಿಂದಲೇ ನಡೀತು ಹೇಯ ಕೃತ್ಯ..!


ಗಲಾಟೆ ಮಾಡಿದ್ದಕ್ಕೆ ಬಾಲಕನ ನಾಲಿಗೆ ಕಟ್! ಸ್ನೇಹಿತನ ಕುಟುಂಬಸ್ಥರಿಂದಲೇ ನಡೀತು ಹೇಯ ಕೃತ್ಯ..!

ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಗಲಾಟೆ ಮಾಡೋದು  ಮಾಮೂಲಿ. ಸಣ್ಣ, ಪುಟ್ಟ ವಿಚಾರಕ್ಕೆ ಸ್ನೇಹಿತರ ನಡುವೆಯೂ ಜಗಳವಾಗುವುದು ಕಾಮನ್. ದೊಡ್ಡವರಾದ ಮೇಲೆ ಸ್ನೇಹಿತರೇ ದುಷ್ಮನ್ ಗಳಾಗಿ ಬಿಡುತ್ತಾರೆ. ಜೊತೆಯಲ್ಲೇ ಇದ್ದು ಬೆನ್ನಿಗೆ ಚೂರಿ ಹಾಕುತ್ತಾರೆ. ಇಂಥವರಿಗೆ ಅಂತಾನೆ "ಸ್ನೇಹ ಅಂತ ಒಳಗೊಳಗೆ ಸ್ಕೆಚ್ಚು ಹಾಕ್ತರೋ, ಒಂದೇ ತಟ್ಟೆಯಲ್ಲಿ ಅನ್ನ ತಿಂದು ಮುಹೂರ್ತ ಇಡುತ್ತಾರೋ" ಅನ್ನುವ ಸಾಂಗ್ ಹೇಳಿ ಮಾಡಿಸಿದ ಹಾಗಿದೆ. ಆದರೆ ಆಟ ಆಡುವ ಚಿಕ್ಕವಯಸ್ಸಿನಲ್ಲಿ ಸ್ನೇಹಿತರ ಮೇಲೆ ದ್ವೇಷ ಬೆಳೆಯುವುದು ನಿಜಕ್ಕೂ ಸಾಧ್ಯನಾ. ಹೌದು, ಉತ್ತರಪ್ರದೇಶ ದಲ್ಲಿ ಸಣ್ಣ ವಿಚಾರಕ್ಕೆ ಸ್ನೇಹಿತರ ನಡುವೆ ಜಗಳವಾಗಿದೆ. ಸ್ನೇಹಿತರ ಜಗಳಕ್ಕೆ ಅವರ ಕುಟುಂಬಸ್ಥರು ಎಂಟ್ರಿಯಾಗಿ, 12ವರ್ಷದ ಬಾಲಕನೊಬ್ಬನ ನಾಲಿಗೆಯನ್ನೇ ಕತ್ತರಿಸಿ ಬಿಟ್ಟಿದ್ದಾರೆ. ಜೊತೆಯಲ್ಲಿದ್ದ ಸ್ನೇಹಿತರ ನಡುವೆ ಸಣ್ಣ ವಿಚಾರಕ್ಕೆ ಜಗಳ ಶುರುವಾಗಿತ್ತು. ಒಬ್ಬರಿಗೊಬ್ಬರು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಪರಿಸ್ಥಿತಿ ಮಿತಿಮೀರಿದ್ದು ಕೈ ಕೈ ಮಿಲಾಯಿಸಿ ಕೊಳ್ಳುವ ಹಂತಕ್ಕೆ ತಲುಪಿತ್ತು.

ಇಬ್ಬರೂ ಸ್ನೇಹಿತರು ಹೊಡೆದಾಡಿ ಕೊಳ್ಳುತ್ತಿದ್ದರು. ಇದನ್ನು ನೋಡಿದ ಒಬ್ಬ ಸ್ನೇಹಿತನ ಮನೆ ಕಡೆಯವರು ಸ್ಥಳಕ್ಕೆ ಓಡಿ ಬಂದಿದ್ದಾರೆ. ಇಬ್ಬರ ಜಗಳವನ್ನು ತಡೆಯದೆ, ಇಬ್ಬರನ್ನ ಜೋರಾಗಿ ತಳ್ಳಿದ್ದಾರೆ. ನಂತರ 12 ವರ್ಷದ ಬಾಲಕನಿಗೆ ಸ್ನೇಹಿತನ ಮನೆಯವರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಾನು ಏನು ತಪ್ಪು ಮಾಡಿಲ್ಲ ಬಿಟ್ಟುಬಿಡಿ ಎಂದು ಆ ಹುಡುಗ ಕೇಳಿಕೊಂಡರೂ, ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. 12 ವರ್ಷದ ಅಪ್ರಾಪ್ತನ ನಾಲಿಗೆಯನ್ನೇ ಕತ್ತರಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕ ಮಾತನಾಡಿದ್ದು, ನಾನೇನು ತಪ್ಪು ಮಾಡಿಲ್ಲ, ನನ್ನ ಸ್ನೇಹಿತ ಹಾಗೂ ನೆರೆಮನೆಯವರಾದ, ಕುಲದೀಪ್ ಹಾಗೂ ಸಚಿನ್ ಎಂಬುವವರು ನನ್ನ ಸ್ನೇಹಿತರ ಜೊತೆ ಬಂದು ಮಾಡಿದ್ದಾರೆ ಎಂದು ನೋವಿನಲ್ಲೇ ಅಳಲು ತೋಡಿಕೊಂಡಿದ್ದಾನೆ. ಮಾತನಾಡಲಾಗದ ಸ್ಥಿತಿಯಲ್ಲಿರುವ ಬಾಲಕ ಕಷ್ಟಪಟ್ಟು ಈ ಹೇಳಿಕೆಯನ್ನು ನೀಡಿದ್ದಾನೆ.

ಇನ್ನೂ ಗಾಯಾಳು ಬಾಲಕನ ತಂದೆ ಪ್ರತಿಕ್ರಿಯೆ ನೀಡಿದ್ದು, ನನ್ನ ಮಗ ಮನೆಯಂಗಳದಲ್ಲಿ ಆಟವಾಡುತ್ತಿದ್ದ.ಈ ವೇಳೆ ನೆರೆಮನೆಯವರು ಬಂದು ಏಕಾಏಕಿ ದಾಳಿ ನಡೆಸಿ ಈ ರೀತಿ ಮಾಡಿ ಹೋಗಿದ್ದಾರೆ ಎಂದು ಹೇಳಿದ್ದಾರೆ. ಯಾವುದೋ ದ್ವೇಷಕ್ಕೆ ಈ ರೀತಿ ಕೃತ್ಯ ಎಸಗಿದ್ದಾರೆ. 12 ವರ್ಷದ ಬಾಲಕನ ವಿರುದ್ಧ ಯಾವ ದ್ವೇಷ ಇರುತ್ತೆ ಎಂದು ತಂದೆ ಅಳಲು ತೋಡಿಕೊಂಡಿದ್ದಾರೆ.

ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಖುರ್ಜಾ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಜನರ ವಿರುದ್ಧ ಎಫ್‌ಐಆರ್ದಾ ಖಲಿಸಿದ್ದಾರೆ. ಓರ್ವನನ್ನ ಈಗಾಗಲೇ ಬಂಧಿಸಿದ್ದು, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ. ಉಳಿದ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಶೀಘ್ರದಲ್ಲೇ ಇಬ್ಬರನ್ನು ಬಂಧಿಸಿ, ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿರೆ, ಜೈಲು ಸೇರುವುದುಗ್ಯಾರಂಟಿ. ಆದರೆ, ಏನು ತಪ್ಪು ಮಾಡದ ಈ ಬಾಲಕನ ನಾಲಿಗೆ ಮತ್ತೆ ಬರುತ್ತಾ. ಚಿಕ್ಕವರು, ದೊಡ್ಡವರಾಗಲಿ ಯಾರ ಮೇಲೂ ಕೈ ಮಾಡುವ ಮುನ್ನ ಒಮ್ಮೆ ಯೋಚಿಸಿದರೆ ನಿಜಕ್ಕೂ ಒಳಿತು. ಕೋಪದ ಕೈಗೆ ಬುದ್ಧಿ ಕೊಡದೆ ಸ್ನೇಹಿತರು ಒಮ್ಮೆ ಯೋಚಿಸಿದ್ದರೆ, ಈ ಘಟನೆ ನಡೆಯುತ್ತಿರಲಿಲ್ಲ.


ಮಹಿಳೆಯ ಮೇಲೆ ದಾಳಿ ಮಾಡಿದ ಚಿರತೆ, ಮುಂದೇನಾಯ್ತು

ಮಹಿಳೆಯ ಮೇಲೆ ದಾಳಿ ಮಾಡಿದ ಚಿರತೆ, ಮುಂದೇನಾಯ್ತು

ಮಹಿಳೆಯ ಮೇಲೆ ದಾಳಿ ಮಾಡಿದ ಚಿರತೆ, ಮುಂದೇನಾಯ್ತು

ಮುಂಬೈ : ಮುಂಬೈನಲ್ಲಿ ಮಧ್ಯ ವಯಸ್ಕ ಮಹಿಳೆ ಮೇಲೆ ಹೊಂಚು ಹಾಕಿಕೊಂಡಿದ್ದ ಚಿರತೆಯೊಂದು ದಾಳಿ ಮಾಡಿದ್ದು, ಮಹಿಳೆ ತನ್ನ ವಾಕಿಂಗ್ ಸ್ಟಿಕ್ ನಿಂದ ಚಿರತೆಯೊಂದಿಗೆ ಹೋರಾಡಿದ್ದು, ಚಿರತೆ ಅಲ್ಲಿಂದ ಕಾಲ್ಕಿತ್ತ ಘಟನೆ ನಡೆದಿದೆ.

ಮುಂಬೈನ ಆರೆಯಲ್ಲಿ ಚಿರತೆ ಮಹಿಳೆ ಮೇಲೆ ದಾಳಿ ಮಾಡಲು ಹೊರಟಿತ್ತು. ಮೂರು ದಿನಗಳಲ್ಲಿ ಅದೇ ಪ್ರದೇಶದಲ್ಲಿ ನಡೆದ ಎರಡನೇ ದಾಳಿ ಇದಾಗಿದೆ. ಈ ಮಹಿಳೆ ಚಿರತೆಯನ್ನು ಎಷ್ಟು ಧೈರ್ಯದಿಂದ ಎದುರಿಸಿದಳು ಎಂಬುದನ್ನು ದೃಶ್ಯಾವಳಿಗಳು ತೋರಿಸುತ್ತವೆ. ಸದ್ಯ ಘಟನೆಯ ದೃಶ್ಯಗಳು ವೈರಲ್ ಆಗಿವೆ.

ಆರೆ ಡೈರಿ ಪ್ರದೇಶದ ಬಳಿ ಚಿರತೆ ನಡೆಯುವುದನ್ನು ದೃಶ್ಯಗಳು ತೋರಿಸುತ್ತವೆ. ಮಹಿಳೆಯನ್ನು ನಿರ್ಮಲಾ ದೇವಿ ಸಿಂಗ್ (55) ಎಂದು ಗುರುತಿಸಲಾಗಿದೆ. ನಂತರ ಆಕೆ ಎತ್ತರದ ವೇದಿಕೆಯ ಮೇಲೆ ಕುಳಿತುಕೊಳ್ಳುತ್ತಾಳೆ. ಸ್ವಲ್ಪ ಹೊತ್ತಿನಲ್ಲಿ ತನ್ನ ಬೆಬೆನ್ನಿನ ಮೇಲೆ ಬಿದ್ದ ಪ್ರಾಣಿಯ ಕಡೆಗೆ ನೋಡುತ್ತಿದ್ದಳು.

ಅದು ಚಿರತೆ ಎಂದು ಗೊತ್ತಾದ ತಕ್ಷಣ ಮಹಿಳೆ ತನ್ನ ವಾಕಿಂಗ್ ಸ್ಟಿಕ್ ನಿಂದ ಅದನ್ನು ದೂರ ತಳ್ಳಲು ಪ್ರಯತ್ನಿಸುತ್ತಾಳೆ.ಆದರೆ ಕೆಲವು ಕ್ಷಣಗಳ ನಂತರ, ಅದು ಹಿಮ್ಮೆಟ್ಟುತ್ತದೆ.

ಘಟನೆಯಲ್ಲಿ ನಿರ್ಮಲಾ ದೇವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿರತೆಯನ್ನು ನೋಡಿದ ನಂತರ ಮಹಿಳೆ ಸಹಾಯಕ್ಕಾಗಿ ಕೂಗುತ್ತಿದ್ದಂತೆ, ಕೆಲವೇ ಜನರು ಅವಳ ಕಡೆಗೆ ಧಾವಿಸಿ ಅಲ್ಲಿ ಜಮಾಯಿಸಿದರು.

ಎರಡು ದಿನಗಳ ಹಿಂದಷ್ಟೇ 4 ವರ್ಷದ ಬಾಲಕನ ಮೇಲೆ ಚಿರತೆ ದಾಳಿ ಮಾಡಿದೆ. ವರದಿಗಳ ಪ್ರಕಾರ, ಹುಡುಗ ತನ್ನ ನಿವಾಸದ ಹೊರಗೆ ಆಟವಾಡುತ್ತಿದ್ದಾಗ ಚಿರತೆ ಅವನನ್ನು ಎಳೆದೊಯ್ಯಲು ಪ್ರಯತ್ನಿಸಿತು. ಆದರೆ ಅವನು ರಕ್ಷಿಸಲ್ಪಟ್ಟನು.

ಮುಂಬೈನ ಆರೆ ಹಸಿರು ವಿಶಾಲವಾದ ಪ್ರದೇಶದಿಂದ ಆವೃತವಾದ ಪ್ರದೇಶವಾಗಿದೆ. ಇದು ವೈವಿಧ್ಯಮಯ ಪ್ರಾಣಿ ಮತ್ತು ಪಕ್ಷಿಗಳಿಗೆ ನೆಲೆಯಾಗಿದೆ.

ಈ ಪ್ರದೇಶವು ಮುಂಬೈನಲ್ಲಿ ಉಳಿದಿರುವ ಕೊನೆಯ ಕೆಲವು ಹಸಿರು ಸ್ಥಳವಾಗಿರುವುದರಿಂದ, ಇಲ್ಲಿ ಮಾನವ-ಪ್ರಾಣಿ ಸಂಘರ್ಷ ಪ್ರಕರಣಗಳು ಹೆಚ್ಚಿವೆ.


 24 ಗಂಟೆಯಲ್ಲಿ ಭಾರತದಲ್ಲಿ 23,529 ಹೊಸ ಕೋವಿಡ್-19 ಪ್ರಕರಣಗಳು ಪತ್ತೆ, 311 ಮಂದಿ ಸಾವು

24 ಗಂಟೆಯಲ್ಲಿ ಭಾರತದಲ್ಲಿ 23,529 ಹೊಸ ಕೋವಿಡ್-19 ಪ್ರಕರಣಗಳು ಪತ್ತೆ, 311 ಮಂದಿ ಸಾವು

 

24 ಗಂಟೆಯಲ್ಲಿ ಭಾರತದಲ್ಲಿ 23,529 ಹೊಸ ಕೋವಿಡ್-19 ಪ್ರಕರಣಗಳು ಪತ್ತೆ, 311 ಮಂದಿ ಸಾವು

ನವದೆಹಲಿ: ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 23,529 ಹೊಸ ಕೋವಿಡ್-19 ಪ್ರಕರಣಗಳು 311 ಸಾವುಗಳು ಸಂಭವಿಸಿವೆ ಅಂತ ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ. ಒಟ್ಟು ಪ್ರಕರಣಗಳು ಸಂಖ್ಯೆ 33,739,980 ಕ್ಕೆ ಏರುತ್ತವೆ ಅಂತ ತಿಳಿಸಿದ್ದು, ಇದೇ ವೇಳೆ ಕಳೆದ 24 ತಾಸಿನಲ್ಲಿ 28,718 ಚೇತರಿಕೆಗಳು ಕಂದು ಬಂದಿದೆಯಂತೆ.

ಕೇರಳದಲ್ಲಿ ನಿನ್ನೆ 12,161 ಪ್ರಕರಣಗಳು ಮತ್ತು 155 ಸಾವುಗಳು ವರದಿಯಾಗಿವೆ. ಸೆಪ್ಟೆಂಬರ್ 29, 2021 ರವರೆಗೆ ಕೋವಿಡ್-19 ಗಾಗಿ 568,956,439 ಮಾದರಿಗಳನ್ನು ಪರೀಕ್ಷಿಸಲಾಗಿದೆ, ಇದರಲ್ಲಿ ಸೆಪ್ಟೆಂಬರ್ 29, 2021 ರಂದು 1,506,254 ಮಾದರಿಗಳು ಸೇರಿವೆ ಅಂತ ಐ.ಸಿ.ಎಂ.ಆರ್.

ಸಕ್ರಿಯ ಪ್ರಕರಣಗಳ ಸಂಖ್ಯೆ : 2,77,020 

ಒಟ್ಟು ಪ್ರಕರಣಗಳ ಸಂಖ್ಯೆ: 3,37,39,980

ಒಟ್ಟು ಚೇತರಿಕೆಗಳ ಸಂಖ್ಯೆ: 3,30,14,898

ಸಾವಿನ ಸಂಖ್ಯೆ: 4,48,062

 ಮಮತಾ ಬ್ಯಾನರ್ಜಿಗೆ ನಿರ್ಣಾಯಕ ದಿನ: ಭವಾನಿಪುರದಲ್ಲಿ ಮತದಾನ ಆರಂಭ

ಮಮತಾ ಬ್ಯಾನರ್ಜಿಗೆ ನಿರ್ಣಾಯಕ ದಿನ: ಭವಾನಿಪುರದಲ್ಲಿ ಮತದಾನ ಆರಂಭ


ಮಮತಾ ಬ್ಯಾನರ್ಜಿಗೆ ನಿರ್ಣಾಯಕ ದಿನ: ಭವಾನಿಪುರದಲ್ಲಿ ಮತದಾನ ಆರಂಭ

ಕೊಲ್ಕತ್ತಾ: ದಕ್ಷಿಣ ಕೊಲ್ಕತ್ತಾದ ಭವಾನಿಪುರ ವಿಧಾನಸಭಾ ಕ್ಷೇತ್ರದ ಮೂರು ಲಕ್ಷಕ್ಕೂ ಅಧಿಕ ಮತದಾರರು ಇಂದು ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ರಾಜಕೀಯ ಭವಿಷ್ಯ ಬರೆಯಲಿದ್ದು, ಮುಂಜಾನೆ 7ಕ್ಕೆ ಮತದಾನ ಆರಂಭವಾಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಿಂದ ಸ್ಪರ್ಧಿಸಿ ಸುವೇಂದು ಅಧಿಕಾರಿ ಎದುರು ಸೋತಿದ್ದ ಮಮತಾ, ಮುಖ್ಯಮಂತ್ರಿಯಾಗಿ ಆರು ತಿಂಗಳ ಒಳಗಾಗಿ ವಿಧಾನಸಭೆಗೆ ಆಯ್ಕೆಯಾಗಬೇಕಿದೆ. ಇದರಿಂದಾಗಿ ಈ ಚುನಾವಣೆಯ ಫಲಿತಾಂಶ ಅವರಿಗೆ ನಿರ್ಣಾಯಕವಾಗಲಿದೆ. ಅಕ್ಟೋಬರ್ 3ರಂದು ಮತಗಳ ಎಣಿಕೆ ನಡೆಯಲಿದೆ.

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ಸುಬ್ರತಾ ಬಕ್ಷಿ ಅವರು, ಶಾಸಕತ್ವಕ್ಕೆ ರಾಜೀನಾಮೆ ನೀಡಿ ನಾಯಕಿಯ ಆಯ್ಕೆಗೆ ಸ್ಥಾನ ತೆರವುಗೊಳಿಸಿದ್ದರು.

"ಮುಖ್ಯಮಂತ್ರಿಯಾಗಿ ಮುಂದುವರಿಯಲು ಗೆಲುವು ಅಗತ್ಯವಾಗಿದೆ. ಸಿಎಎ, ಎನ್‌ಆರ್‌ಸಿ, ನೋಟು ಅಪಮೌಲ್ಯ ಹಾಗೂ ಬಿಜೆಪಿ ಜನವಿರೋಧಿ ನೀತಿಗಳ ವಿರುದ್ಧದ ಹೋರಾಟಕ್ಕೆ ಇದೊಂದೇ ನನಗಿರುವ ಮಾರ್ಗ" ಎಂದು ಮಮತಾ ಹೇಳಿದ್ದಾರೆ.

ಮಮತಾ ಬ್ಯಾನರ್ಜಿಯವರ ನಿವಾಸ ಇರುವ ಕಾಲಿಘಾಟ್ ಕೂಡಾ ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿದ್ದು, 2011 ಮತ್ತು 2016ರಲ್ಲಿ ಇಲ್ಲಿಂದ ಗೆಲುವು ಸಾಧಿಸಿದ್ದರೂ ಈ ಬಾರಿ ಗೆಲುವು ಸುಲಭವಲ್ಲ. ಬಿಜೆಪಿ ಹೈಕೋರ್ಟ್ ವಕೀಲೆ, 41 ವರ್ಷ ವಯಸ್ಸಿನ ಪ್ರಿಯಾಂಕಾ ತಿಬ್ರೇವಾಲ್ ಅವರನ್ನು ಮಮತಾ ವಿರುದ್ಧ ಕಣಕ್ಕಿಳಿಸಿದೆ. ಸಿಪಿಎಂ ಮತ್ತೊಬ್ಬರು ವಕೀಲರಾದ ಶ್ರೀಜೀಬ್ ಬಿಸ್ವಾಸ್ ಅವರನ್ನು ಸ್ಪರ್ಧೆಗೆ ಇಳಿಸಿದೆ.

ಚುನಾವಣೆಯ ಹಿನ್ನೆಲೆಯಲ್ಲಿ ಮತಗಟ್ಟೆಗಳ 200 ಮೀಟರ್ ಸುತ್ತಲೂ ಕಳೆದ ಮಂಗಳವಾರದಿಂದಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕೇಂದ್ರೀಯ ಅರೆಮಿಲಿಟರಿ ಪಡೆಗಳ 35 ತುಕಡಿಗಳನ್ನು ನಿಯೋಜಿಸಲಾಗಿದ್ದು, 270 ಮತಗಟ್ಟೆಗಳಿಗೆ ತಲಾ ಮೂವರಂತೆ ಅರೆಮಿಲಿಟರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮಮತಾ ಬ್ಯಾನರ್ಜಿ ಮತ ಚಲಾಯಿಸುವ ಮಿತ್ರಾ ಇನ್‌ಸ್ಟಿಟ್ಯೂಷನ್ ಮತಗಟ್ಟೆ ಸೇರಿದಂತೆ 13 ಮತಗಟ್ಟೆಗಳನ್ನು ಅತಿಸೂಕ್ಷ್ಮ ಎಂದು ಪರಿಗಣಿಸಲಾಗಿದೆ.


 ಅ.7ಕ್ಕೆ ಮಂಗಳೂರಿಗೆ ರಾಷ್ಟ್ರಪತಿ

ಅ.7ಕ್ಕೆ ಮಂಗಳೂರಿಗೆ ರಾಷ್ಟ್ರಪತಿ


ಅ.7ಕ್ಕೆ ಮಂಗಳೂರಿಗೆ ರಾಷ್ಟ್ರಪತಿ

ಮಂಗಳೂರು: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಕ್ಟೋಬರ್ 6ರಿಂದ 9ರವರೆಗೆ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಅ.7ರಿಂದ 9ರವರೆಗೆ ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಭೇಟಿ ನೀಡಲಿದ್ದಾರೆ.

ಅ.7ರಂದು ಚಾಮರಾಜನಗರದಲ್ಲಿ ಆಸ್ಪತ್ರೆ ಉದ್ಘಾಟನೆ ಬಳಿಕ ಮಂಗಳೂರಿಗೆ ಬಂದು ಇಲ್ಲಿ ವಾಸ್ತವ್ಯ ಮಾಡಲಿದ್ದಾರೆ. 8ರ ಬೆಳಿಗ್ಗೆ 10.45ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ಶೃಂಗೇರಿಗೆ ತೆರಳುವರು. ಪುನಃ ಮಂಗಳೂರಿಗೆ ಬಂದು, ಇಲ್ಲಿ ವಾಸ್ತವ್ಯ ಮಾಡಿ, 9ರ ಬೆಳಿಗ್ಗೆ 11.15ಕ್ಕೆ ವಿಮಾನದ ಮೂಲಕ ರಾಷ್ಟ್ರಪತಿ ಭವನಕ್ಕೆ ಪ್ರಯಾಣಿಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಡಿಯೊ ಸಂವಾದ: ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರು ಬುಧವಾರ ದಕ್ಷಿಣ ಕನ್ನಡ ಜಿಲ್ಲಾಡಳಿತದ ಪ್ರಮುಖರ ಜತೆ ವಿಡಿಯೊ ಸಂವಾದ ನಡೆಸಿದರು. 'ರಾಷ್ಟ್ರಪತಿಗಳ ಊಟೋಪಚಾರ, ವಸತಿ, ಭದ್ರತೆ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗುವುದು. ಯಾವುದೇ ರೀತಿಯ ಲೋಪ ಆಗದಂತೆ ಎಚ್ಚರ ವಹಿಸಲಾಗುವುದು' ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದರು. ಮಹಾನಗರಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಡಿಸಿಪಿ ಹರಿರಾಂ ಶಂಕರ್, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಮಿಶ್ರ, ಉಪ ವಿಭಾಗಾಧಿಕಾರಿ ಮದನ್ ಮೋಹನ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಯಶವಂತ್ ಉಪಸ್ಥಿತರಿದ್ದರು.


 ಕಪಿಲ್ ಸಿಬಲ್ ಮನೆಯ ಮುಂದೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಕಪಿಲ್ ಸಿಬಲ್ ಮನೆಯ ಮುಂದೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ


ಕಪಿಲ್ ಸಿಬಲ್ ಮನೆಯ ಮುಂದೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ನವದೆಹಲಿ : ದೆಹಲಿ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರ ರಾಜಧಾನಿಯಲ್ಲಿರುವ ಕಾಂಗ್ರೆಸ್ ಸಂಸದ  ಕಪಿಲ್ ಸಿಬಲ್ ಅವರ ನಿವಾಸದ ಹೊರಗೆ ಪ್ರತಿಭಟನೆ ನಡೆಸಿದರು.

ಪಕ್ಷದ ನೂರಾರು ಕಾರ್ಯಕರ್ತರು ಬುಧವಾರ ಸಿಬಲ್ ಅವರ ನಿವಾಸದ ಹೊರಗೆ ಫಲಕಗಳು ಮತ್ತು ಗುಲಾಬಿಗಳನ್ನು ಹಿಡಿದು ಜಮಾಯಿಸಿದರು, ಹಾಗೆಯೇ ಹಿರಿಯ ಕಾಂಗ್ರೆಸ್ ನಾಯಕನ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯಲ್ಲಿ ಕಂಡು ಬಂದ ಫಲಕಗಳಲ್ಲಿ ಒಂದು ಹೀಗಿತ್ತು: 'ಗೆಟ್ ವೆಲ್ ಸೂನ್  ಕಪಿಲ್ ಸಿಬಲ್'.

ಪ್ರತಿಭಟನಾಕಾರರಲ್ಲಿ ಒಬ್ಬರು, 'ಕಪಿಲ್ ಸಿಬಲ್ ಕಾಂಗ್ರೆಸ್ ಗೆ ರಾಜೀನಾಮೆನೀಡಬೇಕು' ಎಂದು ಹೇಳಿದರು. 'ಕಪಿಲ್ ಸಿಬಲ್ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ. ಅವರು ಶೀಘ್ರದಲ್ಲೇ ಅದನ್ನು ಮರಳಿ ಪಡೆಯುತ್ತಾರೆ ಎಂದು ನಾವು ಆಶಿಸುತ್ತೇವೆ' ಎಂದು ಇನ್ನೊಬ್ಬ ಕಾಂಗ್ರೆಸ್ ಕಾರ್ಯಕರ್ತ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಪಿಲ್ ಸಿಬಲ್, ಪಕ್ಷದ ಹೈಕಮಾಂಡ್ ಪಕ್ಷವನ್ನು ಮುನ್ನಡೆಸುತ್ತಿರುವ ರೀತಿಯನ್ನು ಟೀಕಿಸಿದ್ದರು. 'ನಮ್ಮ ಪಕ್ಷದಲ್ಲಿ ಅಧ್ಯಕ್ಷರೇ ಇಲ್ಲ. ಆದ್ದರಿಂದ ಈ ನಿರ್ಧಾರಗಳನ್ನು ಯಾರು ತೆಗೆದುಕೊಳ್ಳುತ್ತಿದ್ದಾರೆ ಎಂದು ನಮಗೆ ತಿಳಿದಿಲ್ಲ. ' ಎಂದು ಸಿಬಲ್ ವರದಿಗಾರರಿಗೆ ತಿಳಿಸಿದರು.


ರಾಜಸ್ಥಾನ ವಿರುದ್ಧ ಆರ್ ಸಿಬಿಗೆ ಏಳು ವಿಕೆಟ್ ಜಯ

ರಾಜಸ್ಥಾನ ವಿರುದ್ಧ ಆರ್ ಸಿಬಿಗೆ ಏಳು ವಿಕೆಟ್ ಜಯ


ರಾಜಸ್ಥಾನ ವಿರುದ್ಧ ಆರ್ ಸಿಬಿಗೆ ಏಳು ವಿಕೆಟ್ ಜಯ

ದುಬೈ: ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್  ವೆಲ್ ಅರ್ಧಶತಕದ ಸಹಾಯದಿಂದ ಐಪಿಎಲ್ ನ 43ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ)ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 7 ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದೆ.

ಬುಧವಾರ ನಡೆದ ಪಂದ್ಯದಲ್ಲಿ ಗೆಲ್ಲಲು 150 ರನ್ ಗುರಿ ಬೆನ್ನಟ್ಟಿದ ಆರ್ ಸಿಬಿ 17.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು.

ಇನಿಂಗ್ಸ್ ಆರಂಭಿಸಿದ ನಾಯಕ ವಿರಾಟ್ ಕೊಹ್ಲಿ(25 ರನ್ , 20 ಎಸೆತ) ಹಾಗೂ ದೇವದತ್ತ ಪಡಿಕ್ಕಲ್(22 ರನ್, 17 ಎಸೆತ) ಮೊದಲ ವಿಕೆಟ್ ಗೆ 48 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭವನ್ನು ನೀಡಿದರು.

ಮಧ್ಯಮ ಕ್ರಮಾಂಕದಲ್ಲಿ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್(ಔಟಾಗದೆ 50, 30 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ಶ್ರೀಕರ್ ಭರತ್(44) 3ನೇ ವಿಕೆಟ್ ಗೆ ಅರ್ಧಶತಕದ ಜೊತೆಯಾಟದಿಂದ ತಂಡವನ್ನು ಆಧರಿಸಿದರು.

ಎಬಿಡಿವಿಲಿಯರ್ಸ್ ಔಟಾಗದೆ 4 ರನ್ ಗಳಿಸಿದರು. ರಾಜಸ್ಥಾನ ಪರವಾಗಿ ಮುಸ್ತಫಿಝರ್ರಹ್ಮಾನ್(2-20) ಯಶಸ್ವಿ ಬೌಲರ್ ಎನಿಸಿಕೊಂಡರು.


 ವಿಮಾನ ಸಂಚಾರ ಪುನರಾರಂಭ ಮಾಡುವಂತೆ ಭಾರತಕ್ಕೆ ತಾಲಿಬಾನ್ ಕೋರಿಕೆ

ವಿಮಾನ ಸಂಚಾರ ಪುನರಾರಂಭ ಮಾಡುವಂತೆ ಭಾರತಕ್ಕೆ ತಾಲಿಬಾನ್ ಕೋರಿಕೆ


ವಿಮಾನ ಸಂಚಾರ ಪುನರಾರಂಭ ಮಾಡುವಂತೆ ಭಾರತಕ್ಕೆ ತಾಲಿಬಾನ್ ಕೋರಿಕೆ

ಕಾಬೂಲ್: ಅಫ್ಗಾನಿಸ್ತಾನಕ್ಕೆ ವಾಣಿಜ್ಯ ವಿಮಾನಗಳ ಸಂಚಾರವನ್ನು ಪುನರಾರಂಭಿಸುವಂತೆ ಕೋರಿ ಭಾರತದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ ತಾಲಿಬಾನ್ ಪತ್ರದ ಮೂಲಕ ವಿನಂತಿಸಿದೆ ಎಂದು ವರದಿಯಾಗಿದೆ.

ಆಗಸ್ಟ್ 15ರಂದು ಅಫ್ಗಾನಿಸ್ತಾನದ ಮೇಲೆ ತಾಲಿಬಾನ್ ನಿಯಂತ್ರಣ ಸಾಧಿಸಿದ ಬಳಿಕ ಭಾರತದೊಂದಿಗೆ ತಾಲಿಬಾನ್ ಆಡಳಿತ ನಡೆಸಿರುವ ಪ್ರಪ್ರಥಮ ಅಧಿಕೃತ ಸಂವಹನ ಇದಾಗಿದೆ. ಭಾರತವು ಅಫ್ಫಾನ್ ನ ವಾಯುಕ್ಷೇತ್ರದ ಬಳಕೆ ಸ್ಥಗಿತಗೊಳಿಸಿದ ಬಳಿಕ ಹಲವು ಅಂತರ್ ರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳೂ ಈ ಕ್ರಮವನ್ನು ಅನುಸರಿಸಿದ್ದವು.

ಅಫ್ಫಾನ್ ನ ನಾಗರಿಕ ವಿಮಾನಯಾನ ಮತ್ತು ಸಾರಿಗೆ ಇಲಾಖೆಯ ಹಂಗಾಮಿ ಸಚಿವ ಹಮೀದುಲ್ಲಾ ಅಖುಂದ್ ಝಾದಾ ಅವರು ಭಾರತದ ನಾಗರಿಕ ವಿಮಾನಯಾನ ನಿರ್ದೇಶಕ ಅರುಣ್ ಕುಮಾರ್ಗೆ ಬರೆದಿರುವ ಸೆ.7ರ ದಿನಾಂಕ ಹೊಂದಿರುವ ಪತ್ರದಲ್ಲಿ ಈ ಕೋರಿಕೆ ಮಾಡಿದ್ದು ಅಫ್ಗಾನ್ನ ವಿಮಾನಯಾನ ಸಂಸ್ಥೆಗಳಾದ ಕಮ್ ಏರ್ ಮತ್ತು ಅರಿಯಾನಾ ಅಫ್ಗಾನ್ ಏರ್ಲೈನ್ನ ವಿಮಾನಗಳು ಭಾರತಕ್ಕೆ ಸಂಚರಿಸಲು, ಭಾರತದ ವಿಮಾನಗಳು ಅಫ್ಗಾನ್ಗೆ ಸಂಚರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಕಾಬೂಲ್ ವಿಮಾನ ನಿಲ್ದಾಣದಿಂದ ಅಮೆರಿಕ ಪಡೆಗಳ ವಾಪಸಾತಿ ಪ್ರಕ್ರಿಯೆ ಪೂರ್ಣಗೊಂಡ ಸಂದರ್ಭ ವಿಮಾನ ನಿಲ್ದಾಣಕ್ಕೆ ತೀವ್ರ ಹಾನಿಯಾಗಿದ್ದು ಕಾರ್ಯನಿರ್ವಹಿಸಲು ಅಸಾಧ್ಯದ ಸ್ಥಿತಿ ಇದ್ದುದು ನಿಮಗೆ ತಿಳಿದಿದೆ. ನಮ್ಮ ಖತರ್ ಸಹೋದರರ ತಾಂತ್ರಿಕ ನೆರವಿನಿಂದ ವಿಮಾನ ನಿಲ್ದಾಣವನ್ನು ಮತ್ತೆ ಸುಸ್ಥಿತಿಗೆ ತರಲಾಗಿದ್ದು ಈ ಕುರಿತ ಸೂಚನೆಯನ್ನು ಸೆಪ್ಟಂಬರ್ 6ರಂದು ನೀಡಲಾಗಿದೆ. ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ಸ್ನ ನಾಗರಿಕ ವಿಮಾನಯಾನ ಇಲಾಖೆ ಅಂತರ್ ರಾಷ್ಟ್ರೀಯ ವಿಮಾನಗಳಿಗೆ ಪೂರ್ಣ ಭದ್ರತೆಯನ್ನು ಖಾತರಿಪಡಿಸುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈ ವಿಷಯದಲ್ಲಿ ನಾಗರಿಕ ವಿಮಾನಯಾನ ಸಚಿವಾಲಯ ಶೀಘ್ರ ನಿರ್ಧಾರ ಕೈಗೊಳ್ಳುತ್ತದೆ ಎಂದು ಅರುಣ್ ಕುಮಾರ್ ಹೇಳಿದ್ದಾರೆ.


 ನೂತನ ಎನ್‍ಇಪಿ ಪಠ್ಯದಲ್ಲಿ ಇಸ್ರೋ, ಬಾಹ್ಯಾಕಾಶ ವಿಜ್ಞಾನದ ಅಂಶಗಳು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ನೂತನ ಎನ್‍ಇಪಿ ಪಠ್ಯದಲ್ಲಿ ಇಸ್ರೋ, ಬಾಹ್ಯಾಕಾಶ ವಿಜ್ಞಾನದ ಅಂಶಗಳು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

 ನೂತನ ಎನ್‍ಇಪಿ ಪಠ್ಯದಲ್ಲಿ ಇಸ್ರೋ, ಬಾಹ್ಯಾಕಾಶ ವಿಜ್ಞಾನದ ಅಂಶಗಳು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಬೆಂಗಳೂರು: ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಅನುಸಾರ ರಚನೆಯಾಗುವ ನೂತನ ಪಠ್ಯಕ್ರಮದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಸಾಧನೆಗಳು, ಯೋಜನೆಗಳ ವಿಚಾರಗಳನ್ನು ಸೇರ್ಪಡೆಗೊಳಿಸಲು ಇಸ್ರೋದಿಂದ ಸಲಹೆ ಸೂಚನೆಗಳನ್ನು ಪಡೆಯಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. 

ಬುಧವಾರ ನಗರದ ನ್ಯೂ ಬಿಇಎಲ್ ರಸ್ತೆಯಲ್ಲಿರುವ ಇಸ್ರೋ ಅಂತರಿಕ್ಷ ಭವನದಲ್ಲಿ ಇಸ್ರೋ ಅಧ್ಯಕ್ಷ ಡಾ. ಕೆ.ಶಿವನ್ ಹಾಗೂ ಹಿರಿಯ ವಿಜ್ಞಾನಿಗಳು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ಅವರು ಮಾತುಕತೆ ನಡೆಸಿದರು. 

ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಾಧಾರಿತ ಶಿಕ್ಷಣ, ಸಂಶೋಧನೆ ಮತ್ತು ಅಭಿವೃದ್ಧಿ, ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ, ಮನೋಭಾವ ಮೂಡಿಸುವುದರ ಮೇಲೆ ಭಾರತದ ಭವಿಷ್ಯವಿದೆ. ಶಾಲಾ ಶಿಕ್ಷಣದಲ್ಲಿ ಸರಳವಾಗಿ ಅರ್ಥವಾಗುವಂತೆ ವಿಜ್ಞಾನ, ಗಣಿತವನ್ನು ಪಾಠ ಮಾಡಬೇಕು.ಮಕ್ಕಳಲ್ಲಿ ವಿಜ್ಞಾನದ ಕುರಿತು ಆಸಕ್ತಿ ಮತ್ತು ಕುತೂಹಲ ಮೂಡಿಸುವ ಶಿಕ್ಷಣಕ್ಕೆ ಒತ್ತು ನೀಡಬೇಕಿದೆ ಎಂದು ಡಾ.ಕೆ.ಶಿವನ್ ಹಲವು ಕಾರ್ಯಕ್ರಮಗಳಲ್ಲಿ ಹೇಳಿದ್ದಾರೆ. ಹೀಗಾಗಿ, ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಯಿತು. ರಾಜ್ಯದಲ್ಲಿ ಎನ್‍ಇಪಿ ಜಾರಿಗೆ ಅಗತ್ಯವಾದ ಎಲ್ಲ ರೀತಿಯ ಸಲಹೆ, ಸೂಚನೆ, ಮಾರ್ಗದರ್ಶನವನ್ನು ನೀಡಿ ಸಹಕಾರ ನೀಡುವ ಭರವಸೆಯನ್ನು ಶಿವನ್ ನೀಡಿದ್ದಾರೆ. ಅದಕ್ಕಾಗಿ ಇಸ್ರೋದಿಂದ ಸಮಿತಿಯೊಂದನ್ನು ರಚಿಸುವುದಾಗಿ ತಿಳಿಸಿದ್ದಾರೆ ಎಂದು ನಾಗೇಶ್ ಹೇಳಿದರು. 

ಗ್ರಾಮಾಂತರ ಪ್ರದೇಶಗಳು, ಸರಕಾರಿ ಶಾಲೆಗಳ ಮಕ್ಕಳಲ್ಲಿ ಅಪಾರ ಪ್ರತಿಭೆ ಇದೆ. ಉತ್ತಮ ವೇದಿಕೆ, ಅವಕಾಶಗಳು, ಜ್ಞಾನಾರ್ಜನೆಗೆ ಬೇಕಾದ ಸೌಕರ್ಯಗಳನ್ನು ಒದಗಿಸಬೇಕು. ವಿಷಯಗಳನ್ನು ಸರಳವಾಗಿ ಅರ್ಥೈಸಬೇಕು. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಸರಳವಾಗಿ ಅರ್ಥವಾಗುವಂತೆ ಪಾಠ ಮಾಡಬೇಕು. ಅದಕ್ಕೆ ತಕ್ಕಂತೆ ಪಠ್ಯಗಳನ್ನು ಸಿದ್ಧಪಡಿಸಲು ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಟಾಸ್ಕ್ ಫೋರ್ಸ್  ಕಾರ್ಯ ನಿರ್ವಹಿಸುತ್ತಿದೆ ಎಂದು ನಾಗೇಶ್ ತಿಳಿಸಿದರು. 

ಕೌಶಲ್ಯದ ಶಿಕ್ಷಣ ಇಂದಿನ ಅಗತ್ಯವಾಗಿದೆ. ವಿಜ್ಞಾನ, ಬಾಹ್ಯಾಕಾಶದ ಕುರಿತು ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕು. ಎನ್‍ಇಪಿ ಜಾರಿ ಕುರಿತು ರಾಜ್ಯ ಸರಕಾರಕ್ಕೆ ಅಗತ್ಯವಿರುವ ಎಲ್ಲ ರೀತಿಯ ನೆರವು, ಸಲಹೆಗಳನ್ನು ನೀಡುತ್ತೇವೆ ಎಂದು ಸಚಿವರೊಂದಿಗೆ ಮಾತುಕತೆ ವೇಳೆ ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದರು.

ಸ್ಪೇಸ್ ಆನ್ ವೀಲ್ಸ್ ರಾಜ್ಯದ ಇತರ ಭಾಗಗಳಿಗೆ: ಇಸ್ರೋದ ಸಾಧನೆಗಳು, ಭವಿಷ್ಯದ ಯೋಜನೆಗಳು, ಸೌರಮಂಡಲ, ಬಾಹ್ಯಾಕಾಶದ ಕುರಿತು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಿ, ಆಸಕ್ತಿ ಮೂಡಿಸಲು ಇಸ್ರೋ ಆರಂಭಿಸಿರುವ ಸ್ಪೇಸ್ ಆನ್ ವೀಲ್ಸ್ ವಾಹನವು ರಾಜ್ಯದ ವಿವಿಧ ಜಿಲ್ಲೆಗಳ ಗ್ರಾಮಾಂತರ ಭಾಗಗಳ ಶಾಲೆಗಳಿಗೂ ತೆರಳಲಿದೆ. ಈವರೆಗೆ ಈ ವಾಹನವು ಬೆಂಗಳೂರು ನಗರ ಮತ್ತು ಸುತ್ತ ಮುತ್ತಲಿನ ಭಾಗಗಳಲ್ಲಿ ಮಾತ್ರ ಸಂಚರಿಸುತ್ತಿತ್ತು ಎಂದು ಅವರು ಹೇಳಿದರು.

 ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಪ್ರತಿಭೋತ್ಸವ ನಿರ್ವಹಣಾ ಸಮಿತಿ ರಚನೆ

ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಪ್ರತಿಭೋತ್ಸವ ನಿರ್ವಹಣಾ ಸಮಿತಿ ರಚನೆ


 ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಪ್ರತಿಭೋತ್ಸವ ನಿರ್ವಹಣಾ ಸಮಿತಿ ರಚನೆ 

ಚೇರ್ ಮ್ಯಾನ್: ಸಿನಾನ್ ಸಖಾಫಿ ಹಸನ್ ನಗರ, ಕನ್ವೀನರ್: ಹನೀಫ್ ಬನ್ನೂರ್ 

ಪುತ್ತೂರು : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ವತಿಯಿಂದ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಸಾಂಸ್ಕೃತಿಕ ಹಾಗೂ ಪ್ರತಿಭಾನ್ವೇಷಣಾ ಕಾರ್ಯಕ್ರಮ ಪ್ರತಿಭೋತ್ಸವ - 21 ಇದರ ಪುತ್ತೂರು ಸೆಕ್ಟರ್ ಪ್ರತಿಭೋತ್ಸವ 2021 ಅಕ್ಟೋಬರ್ 17 (ಆದಿತ್ಯವಾರ)  ರಂದು ಹಸನ್ ನಗರದಲ್ಲಿ ನಡೆಸಲು ತೀರ್ಮಾನಿಸಲಾಯಿತು. ಇದರ ನಿರ್ವಹಣಾ ಸಮಿತಿಯ ಚೇರ್‌ಮೆನ್ ಆಗಿ ಸಿನಾನ್ ಸಖಾಫಿ ಹಸನ್ ನಗರ, ಕನ್ವೀನರ್ ಹನೀಫ್ ಬನ್ನೂರ್  ಆಯ್ಕೆಯಾದರು.

ವೈಸ್ ಚೇರ್‌ಮೆನ್ ಆಗಿ ಸಲಾಂ ಹನೀಫಿ ಕಬಕ ಮತ್ತು ಉವೈಸ್ ಬೀಟಿಗೆ, ವೈಸ್ ಕನ್ವೀನರ್ ಆಗಿ ಹಮೀದ್ ಕೊಡಿಪ್ಪಾಡಿ ಮತ್ತು ಬಾತಿಷ್ ಬನ್ನೂರ್, ಫಿನಾನ್ಸಿಯಲ್ ಕಾರ್ಯದರ್ಶಿಗಳಾಗಿ ಮುನೀರ್ ಬೀಟಿಗೆ, ಅಶ್ರಫ್ ಕಬಕ ಮತ್ತು ರಾಶಿದ್ ಮುಖ್ವೆ ಹಾಗೂ ಸಮೀತಿಯ ಸದಸ್ಯರುಗಳಾಗಿ ಖಾದರ್ ಸಖಾಫಿ ಹಸನ್ ನಗರ, ಸೈಫುಲ್ಲಾ ಸಅದಿ ಬನ್ನೂರ್, ಶಿಯಾಬ್ ಹಸನ್ ನಗರ, ಖಲೀಲ್ ಬನ್ನೂರು, ಶಫೀಮ್ ಹಸನ್ ನಗರ, ರಫೀಕ್ ಕೆಮ್ಮಾಯಿ ಇವರನ್ನು ಆಯ್ಕೆ ಮಾಡಲಾಯಿತು.

 ಕುಂದಾಪುರ; ದೋಣಿಯಲ್ಲಿ ಮನೆಗೆ ತೆರಳಿ ಲಸಿಕೆ ನೀಡಿದ ನರ್ಸ್‌, ಆಶಾ ಕಾರ್ಯಕರ್ತೆಯರು: ಸಾರ್ವಜನಿಕರಿಂದ ಭಾರೀ ಪ್ರಶಂಸೆ

ಕುಂದಾಪುರ; ದೋಣಿಯಲ್ಲಿ ಮನೆಗೆ ತೆರಳಿ ಲಸಿಕೆ ನೀಡಿದ ನರ್ಸ್‌, ಆಶಾ ಕಾರ್ಯಕರ್ತೆಯರು: ಸಾರ್ವಜನಿಕರಿಂದ ಭಾರೀ ಪ್ರಶಂಸೆ

 ಕುಂದಾಪುರ; ದೋಣಿಯಲ್ಲಿ ಮನೆಗೆ ತೆರಳಿ ಲಸಿಕೆ ನೀಡಿದ ನರ್ಸ್‌, ಆಶಾ ಕಾರ್ಯಕರ್ತೆಯರು: ಸಾರ್ವಜನಿಕರಿಂದ ಭಾರೀ ಪ್ರಶಂಸೆ

ಕುಂದಾಪುರ: ಬುಧವಾರ ಜಿಲ್ಲೆಯಲ್ಲಿ ಕೋವಿಡ್-19 ಲಸಿಕಾ ಮಹಾಮೇಳದ ಸಂದರ್ಭದಲ್ಲಿ ಬೈಂದೂರು ತಾಲೂಕು ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಇಬ್ಬರು ನರ್ಸ್‌ಗಳು ಹಾಗೂ ಇಬ್ಬರು ಆಶಾ ಕಾರ್ಯಕರ್ತೆಯರು ತಮ್ಮ ಉಪಕೇಂದ್ರ ವ್ಯಾಪ್ತಿಯಲ್ಲಿ ಬರುವ ಹಿರಿಯರಿಗೆ ದೋಣಿ ಮೂಲಕ ಹೊಳೆ ದಾಟಿ ಸಾಗಿ ಲಸಿಕೆ ನೀಡಿದ್ದಾರೆ.

ನರ್ಸ್‌ಗಳಾದ ಮಿತ್ರಾ ಹಾಗೂ ರಾಜೇಶ್ವರಿ ಮತ್ತು ಆಶಾ ಕಾರ್ಯಕರ್ತೆಯರಾದ ದೇವಕಿ ಮತ್ತು ಸಾಕು ಅವರು ಇಂದು ಉಪಕೇಂದ್ರ ವ್ಯಾಪ್ತಿಯ ಕುದ್ರು ಪ್ರದೇಶಕ್ಕೆ ರಮೇಶ್ ಕಾರಂತರ ದೋಣಿ ಮೂಲಕ ಸಾಗಿ, ಮನೆಯಲ್ಲಿದ್ದು ಲಸಿಕಾ ಕೇಂದ್ರಗಳಿಗೆ ಬರಲಾಗದ ಹಿರಿಯರಿಗೆ ಕೋವಿಡ್-19 ಲಸಿಕೆಯನ್ನು ನೀಡಿದ್ದಾರೆ.

ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಹಾಗೂ ಆಶಾ ಕಾರ್ಯಕರ್ತೆಯರ ಈ ನಡೆ ಭಾರೀ ಜನಮೆಚ್ಚುಗೆಗೆ ಪಾತ್ರವಾಗಿದೆ. ಹಾಗೂ ಉಳಿದವರಿಗೆ ಸ್ಪೂರ್ತಿಯನ್ನು ತುಂಬಿದೆ ಎಂದು ಸರಕಾರಿ ವೈದ್ಯರೊಬ್ಬರು ತಿಳಿಸಿದರು.

Tuesday, 28 September 2021

 ಯಾದಗಿರಿಯಲ್ಲಿ ಮತಾಂತರಕ್ಕೆ ಯತ್ನ ಪ್ರಕರಣ; ನಾಲ್ವರ ಬಂಧನ

ಯಾದಗಿರಿಯಲ್ಲಿ ಮತಾಂತರಕ್ಕೆ ಯತ್ನ ಪ್ರಕರಣ; ನಾಲ್ವರ ಬಂಧನ

ಯಾದಗಿರಿಯಲ್ಲಿ ಮತಾಂತರಕ್ಕೆ ಯತ್ನ ಪ್ರಕರಣ; ನಾಲ್ವರ ಬಂಧನ


ಯಾದಗಿರಿ: ಯಾದಗಿರಿಯ ನೀಲಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಸಮುದಾಯದ ಜನರ ಬಲವಂತದ ಮತಾಂತರಕ್ಕೆ ಯತ್ನಿಸಿದ ಆರೋಪದಡಿ ನಾಲ್ವರನ್ನು ಸೈದಾಪುರ ಪೊಲೀಸರು ಬಂಧಿಸಿದ್ದಾರೆಂದು ತಿಳಿದುಬಂದಿದೆ.

ಇಬ್ಬರು ಮಹಿಳೆಯರು ಸೇರಿ ನಾಲ್ವರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ. ಬಂಧಿತರನ್ನು 'ಕ್ರೈಸ್ತ ಪಾದ್ರಿ ಜೇಮ್ಸ್ ಡೇವಿಡ್ ದಾಸ್ ಮಾಧ್ವಾರ, ಶಾಂತರಾಜ ಜೇಮ್ಸ್ ದಾಸ್, ನೀಲಮ್ಮ ಜೇಮ್ಸ್‌ದಾಸ್, ಮಾಳಮ್ಮ ರಾಘವೇಂದ್ರ ಎಂಬುವವರನ್ನು ಬಂಧನಕ್ಕೊಳಪಡಿಸಲಾಗಿದ್ದು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ' ಎಂದು ಸಿಪಿಐ ವಿಜಯ ಕುಮಾರ ತಿಳಿಸಿದ್ದಾರೆ.

ಬಂಧಿತರು ಗ್ರಾಮಸ್ಥರನ್ನು ಪ್ರಮುಖವಾಗಿ ದಲಿತರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದು, ಇದಕ್ಕೆ ಕೆಲವು ಯುವಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಯುವಕರು ಹಾಗೂ ಪಾದ್ರಿ ಜೇಮ್ಸ್ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಸಾಮೂಹಿಕ ಮತಾಂತರಕ್ಕಾಗಿ ಸರ್ಕಾರದ ಆದೇಶವಿದೆ ಪಾದ್ರಿ ಜೇಮ್ಸ್ ಹೇಳಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ,

ಮಾತಿನ ಚಕಮಕಿ ವೇಳೆ ಪಾದ್ರಿ ಜೇಮ್ಸ್ ಅವರು, ದಲಿತರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವುದು ವಾಸ್ತವವಾಗಿ "ಮತಂತರ" ಅಲ್ಲ, ಆದರೆ "ರೂಪಾಂತರ" ಎಂದು ಹೇಳಿದರು. ಈ ವೇಳೆ ಗ್ರಾಮದಲ್ಲಿ ಚರ್ಚ್ ಇಲ್ಲದಿರುವಾಗ ನೀವೇಕೆ ಹಳ್ಳಿಗಳಲ್ಲಿನ ಜನರನ್ನು ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದೀರಿ ಎಂದು ಕೇಳಲಾಗಿತ್ತು. ಈ ವೇಳೆ ಇದೀಗ ಗ್ರಾಮದಲ್ಲಿರುವವರನ್ನು ಮತಾಂತರ ಮಾಡಲು ಎಲ್ಲಾ ರೀತಿಯ ಶ್ರಮವನ್ನು ಪಡಲಾಗುತ್ತಿದೆ. ಅವರ ನಂಬಿಕೆ ಬದಲಾದ ಬಳಿಕ ಯೇಸುವಿನ ಆಶೀರ್ವಾದ ಅವರಿಗೆ ಸಿಗಲಿದೆ ಎಂದು ಪಾದ್ರಿ ಹೇಳುತ್ತಿದ್ದರು ಎಂದು ಯುವಕರು ಹೇಳಿಕೊಂಡಿದ್ದಾರೆ.

ಇದಷ್ಟೇ ಅಲ್ಲದೆ, ಸಾಮೂಹಿಕ ಮತಾಂತರಕ್ಕೆ ಸರ್ಕಾರದ ಆದೇಶವಿದೆ ಎಂದು ಹೇಳುತ್ತಿದ್ದ ಪಾದ್ರಿ, ಸರ್ಕಾರದ ಆದೇಶವನ್ನು ತೋರಿಸಲು ಮಾತ್ರ ನಿರಾಕರಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.

ಆರೋಪಿಗಳು ಭಾನುವಾರ (ಸೆ.26)ರಂದು ನೀಲಹಳ್ಳಿ ಗ್ರಾಮದಲ್ಲಿ ಮತಾಂತರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ನರಸಪ್ಪ ಭೀಮರಾಯ ಜೇಗರ ದೂರು ನೀಡಿದ್ದರು ಎಂದು ಪಿಎಸ್‌ಐ ಭೀಮರಾಯ ಬಂಕ್ಲಿ ತಿಳಿಸಿದ್ದಾರೆ.

ಮತಾಂತರ ಸಂಬಂಧ ಯುವಕರು ನಾಲ್ವರ ವಿರುದ್ಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಭಾನುವಾರವೇ ದೂರು ದಾಖಲಿಸಿದ್ದಾರೆ. ಈ ಬೆಳವಣಿಗೆ ಬಳಿಕ ಬಂಧಿತರು ಪ್ರತಿದೂರು ದಾಖಲಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಗ್ರಾಮದ ಯುವಕರು ಮತ್ತು ಇತರರು ಸೋಮವಾರ ಸಂಜೆ ಸೈದಾಪುರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು.


ಮುಂಬೈ ಮಣಿಸಿದ ಹುಮ್ಮಸ್ಸಿನಲ್ಲಿರುವ ಆರ್ಸಿಬಿಗೆ ಮತ್ತೊಂದು ಗೆಲುವಿನ ತವಕ

ಮುಂಬೈ ಮಣಿಸಿದ ಹುಮ್ಮಸ್ಸಿನಲ್ಲಿರುವ ಆರ್ಸಿಬಿಗೆ ಮತ್ತೊಂದು ಗೆಲುವಿನ ತವಕ


ಮುಂಬೈ ಮಣಿಸಿದ ಹುಮ್ಮಸ್ಸಿನಲ್ಲಿರುವ ಆರ್ಸಿಬಿಗೆ ಮತ್ತೊಂದು ಗೆಲುವಿನ ತವಕ

ದುಬೈ: ಕಳೆದ ಮೂರು ದಿನಗಳ ಹಿಂದೆಯಷ್ಟೇ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಜಯಗಳಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ.

ಇದುವರೆಗೆ ಆಡಿದ 10 ಪಂದ್ಯಗಳಿಂದ 12 ಅಂಕ ಕಲೆಹಾಕಿರುವ ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ಈ ಪಂದ್ಯದಲ್ಲಿ ಗೆದ್ದರೆ ಪ್ಲೇಆಫ್ ಹಂತಕ್ಕೆ ಹತ್ತಿರವಾಗಲಿದೆ. ಆಡಿದ 10 ಪಂದ್ಯಗಳಲ್ಲಿ 8 ಅಂಕ ಗಳಿಸಿರುವ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತಲ್ಲಿ ವಿರಾಟ್ ಕೊಹ್ಲಿ ಬಳಗಕ್ಕೆ ಪ್ಲೇಆಫ್ ಹಂತದ ಹಾದಿ ಕಠಿಣವಾಗಲಿದೆ. ಮೊದಲ ಎರಡು ಪಂದ್ಯ ಸೋತು ಮೂರನೇ ಪಂದ್ಯವನ್ನು ಗೆದ್ದ ಆರ್ಸಿಬಿ ಇಂದಿನ ಪಂದ್ಯವನ್ನು ಕೂಡ ಗೆಲ್ಲುವ ತವಕದಲ್ಲಿದೆ. ಇದಕ್ಕಾಗಿ ಕೊಹ್ಲಿ ಬಳಗ ಕಾರ್ಯತಂತ್ರ ರೂಪಿಸಿದೆ.

24 ಪಂದ್ಯಗಳಲ್ಲಿ ಆರ್ಸಿಬಿ ಮತ್ತು ರಾಜಸ್ತಾನ ರಾಯಲ್ಸ್ ಮುಖಾಮುಖಿಯಾಗಿದ್ದು, ಬೆಂಗಳೂರು ತಂಡ 11 ಪಂದ್ಯಗಳಲ್ಲಿ, ರಾಜಸ್ಥಾನ 10 ಪಂದ್ಯಗಳಲ್ಲಿ ಜಯಗಳಿಸಿದೆ.

 ಇನ್ನೂ ದುಬಾರಿಯಾಗಲಿದೆ ಗಗನಕ್ಕೇರಿರುವ ಪೆಟ್ರೋಲ್ ಬೆಲೆ

ಇನ್ನೂ ದುಬಾರಿಯಾಗಲಿದೆ ಗಗನಕ್ಕೇರಿರುವ ಪೆಟ್ರೋಲ್ ಬೆಲೆ


 ಇನ್ನೂ ದುಬಾರಿಯಾಗಲಿದೆ ಗಗನಕ್ಕೇರಿರುವ ಪೆಟ್ರೋಲ್ ಬೆಲೆ

ನವದೆಹಲಿ: ಮೊದಲೇ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ಕಚ್ಚಾ ತೈಲ ದರ 80 ಡಾಲರ್ ಗೆ ಜಿಗಿದಿದೆ. ಇದರಿಂದಾಗಿ ಈಗಾಗಲೇ ಬೆಲೆ ಏರಿಕೆಯಲ್ಲಿ ದಾಖಲೆ ಬರೆದಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಇನ್ನಷ್ಟು ದುಬಾರಿಯಾಗಲಿದೆ.

ಕಚ್ಚಾ ತೈಲ ದರ ಕಳೆದ ಮೂರು ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ಏರಿದೆ. ಕೊರೋನಾ ನಿರ್ಬಂಧ ಸಡಿಲವಾದ ನಂತರ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲದ ಬೇಡಿಕೆ ಹೆಚ್ಚಾಗಿದೆ. ತೈಲ, ಅನಿಲ, ಕಲ್ಲಿದ್ದಲು ಪೂರೈಕೆಯಲ್ಲಿ ಜಾಗತಿಕ ಬಿಕ್ಕಟ್ಟು ಉಂಟಾಗಿದೆ. ಅಮೆರಿಕದಲ್ಲಿ ಚಂಡಮಾರುತಗಳ ಕಾರಣದಿಂದ ತೈಲೋತ್ಪಾದನೆಗೆ ಅಡಚಣೆಯಾಗಿದೆ. ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇವೆಲ್ಲ ಕಾರಣದಿಂದ ಕಚ್ಚಾತೈಲ ದರ ಜಾಸ್ತಿಯಾಗಿದೆ.

ಭಾರತ ಶೇಕಡ 85 ರಷ್ಟು ತೈಲ ಆಮದು ಮಾಡಿಕೊಳ್ಳುವುದರಿಂದ ಜಾಗತಿಕ ಮಾರುಕಟ್ಟೆ ಬೆಳವಣಿಗೆಗಳು ಪರಿಣಾಮ ಬೀರುತ್ತವೆ. ಹೀಗಾಗಿ ತೈಲದರ ಮತ್ತಷ್ಟು ದುಬಾರಿಯಾಗಲಿದೆ ಎನ್ನಲಾಗಿದೆ.

Monday, 27 September 2021

ಬೆಂಗಳೂರಿನಲ್ಲಿ ಮತ್ತೊಂದು 3 ಅಂತಸ್ತಿನ ಕಟ್ಟಡ ಕುಸಿತ

ಬೆಂಗಳೂರಿನಲ್ಲಿ ಮತ್ತೊಂದು 3 ಅಂತಸ್ತಿನ ಕಟ್ಟಡ ಕುಸಿತ

ಬೆಂಗಳೂರಿನಲ್ಲಿ ಮತ್ತೊಂದು 3 ಅಂತಸ್ತಿನ ಕಟ್ಟಡ ಕುಸಿತ

ಬೆಂಗಳೂರು : ಬೆಂಗಳೂರಿನಲ್ಲಿ 3 ಅಂತಸ್ತಿನ ಮನೆ ಕುಸಿತ ಪ್ರಕರಣದ ಬೆನ್ನಲ್ಲೇ ಇಂದು ಮತ್ತೊಂದು 3 ಅಂತಸ್ತಿನ ಕಟ್ಟಡ ಕುಸಿತವಾಗಿರುವ ಘಟನೆ ನಡೆದಿದೆ.

ಬೆಂಗಳೂರಿನ ಡೇರಿ ಸರ್ಕಲ್ ಬಳಿಯಿರುವ ಕೆಎಂಎಫ್ ಕ್ವಾಟರ್ಸ್ ನೊಳಗೆ ಇರುವ 3 ಅಂತಸ್ತಿನ ಕಟ್ಟಡ ಕುಸಿತವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಮಾಹಿತಿ ತಿಳಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

'ನವೋದಯ ವಿದ್ಯಾಲಯ'ದ 6ನೇ ತರಗತಿಯ 'ಪ್ರವೇಶ ಪರೀಕ್ಷೆ'ಯ ಫಲಿತಾಂಶ ಪ್ರಕಟ : ಫಲಿತಾಂಶ ವೀಕ್ಷಿಸಲು ಹೀಗ್ ಮಾಡಿ

 ಬ್ಲ್ಯೂಟೂತ್ ಚಪ್ಪಲಿ ಧರಿಸಿ ಅರ್ಹತಾ ಪರೀಕ್ಷೆ ಬರೆಯುತ್ತಿದ್ದ ಐವರು ಶಿಕ್ಷಕರು ಅಂದರ್

ಬ್ಲ್ಯೂಟೂತ್ ಚಪ್ಪಲಿ ಧರಿಸಿ ಅರ್ಹತಾ ಪರೀಕ್ಷೆ ಬರೆಯುತ್ತಿದ್ದ ಐವರು ಶಿಕ್ಷಕರು ಅಂದರ್


ಬ್ಲ್ಯೂಟೂತ್ ಚಪ್ಪಲಿ ಧರಿಸಿ ಅರ್ಹತಾ ಪರೀಕ್ಷೆ ಬರೆಯುತ್ತಿದ್ದ ಐವರು ಶಿಕ್ಷಕರು ಅಂದರ್

ಜೈಪುರ: ಬ್ಲ್ಯೂಟೂತ್​ ಸಾಧನ ಅಳವಡಿಸಿದ್ದ ಹೈಟೆಕ್ ಚಪ್ಪಲಿ ಧರಿಸಿ ರಾಜಸ್ಥಾನ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಕಾಪಿ ಚಿಟ್ ನಡೆಸುವ ಮೂಲಕ ಪರೀಕ್ಷಾ ವಂಚನೆ ನಡೆಸಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ

ಬಂಧಿತರಿಂದ ವಶಕ್ಕೆ ಪಡೆಯಲಾದ ಚಪ್ಪಲಿ ಮೌಲ್ಯ ಬರೋಬ್ಬರಿ 6 ಲಕ್ಷ ರೂಪಾಯಿ. ಇತ್ತೀಚೆಗಷ್ಟೇ ಗ್ಯಾಂಗ್​ ಒಂದು ತಲಾ 6 ಲಕ್ಷ ರೂ.ನಂತೆ 25 ಮಂದಿಗೆ ಚಪ್ಪಲಿಗಳನ್ನು ಮಾರಾಟ ಮಾಡಿತ್ತು. ಬ್ಲ್ಯೂಟೂತ್​ ಇರುವ ಚಪ್ಪಲಿಯ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಅನೇಕರ ಹುಬ್ಬೇರಿಸಿದೆ.

ಶಿಕ್ಷಕರ ಅರ್ಹತಾ ಪರೀಕ್ಷೆ ಎದುರಿಸಿದ್ದ ಕೆಲ ಅಭ್ಯರ್ಥಿಗಳ ಚಪ್ಪಲಿ ಮತ್ತು ಕಿವಿಯಲ್ಲಿ ಬ್ಲ್ಯೂಟೂತ್​ ಸಾಧನ ಇರುವುದು ಪತ್ತೆಯಾದ ಬಳಿಕ ಅವರನ್ನು ವಿಚಾರಣೆ ನಡೆಸಿ ಬಂಧಿಸಲಾಗಿದೆ ಎಂದು ಅಜ್ಮೇರ್​ ಪೊಲೀಸ್​ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಬಂಧಿತ ಐವರಲ್ಲಿ ಓರ್ವ ಮಹಿಳೆಯು ಸೇರಿದ್ದಾರೆ. ಮಾರಾಟ ಮಾಡುತ್ತಿದ್ದವರನ್ನು ಸಹ ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

 ಮಾಜಿ ರಾಷ್ಟ್ರೀಯ ಆಟಗಾರ, ಚಿನ್ನದ ಪದಕ ವಿಜೇತ ಸೂರಜ್​ ಬಂಧನ..!

ಮಾಜಿ ರಾಷ್ಟ್ರೀಯ ಆಟಗಾರ, ಚಿನ್ನದ ಪದಕ ವಿಜೇತ ಸೂರಜ್​ ಬಂಧನ..!

 

ಮಾಜಿ ರಾಷ್ಟ್ರೀಯ ಆಟಗಾರ, ಚಿನ್ನದ ಪದಕ ವಿಜೇತ ಸೂರಜ್​ ಬಂಧನ..!

ನವದೆಹಲಿ: ಎರಡು ಬಾರಿ ಚಿನ್ನದ ಪದಕ ವಿತೇಜ, 28 ವರ್ಷದ ಮಾಜಿ ರಾಷ್ಟ್ರೀಯ ಟೇಕ್ವಾಂಡೋ ಆಟಗಾರ ಹಾಗೂ ಇಂಡಿಯನ್​ ಐಡಲ್​ ಹೆಸರಿನ ಕಿರುತೆರೆ ಕಾರ್ಯಕ್ರಮದಲ್ಲೂ ಮಿಂಚಿದ್ದ ಸೂರಜ್​ ಅಲಿಯಾಸ್​ ಫೈಟರ್​ನನ್ನು ದೆಹಲಿ ಪೊಲೀಸರು ಸುಲಿಗೆ ಪ್ರಕರಣದಲ್ಲಿ ಬಂಧಿಸಿದ್ದಾರೆ.

ಸೂರಜ್​ ವಿರುದ್ಧ 100ಕ್ಕೂ ಅಧಿಕ ಸುಲಿಗೆ ಪ್ರಕರಣಗಳಿದ್ದು, ಪಶ್ಚಿಮ ದೆಹಲಿ ಪೊಲೀಸರು ಮಾಜಿ ರಾಷ್ಟ್ರೀಯ ಆಟಗಾರನನ್ನು ಬಂಧಿಸಿದ್ದಾರೆ. ಆರೋಪಿ ಸೂರಜ್​, ದೆಹಲಿಯ ಉತ್ತಮ ನಗರದ ಬಳಿಯ ವಿಕಾಸ್​ ನಗರದ ನಿವಾಸಿ.

ಕಳೆದ ಬುಧವಾರ ದೆಹಲಿ ಪೊಲೀಸರು ಮೋತಿ ನಗರದಲ್ಲಿ ಗಸ್ತು ತಿರುಗುವಾಗ ಸ್ಕೂಟರ್​ ಮೇಲೆ ಅನುಮಾನ ಹುಟ್ಟಿಸುವ ವ್ಯಕ್ತಿಯೊಬ್ಬನನ್ನು ನೋಡಿದ್ದಾರೆ. ಬಳಿಕ ಆತನನ್ನು ಹಿಂಬಾಲಿಸಿದ್ದಾರೆ. ಮೊದಲ ಆತನ ಸ್ಕೂಟರ್​ ಮಾಹಿತಿಯನ್ನು ಕಲೆ ಹಾಕಿದಾಗ ಆ ಸ್ಕೂಟರ್​ ಕೀರ್ತಿ ನಗರದಲ್ಲಿ ಕಳುವಾಗಿರುವ ಬಗ್ಗೆ ಪೊಲೀಸರಿಗೆ ಗೊತ್ತಾಗಿದೆ.

ಬಳಿಕ ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ತನ್ನ ತಪ್ಪುಗಳನ್ನೆಲ್ಲ ಒಪ್ಪಿಕೊಂಡಿದ್ದಾರೆ. ಉತ್ತರ ದೆಹಲಿ ಭಾಗದ ಮಂಡಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಅನೇಕ ಮೊಬೈಲ್​ ಫೋನ್​ಗಳನ್ನು ಎಗರಿಸಿರುವುದಾಗಿ ಮತ್ತು 2.5 ಕೆಜಿ ಚಿನ್ನವನ್ನು ದರೋಡೆ ಮಾಡಿರುವುದಾಗಿ ಆರೋಪಿ ಸೂರಜ್​ ಬಾಯ್ಬಿಟ್ಟಿದ್ದಾನೆ.

ತನ್ನಿಬ್ಬರು ಸಹಚರರೊಂದಿಗೆ ಮೋಟಾರ್ ಸೈಕಲ್ ಮೇಲೆ ದೇಶೀಯ ಪಿಸ್ತೂಲ್ ಮತ್ತು ಚಾಕುವನ್ನು ಬಳಸಿ ಆರೋಪಿ ಸೂರಜ್​ ದರೋಡೆ ಮಾಡುತ್ತಿದ್ದ. ದೆಹಲಿಯ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಪಶ್ಚಿಮ, ಹೊರ, ಮಧ್ಯ ಮತ್ತು ಉತ್ತರ ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ಸುಲಿಗೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿ ಹೇಳಿದರು.

ಆರೋಪಿಯಿಂದ ಒಂದು ದೇಶೀ ನಿರ್ಮಿತ ಪಿಸ್ತೂಲ್, ಒಂದು ಜೀವಂತ ಗುಂಡು ಮತ್ತು 55 ಮೊಬೈಲ್ ಫೋನ್ ಮತ್ತು ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂದಹಾಗೆ ಸೂರಜ್ ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಅವರು ಟೇಕ್ವಾಂಡೋ ಸ್ಪರ್ಧೆಯಲ್ಲಿ ಎರಡು ಬಾರಿ ರಾಷ್ಟ್ರೀಯ ಚಿನ್ನದ ಪದಕ ವಿಜೇತರು. ಅವರು ಉತ್ತಮ ಗಾಯಕರೂ ಆಗಿದ್ದಾರೆ ಮತ್ತು 2008 ರಲ್ಲಿ ಇಂಡಿಯನ್ ಐಡಲ್ ಸೀಸನ್ 4 ರಲ್ಲಿ ಭಾಗವಹಿಸಿದ್ದಾರೆ ಮತ್ತು ಟಾಪ್ 50 ಸ್ಪರ್ಧಿಗಳಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಕಿರುಕುಳಕ್ಕೆ ಬಸ್ ಕಂಡಕ್ಟರ್ ಆತ್ಮಹತ್ಯೆ

ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಕಿರುಕುಳಕ್ಕೆ ಬಸ್ ಕಂಡಕ್ಟರ್ ಆತ್ಮಹತ್ಯೆ

ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಕಿರುಕುಳಕ್ಕೆ ಬಸ್ ಕಂಡಕ್ಟರ್ ಆತ್ಮಹತ್ಯೆ

ಮಂಗಳೂರು, ಸೆಪ್ಟೆಂಬರ್ 28: ಸರ್ಕಾರಿ ಇಲಾಖೆಗಳಲ್ಲಿ ಮೇಲಾಧಿಕಾರಿಗಳ ವಿರುದ್ಧ ದಬ್ಬಾಳಿಕೆ ದೂರುಗಳು ಸಾಮಾನ್ಯವಾಗಿ ಕೇಳಿ ಬರುತ್ತವೆ. ಅದರಲ್ಲೂ ಕೆಎಸ್‌ಆರ್‌ಟಿಸಿ ಇಲಾಖೆಯಲ್ಲಿ ಮೇಲಾಧಿಕಾರಿಗಳ ಕಿರುಕುಳ ಆರೋಪ ಹೊಸದೇನಲ್ಲ.

ಮಂಗಳೂರಿನ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ವಿರುದ್ಧ ಕಿರುಕುಳದ ಆರೋಪ ಈಗ ಮತ್ತೆ ಕೇಳಿ ಬಂದಿದೆ. ಸಾರಿಗೆ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಕಾರಣ ಮೇಲಧಿಕಾರಿಗಳ ಕಿರುಕುಳ ಎಂದು ಮೃತನ ಕುಟುಂಬದವರು ಆರೋಪಿಸಿದ್ದಾರೆ.

ಮಂಗಳೂರಿನ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ವಿರುದ್ಧ ಮತ್ತೆ ಗಂಭೀರ ಆರೋಪ ಕೇಳಿಬಂದಿದೆ. ಮಂಗಳೂರು ಹೊರವಲಯದ ಕುಂಟಿಕಾನ ಎಂಬಲ್ಲಿ ಸಾರಿಗೆ ನೌಕರರೊಬ್ಬರು ಆತ್ಮಹತ್ಯೆ  ಮಾಡಿಕೊಂಡಿದ್ದಾರೆ. ಮಂಗಳೂರಿನ ಮೂರನೇ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಎಸ್‌ಆರ್‌ಟಿಸಿ ಚಾಲಕ ಕಂ ನಿರ್ವಾಹಕ ನಿಂಗಪ್ಪ ಸೋಮವಾರ ರಾತ್ರಿ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.

ಮೂಲತಃ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ರಾಮವಡಗಿ ಗ್ರಾಮದವರಾದ ನಿಂಗಪ್ಪ ಡ್ರೈವರ್ ಕಂ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಕಳೆದ 6 ತಿಂಗಳ ಹಿಂದೆ ಕರ್ತವ್ಯಲೋಪದ ಅಡಿಯಲ್ಲಿ ಅವರನ್ನು ಅಮಾನತ್ತು ಮಾಡಲಾಗಿತ್ತು. ಮನೆಯವರಿಗೆ ಕರೆ ಮಾಡಿ ಮೇಲಾಧಿಕಾರಿಗಳು ಕ್ಷುಲ್ಲಕ ಕಾರಣಕ್ಕಾಗಿ ಸಸ್ಪೆಂಡ್ ಮಾಡಿದ್ದಾರೆ ಎಂದು ತಿಳಿಸಿದ್ದರು.

"ಡಿಪೋದಲ್ಲಿ ಬಸ್‌ನ್ನು ಹಿಂದೆ ತೆಗೆಯುವ ವಿಚಾರದಲ್ಲಿ ಮಾತಿಗೆ ಮಾತಾಗಿತ್ತು. ಈ ದ್ವೇಷದ ಹಿನ್ನಲೆಯಲ್ಲಿ ಇಲ್ಲಸಲ್ಲದ ಆರೋಪ ಹೊರಿಸಿ ಸಸ್ಪೆಂಡ್ ಮಾಡಿದ್ದಾರೆ ಎಂದು ಮನೆಯವರಿಗೆ ಹೇಳಿದ್ದು, ಇನ್ನು ಇದೇ ಕಾರಣಕ್ಕೆ ತುಂಬಾ ಬೇಸರದಲ್ಲಿದ್ದರು. 6 ತಿಂಗಳಾದರೂ ಸಸ್ಪೆಂಡ್ ವಾಪಸ್ ಪಡೆಯದ ಕಾರಣ ಹಣಕಾಸಿನ ಸಮಸ್ಯೆಯಾಗಿತ್ತು. ಇದೇ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ," ಎಂದು ಮನೆಯವರು ಮತ್ತು ಸಂಬಂಧಿಕರು ಆರೋಪಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಟಿಸಿ ನಂದಕುಮಾರ್, ಡಿಟಿಒ ಕಮಲಾಕರ್ ಹಾಗೂ ಕೆಎಸ್‌ಆರ್‌ಟಿಸಿ ಜಿಲ್ಲಾ ಅಧಿಕಾರಿ ಅರುಣ್ ಕುಮಾರ್ ವಿರುದ್ದ ಆರೋಪ ಮಾಡಿದ್ದಾರೆ.

ಆದರೆ ಈ ಆರೋಪವನ್ನು ಸಾರಿಗೆ ಇಲಾಖೆ ಅಧಿಕಾರಿಗಳು ತಳ್ಳಿಹಾಕಿದ್ದಾರೆ. "ಮೃತ ನಿಂಗಪ್ಪ ಕುಡಿತದ ಚಟವನ್ನು ಹೊಂದಿದ್ದ ಕಾರಣ ಕರ್ತವ್ಯಲೋಪ ಎಸಗುತ್ತಿದ್ದ. ಆದ್ದರಿಂದ ಎಷ್ಟೋ ಬಾರಿ ಎಚ್ಚರಿಕೆ ನೀಡಿದ್ದೇವೆ. ಅದರೂ ಆತ ಕರ್ತವ್ಯ ಲೋಪ ಎಸಗುತ್ತಿದ್ದ ಕಾರಣ ಅಮಾನತ್ತು ಮಾಡಿದ್ದೆವು. ಸಸ್ಪೆಂಡ್ ರಿವೋಕ್ ಕೂಡ ಆಗುವ ಹಂತದಲ್ಲಿತ್ತು. ಇನ್ನು ವೈಯುಕ್ತಿಕ ಸಮಸ್ಯೆಯಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ," ಎಂದು ಕೆಎಸ್‌ಆರ್‌ಟಿಸಿ ಜಿಲ್ಲಾ ಅಧಿಕಾರಿ ಹೇಳಿದ್ದಾರೆ.

ಇನ್ನು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹೇಳುವ ಪ್ರಕಾರ, "ಮಂಗಳೂರಿನ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಮ್ಮ‌ ಕೆಳಗಿನ ಸಿಬ್ಬಂದಿಗಳಿಗೆ ಕಿರುಕುಳ‌ ನೀಡುತ್ತಿದ್ದಾರೆ. ಹೇಳದ ಮಾತು ಕೇಳದಿದ್ದಲ್ಲಿ ಟಾರ್ಗೆಟ್ ಮಾಡುತ್ತಿದ್ದಾರೆ. ಸಾರಿಗೆ ಮುಷ್ಕರ ಸಂದರ್ಭದ ಹೋರಾಟದಲ್ಲಿ ಕೈ ಜೋಡಿಸಿದ ಬಸ್ ಚಾಲಕ ಮತ್ತು ನಿರ್ವಾಹಕರನ್ನು ಹೀನವಾಗಿ ನೋಡಿಕೊಳ್ಳಲಾಗುತ್ತಿದೆ. ಕ್ಷುಲ್ಲಕ ವಿಚಾರಕ್ಕಾಗಿ ಸಂಬಳ ತಡೆ ಹಿಡಿಯುವುದು, ಕೇಸ್ ಹಾಕುವುದು ಮಾಡುತ್ತಿದ್ದಾರೆ. ಇವರ ಜೊತೆ ಬದುಕುವುದಕ್ಕೆ ಸಾಧ್ಯವೇ ಇಲ್ಲ. ಆತ್ಮಹತ್ಯೆಯೇ ದಾರಿ," ಅಂತ ದೂರಿದ್ದಾರೆ.

ಇನ್ನು ಮೃತ ನಿಂಗಪ್ಪ ಕುಟುಂಬಸ್ಥರು ತಮಗೆ ನ್ಯಾಯ ಬೇಕು ಎಂದು ಆಗ್ರಹಿಸಿ ಮಂಗಳೂರಿನ ಉರ್ವ ಪೊಲೀಸ್ ಠಾಣೆ ಬಳಿ ಮೃತದೇಹದೊಂದಿಗೆ ಆಗಮಿಸಿ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ. ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಪೊಲೀಸರು ಈ ಬಗ್ಗೆ ಸರಿಯಾದ ತನಿಖೆ ನಡೆಸಿ ಸತ್ಯಾಸತ್ಯತೆ ಹೊರ ತೆಗೆಯುತ್ತಾರಾ ಎಂಬುವುದನ್ನು ಕಾದು ನೋಡಬೇಕಿದೆ. ಗುಲಾಬ್ ಅಬ್ಬರಕ್ಕೆ ಆಂಧ್ರದಲ್ಲಿ 3 ಸಾವು, ಒಡಿಶಾ ಪಾರು

ಗುಲಾಬ್ ಅಬ್ಬರಕ್ಕೆ ಆಂಧ್ರದಲ್ಲಿ 3 ಸಾವು, ಒಡಿಶಾ ಪಾರು


ಗುಲಾಬ್ ಅಬ್ಬರಕ್ಕೆ ಆಂಧ್ರದಲ್ಲಿ 3 ಸಾವು, ಒಡಿಶಾ ಪಾರು

ವಿಶಾಖಪಟ್ಟಣಂ/ಭುವನೇಶ್ವರ: ಆಂಧ್ರ ಪ್ರದೇಶದಲ್ಲಿ ಗುಲಾಬ್ ಚಂಡಮಾರುತದ ಅಬ್ಬರಕ್ಕೆ ಮೂವರು ಬಲಿಯಾಗಿದ್ದಾರೆ. ರವಿವಾರ ರಾತ್ರಿ ಆಂಧ್ರದ ಕಾಳಿಂಗಪಟ್ಟಣಂ ಬಳಿ ಅಪ್ಪಳಿಸಿದ ಚಂಡಮಾರುತ ಶ್ರೀಕಾಕುಲಂ ಮತ್ತು ವೈಝಾನಗರಂ ಜಿಲ್ಲೆಗಳಲ್ಲಿ ವ್ಯಾಪಕ ಹಾನಿ ಮಾಡಿದೆ. ಆದರೆ ಚಂಡಮಾರುತದ ಅಬ್ಬರದಿಂದ ಒಡಿಶಾ ಪಾರಾಗಿದೆ. ವ್ಯಾಪಕ ಗಾಳಿಯಿಂದಾಗಿ ರಾಜ್ಯದ ಕೆಲವೆಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ ಮತ್ತು ದೂರವಾಣಿ ವ್ಯವಸ್ಥೆ ಅಸ್ತವ್ಯಸ್ತಗೊಂಡದ್ದು ಹೊರತುಪಡಿಸಿದರೆ ರಾಜ್ಯದಲ್ಲಿ ವ್ಯಾಪಕ ಹಾನಿಯಾಗಿಲ್ಲ.

ಆಂಧ್ರ ಪ್ರದೇಶದಲ್ಲಿ ಚಂಡಮಾರುತ ವ್ಯಾಪಕ ಹಾನಿ ಮಾಡಿದೆ. ವಿದ್ಯುತ್ ಸಂಪರ್ಕ ಮತ್ತು ಸಂಪರ್ಕ ಸಾಧನಗಳು ಅಸ್ತವ್ಯಸ್ತಗೊಂಡಿವೆ. ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆಗೆ ಹಾನಿಯಾಗಿದೆ. ವಿಶಾಖಪಟ್ಟಣಂನಲ್ಲಿ ಡಿ.ಭವಾನಿ (37) ಎಂಬ ಮಹಿಳೆ ಚಂಡಮಾರುತದಿಂದ ಸಂಭವಿಸಿದ ಮನೆಕುಸಿತದಲ್ಲಿ ಮೃತಪಟ್ಟಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ರಸ್ತೆ ಸಾರಿಗೆ ಸಂಸ್ಥೆಯ ಉದ್ಯೋಗಿ ಪಿ.ನಾಗೇಶ್ವರ ರಾವ್ ಎಂಬವವರು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಶ್ರೀಕಾಕುಲಂ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಆಂಧ್ರ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ, ಚಂಡಮಾರುತ ಸಂಬಂಧಿ ಅನಾಹುತಗಳಲ್ಲಿ ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾದ ಎಲ್ಲರಿಗೆ ತಲಾ ಒಂದು ಸಾವಿರ ರೂಪಾಯಿ ನೆರವು ಪ್ರಕಟಿಸಿದ್ದಾರೆ. ಹಲವು ಗ್ರಾಮಗಳಲ್ಲಿ ರಸ್ತೆಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದ್ದು, ನೂರಾರು ವಿದ್ಯುತ್ ಕಂಬಗಳು ಬಿದ್ದಿರುವ ಹಿನ್ನೆಲೆಯಲ್ಲಿ ಇಡೀ ನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ದೂರವಾಣಿ ವ್ಯವಸ್ಥೆ ಕೂಡಾ ಅಸ್ತವ್ಯಸ್ತಗೊಂಡಿದೆ. ಬೆಳೆಹಾನಿ ಬಗ್ಗೆ ವರದಿ ಸಿದ್ಧಪಡಿಸಿ ತಕ್ಷಣ ಪರಿಹಾರ ಒದಗಿಸುವಂತೆ ಮುಖ್ಯಮಂತ್ರಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಒಡಿಶಾದಲ್ಲಿ ಮುಂಜಾಗ್ರತಾ ಕ್ರಮವಾಗಿ 1,533 ಗರ್ಭಿಣಿ ಮಹಿಳೆಯರು ಸೇರಿದಂತೆ 46,075 ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.


 ಪೆಟ್ರೋಲ್,ಡೀಸೆಲ್ ದರ ಏರಿಕೆ

ಪೆಟ್ರೋಲ್,ಡೀಸೆಲ್ ದರ ಏರಿಕೆ


ಪೆಟ್ರೋಲ್,ಡೀಸೆಲ್ ದರ ಏರಿಕೆ

ನವದೆಹಲಿ, ಸೆಪ್ಟೆಂಬರ್ 28: ಸತತ ಮೂರು ವಾರಗಳಿಂದ ಯಥಾಸ್ಥಿತಿ ಕಾಪಾಡಿಕೊಂಡಿದ್ದ ಪೆಟ್ರೋಲ್ ದರವನ್ನು ಇಂದು (ಸೆ.28) ಏರಿಕೆ ಮಾಡಲಾಗಿದ್ದು, ಅದೇ ರೀತಿ ಡೀಸೆಲ್ ದರ ಇಂದು ಮತ್ತೆ ಏರಿಕೆ ಕಂಡಿದೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇಂದು ಲೀಟರ್ ಪೆಟ್ರೋಲ್ ಬೆಲೆಯಲ್ಲಿ 20ರಿಂದ 25 ಪೈಸೆ ಹೆಚ್ಚಳ ಮಾಡಿದ್ದರೆ, ಕಳೆದ ಐದು ದಿನಗಳಲ್ಲಿ ನಾಲ್ಕನೇ ಬಾರಿಗೆ ಏರಿಕೆ ಕಾಣುತ್ತಿರುವ ಲೀಟರ್ ಡೀಸೆಲ್ ದರ 75 ಪೈಸೆ ಹೆಚ್ಚಳವಾಗಿದೆ.

ಮಂಗಳವಾರದ ಇಂಧನ ದರ ಏರಿಕೆಯ ಬಳಿಕ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 101.39 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 89.57 ರೂಪಾಯಿಗೆ ಏರಿಕೆ ಆಗಿದೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 107.47 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 97.21 ರೂಪಾಯಿಗೆ ಏರಿಕೆ ಆಗಿದೆ. ಇದೇ ವೇಳೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 101.87 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 92.62 ರೂಪಾಯಿ ಇದೆ.

ತಮಿಳುನಾಡಿನ ಚೆನ್ನೈನಲ್ಲಿ ಲೀಟರ್ ಪೆಟ್ರೋಲ್​ಗೆ 99.15 ರೂಪಾಯಿ ನಿಗದಿ ಆಗಿದ್ದರೆ, ಲೀಟರ್ ಡೀಸೆಲ್ ದರ 94.17 ರೂಪಾಯಿಗೆ ಏರಿಕೆ ಆಗಿದೆ. ಇನ್ನು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 104.92 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 95.06 ರೂಪಾಯಿ ಇದೆ. ಮಧ್ಯಪ್ರದೇಶದ ಭೋಪಾಲ್​ನಲ್ಲಿ ಲೀಟರ್ ಪೆಟ್ರೋಲ್ ದರ 109.85 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 98.45 ರೂಪಾಯಿ ಇದೆ.


 ಪ್ರತಿಭೋತ್ಸವ;  ರೆಂಜ ಸೆಕ್ಟರ್  ನಿರ್ವಹಣಾ ಸಮಿತಿ ರಚನೆ

ಪ್ರತಿಭೋತ್ಸವ; ರೆಂಜ ಸೆಕ್ಟರ್ ನಿರ್ವಹಣಾ ಸಮಿತಿ ರಚನೆ


ಪ್ರತಿಭೋತ್ಸವ;
ರೆಂಜ ಸೆಕ್ಟರ್  ನಿರ್ವಹಣಾ ಸಮಿತಿ ರಚನೆ

ಪುತ್ತೂರು: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ SSF ವತಿಯಿಂದ 2 ವರ್ಷ ಕ್ಕೊಮ್ಮೆ ನಡೆಸಿಕೊಂಡು ಬರುವ ಪ್ರತಿಭೋತ್ಸವ ಇದರ ರೆಂಜ ಸೆಕ್ಟರ್  ನಿರ್ವಹಣಾ ಸಮಿತಿ ರಚನೆಯು ಸೆಕ್ಟರ್ ಅಧ್ಯಕ್ಷರಾದ ಅಬ್ದುಲ್ ಕರೀಮ್ ಬಾಹಸನಿಯವರ ಅಧ್ಯಕ್ಷತೆಯಲ್ಲಿ  ರೆಂಜ ಸುನ್ನೀ ಸೆಂಟರ್ ನಲ್ಲಿ ನಡೆಯಿತು.  

ಸಭೆಯನ್ನು SSF ಪೇರಲ್ತಡ್ಕ ಯೂನಿಟ್ ಅಧ್ಯಕ್ಷರಾದ ಹಾಮಿದ್ ಅಲಿ ಹಿಮಮಿ ಸಖಾಫಿ ಯವರು ಉದ್ಘಾಟಿಸಿದರು.

ನಿರ್ವಹಣಾ ಸಮಿತಿ ಚೇರ್ ಮೇನ್ ಆಗಿ ಮುಹಮ್ಮದ್ ರಫೀಕ್ ಬಾಹಸನಿ , ಕನ್ವೀನರ್ ಝುಬೈರ್ ಪೇರಲ್ತಡ್ಕ, ಫೈನಾನ್ಸ್ ಕಾರ್ಯದರ್ಶಿಯಾಗಿ ಕಲಂದರ್ ಹಿಮಮಿ ಸಖಾಫಿ ಹಾಗೂ ಸದಸ್ಯರಾಗಿ ಅಬ್ದುಲ್ ಕರೀಮ್ ಬಾಹಸನಿ, ರಝಾಕ್ ಹಿಮಮಿ ಪೇರಲ್ತಡ್ಕ, ಶರೀಫ್ ವಿಜಯನಗರ,ರಫೀಕ್ ಮನ್ನಾಪು, ಹಾಮಿದ್ ಅಲಿ ಹಿಮಮಿ ಸಖಾಫಿ,ಅಶ್ರಫ್ ಅಜ್ಜಿಕ್ಕಲ್,ಮುನೀರ್ ಡೆಮ್ಮಂಗರ,ಹಮೀದ್ ಹಿಮಮಿ, ಫೈಝಲ್ ಪೆರಲ್ತಡ್ಕ,ಶರೀಫ್ YMK,ಅನೀಸ್ ಅರ್ಲಪದವು, ಜವಾದ್ ಅಜ್ಜಿಕ್ಕಲ್,ನಾಸಿರ್ ಕೇಕನಾಜೆ, ಹಾಶಿಂ ರೆಂಜ,ಕಲಂದರ್ ರೆಂಜ,ದಾವೂದ್ ರೆಂಜ,ಅನಸ್ ಡೆಮ್ಮಂಗರ ಆಯ್ಕೆಯಾದರು. ಮೀಡಿಯಾ ವಿಭಾಗ:ಮುಆದ್ ಪೆರಳ್ತಡ್ಕ,ಬಿಲಾಲ್ ಡೆಮ್ಮoಗರ,ಸಲೀಲ್ ಡೆಮ್ಮoಗರ,ಸಿನಾನ್ ಚೂರಿಪದವು ಅವರನ್ನು ಆರಿಸಲಾಯಿತು.

ಕಾರ್ಯಕ್ರಮದಲ್ಲಿ  SSF ನ ಹಲವಾರು ನಾಯಕರು, ಕಾರ್ಯಕರ್ತರು ಭಾಗವಹಿಸಿದ್ದರು.

ರೆಂಜ ಯೂನಿಟ್ ಅಧ್ಯಕ್ಷ ರಫೀಕ್ ಮಣ್ಣಾಪು ಸ್ವಾಗತಿಸಿ, ಕಲಂದರ್ ಹಿಮಮಿ ಸಖಾಫಿ ಕೃತಜ್ಞತೆ ಸಲ್ಲಿಸಿದರು. ಅತ್ಯಂತ ಅಪಾಯಕಾರಿ ಕೊರೊನಾ ವೈರಸ್​ ರೂಪಾಂತರಿ ಪತ್ತೆ..!

ಅತ್ಯಂತ ಅಪಾಯಕಾರಿ ಕೊರೊನಾ ವೈರಸ್​ ರೂಪಾಂತರಿ ಪತ್ತೆ..!


ಅತ್ಯಂತ ಅಪಾಯಕಾರಿ ಕೊರೊನಾ ವೈರಸ್​ ರೂಪಾಂತರಿ ಪತ್ತೆ..!


ಪ್ರಪಂಚದಾದ್ಯಂತ ಕೊರೊನಾ ಪ್ರಕರಣಗಳಲ್ಲಿ ಮತ್ತೊಮ್ಮೆ ಏರಿಕೆ ಕಂಡು ಬರ್ತಿದೆ. ಅನೇಕ ದೇಶಗಳಲ್ಲಿ ಸೋಂಕಿನ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಭಾರತದಲ್ಲೂ ಕೊರೊನಾ ಮೂರನೇ ಅಲೆ ಭಯ ಕಾಡುತ್ತಿದೆ. ಈ ನಡುವೆ ಅಮೆರಿಕದಲ್ಲಿ R.1 ರೂಪಾಂತರಿ ಕಂಡು ಬಂದಿದ್ದು ಇದು ಅತ್ಯಂತ ಭಯಾನಕ ರೂಪಾಂತರಿ ಎಂದು ವರದಿಗಳು ತಿಳಿಸಿವೆ.

ವಿಶ್ವದಲ್ಲಿ ಆರ್.1 ರೂಪಾಂತರಿ ಪ್ರಕರಣವು ಕಡಿಮೆ ಪ್ರಮಾಣದಲ್ಲಿದ್ದರೂ ಸಹ ಇದು ಅತ್ಯಂತ ಭಯಾನಕವಾದ ರೂಪಾಂತರಿ ಎಂಬುದನ್ನು ಕಡೆಗಣಿಸುವಂತಿಲ್ಲ. ಭಾರತದಲ್ಲಿ ಕೊರೊನಾ 2ನೆ ಅಲೆ ಅತಿಯಾಗಿ ಆರ್ಭಟಿಸುತ್ತಿದ್ದ ವೇಳೆ ಆರ್​. 1 ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದ್ದು ಭಾರೀ ಚಿಂತೆಗೀಡುಮಾಡಿತ್ತು.

ಕೊರೊನಾ ವೈರಸ್​ ಈ ರೂಪಾಂತರಿಯ ಬಗ್ಗೆ ಎಚ್ಚರಿಕೆಯಿಂದಿರುವಂತೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆರ್.1 ಪ್ರಕರಣಗಳ ಸಂಖ್ಯೆ ಅತ್ಯಂತ ಕಡಿಮೆ ಇದ್ದರೂ ಸಹ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು ಎಂದು ವಾರ್ನಿಂಗ್​ ನೀಡಿದ್ದಾರೆ.

ಅಮೆರಿಕದಲ್ಲಿ ಕೆಲ ದಿನಗಳ ಹಿಂದಷ್ಟೇ ಆರ್​.1 ರೂಪಾಂತರಿಯನ್ನು ತಜ್ಞರು ಪತ್ತೆ ಮಾಡಿದ್ದರು. ಇದೇ ರೂಪಾಂತರಿ ಜಪಾನ್​ನಲ್ಲಿ ಕಳೆದ ವರ್ಷ ಕಂಡು ಬಂದಿತ್ತು. ಇದನ್ನು ಹೊರತುಪಡಿಸಿ ಆರ್​. 1 ರೂಪಾಂತರಿಯು ಇನ್ನು ಕೆಲ ದೇಶಗಳಲ್ಲಿ ಕಂಡು ಬಂದಿದೆ.

Saturday, 25 September 2021

ಭದ್ರತಾ ಪಡೆ-ಉಗ್ರರ ನಡುವೆ ಗುಂಡಿನ ಚಕಮಕಿ

ಭದ್ರತಾ ಪಡೆ-ಉಗ್ರರ ನಡುವೆ ಗುಂಡಿನ ಚಕಮಕಿ


ಭದ್ರತಾ ಪಡೆ-ಉಗ್ರರ ನಡುವೆ ಗುಂಡಿನ ಚಕಮಕಿ

ಶ್ರೀನಗರ: ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಜಮ್ಮು ಮತ್ತು ಕಾಶ್ಮೀರದ ಬಂಡಿಪೊರ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ ಗುಂಡಿನ ಚಕಮಕಿ ನಡೆದಿದೆ.

ಭದ್ರತಾ ಪಡೆಗಳು ದಕ್ಷಿಣ ಕಾಶ್ಮೀರದ ‌ವಾಟ್ನಿರಾ ಪ್ರದೇಶವನ್ನು ಸುತ್ತುವರಿದಿದ್ದು, ಶೋಧ ಕಾರ್ಯ ಕೈಗೊಂಡಿದ್ದಾರೆ. ಉಗ್ರರು ಮೊದಲಿಗೆ ಗುಂಡಿನ ದಾಳಿ ನಡೆಸಿದ್ದು, ಭದ್ರತಾ ಪಡೆಗಳು ಸೂಕ್ತ ಪ್ರತಿರೋಧ ತೋರಿವೆ.

ಗುಂಡಿನ ಚಕಮಕಿಯು ಸದ್ಯ ಚಾಲ್ತಿಯಲ್ಲಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


 ಕೊನೆಗೂ ಬೋನಿಗೆ ಬಿತ್ತು ಹಾವಳಿ ಎಬ್ಬಿಸಿದ್ದ ಚಿರತೆ:   ನಿಟ್ಟುಸಿರು ಬಿಟ್ಟ ಧಾರವಾಡದ ಜನರು

ಕೊನೆಗೂ ಬೋನಿಗೆ ಬಿತ್ತು ಹಾವಳಿ ಎಬ್ಬಿಸಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಧಾರವಾಡದ ಜನರು


ಕೊನೆಗೂ ಬೋನಿಗೆ ಬಿತ್ತು ಹಾವಳಿ ಎಬ್ಬಿಸಿದ್ದ ಚಿರತೆ: 
ನಿಟ್ಟುಸಿರು ಬಿಟ್ಟ ಧಾರವಾಡದ ಜನರು

ಧಾರವಾಡ: ಕಳೆದ ಒಂದು ವಾರದಿಂದ ಕವಲಗೇರಿ ಗ್ರಾಮದ ವ್ಯಾಪ್ತಿಯಲ್ಲಿಯೇ ತೀವ್ರ ಹಾವಳಿ ಎಬ್ಬಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಸತತ ಕಾರ್ಯಾಚರಣೆಗೆ ರವಿವಾರ ಬೆಳಗಿನ ಜಾವ ಕವಲಗೆರೆಯ ಶಿವಪ್ಪ ಉಪ್ಪಾರ ಎಂಬುವವರ ಕಬ್ಬಿನ ಗದ್ದೆಯಲ್ಲಿ ಚಿರತೆಯನ್ನು ಬೋನಿಗೆ ಹಾಕುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಮೊದಲು ಕವಲಗೆರೆಯಲ್ಲಿ ಕಾಣಿಸಿಕೊಂಡ ಚಿರತೆ ನಂತರ ಗೋವನಕೊಪ್ಪ ಗ್ರಾಮಕ್ಕೆ ಬಂದಿತು. ಕೊನೆಗೆ ಚಿರತೆ ಮತ್ತೆ ಕವಲಗೆರೆ ಗ್ರಾಮದ ಹೊಲಗಳಲ್ಲಿ ಓಡಾಟ ಮಾಡಿದ್ದರ ಹೆಜ್ಜೆ ಗುರುತು ಪತ್ತೆಯಾಗಿತ್ತು. ಇದರಿಂದ ಸುತ್ತಲಿನ ಗ್ರಾಮಸ್ಥರು ಮತ್ತು ಹೊಲಗಳಲ್ಲಿ ಕೆಲಸ ಮಾಡುವ ರೈತರು ತೀವ್ರ ಆತಂಕ ಎದುರಿಸುವಂತಾಗಿತ್ತು.

ಚಿರತೆ ಓಡಾಡಿದ ಗ್ರಾಮಗಳಿಗೆ ಡಿಸಿ ನಿತೇಶ ಪಾಟೀಲ ಕೂಡ ಭೇಟಿ ನೀಡಿ ಕಾರ್ಯಾಚರಣೆ ವೀಕ್ಷಿಸಿ, ತುರ್ತು ಕ್ರಮಕ್ಕೆ ಸೂಚಿಸಿದ್ದರು. ಗುರುವಾರ ಬೆಳಿಗ್ಗೆಯಿಂದಲೇ ಮತ್ತೆ ಕಾರ್ಯಾಚರಣೆಗೆ ಇಳಿದ ಸಿಬ್ಬಂದಿಗಳ ತಂಡವು, ಡ್ರೋಣ್ ಮೂಲಕ ಚಿರತೆಯ ಪತ್ತೆ ಮುಂದಾಗಿತು. ಡ್ರೋಣ್ ಕ್ಯಾಮರಾದಲ್ಲಿಯೂ ಚಿರತೆಯ ಸುಳಿವು ಸಿಕ್ಕಿರಲಿಲ್ಲ. ಆದರೆ ಕೆಲವೆಡೆ ಚಿರತೆಯ ಹೆಜ್ಜೆ ಗುರುತು ಸಿಕ್ಕಿದ್ದು, ಚಿರತೆಯ ಓಡಾಟದ ಮಾಹಿತಿ ಸಿಕ್ಕಿತ್ತು. ಇದಲ್ಲದೇ ಚಿರತೆಯ ಮಲ (ಲದ್ದಿ) ಸಿಕ್ಕಿದ್ದು, ಅದರ ಮಾದರಿಯನ್ನೂ ಅರಣ್ಯ ಇಲಾಖೆ ಪಡೆದುಕೊಂಡು ಅದರ ಪರೀಕ್ಷೆಗಾಗಿ ಹೈದರಾಬಾದ್ ಗೆ ಕಳುಹಿಸಲಾಗಿತ್ತು.

ಹುಬ್ಬಳ್ಳಿಯಲ್ಲಿ ಬುಧವಾರ ಹಾಗೂ ಧಾರವಾಡದ ಕವಲಗೇರಿಯ ಕಬ್ಬಿನ ಗದ್ದೆಯಲ್ಲೂ ಗುರುವಾರ ಚಿರತೆಯ ಮಲದ (ಲದ್ದಿ) ಮಾದರಿ ಸಿಕ್ಕಿತ್ತು. ಇದೂ ಒಂದೇ ಚಿರತೆಯದ್ದಾ ಅಥವಾ ಬೇರೆ ಬೇರೆ ಚಿರತೆಯದ್ದಾ ಎಂಬುದರ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಮಲದ ಮಾದರಿಯನ್ನು ಹೈದರಾಬಾದ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಧಾರವಾಡದ ಚಿರತೆ ಸಿಕ್ಕಿತು ಇದೀಗ ಮಲದ ಮಾದರಿ ವರದಿ ಬರುವವರೆಗೆ ಹುಬ್ಬಳ್ಳಿ ಕಾರ್ಯಾಚರಣೆ ಮುನ್ನಡೆಸುವುದಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ್ ಸ್ಪಷ್ಟಪಡಿಸಿದ್ದಾರೆ.


 ಹೊಸ ಕೃಷಿ ಕಾಯ್ದೆ ವಿರೋಧಿಸಿ ಇಂದು ರೈತರ ’ಪಾಣಿಪತ್ ಕದನ’

ಹೊಸ ಕೃಷಿ ಕಾಯ್ದೆ ವಿರೋಧಿಸಿ ಇಂದು ರೈತರ ’ಪಾಣಿಪತ್ ಕದನ’

ಹೊಸ ಕೃಷಿ ಕಾಯ್ದೆ ವಿರೋಧಿಸಿ ಇಂದು ರೈತರ ’ಪಾಣಿಪತ್ ಕದನ’

ಹೊಸದಿಲ್ಲಿ: ಕೇಂದ್ರದ ಮೂರು ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ರವಿವಾರ ಹರ್ಯಾಣದ ಪಾಣಿಪತ್‌ನಲ್ಲಿ ಬೃಹತ್ ರ್ಯಾಲಿ ಆಯೋಜಿಸಿದ್ದಾರೆ. ರಾಕೇಶ್ ಟಿಕಾಯತ್ ಸೇರಿದಂತೆ ಅಗ್ರ ರೈತ ಮುಖಂಡರು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವರು.

ಕರ್ನಲ್ ಮೂಲದ ರೈತ ಮುಖಂಡ ರತನ್ ಮಾನ್ ಈಗಾಗಲೇ ಸಿದ್ಧತೆಗಳನ್ನು ಅವಲೋಕಿಸಿದ್ದು, "ರೈತ ವಿರೋಧಿ ಕಾನೂನುಗಳ ಬಗ್ಗೆ ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ಈ ರ್ಯಾಲಿ ಆಯೋಜಿಸಲಾಗಿದೆ" ಎಂದು ತಿಳಿಸಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ಸಾವಿರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಹಾಗೂ ಭಾರತ್ ಬಂದ್ ಹಿನ್ನೆಲೆಯಲ್ಲಿ ಮುಖಂಡರು ಪ್ರಮುಖ ಸಂದೇಶ ನೀಡಲಿದ್ದಾರೆ ಎಂದು ವಿವರಿಸಿದ್ದಾರೆ.

ಕಳೆದ ವರ್ಷ  ಕೇಂದ್ರ ಸರ್ಕಾರ ಜಾರಿಗೆ ತಂದ ಕಾಯ್ದೆಗಳ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ ಹತ್ತು ತಿಂಗಳು ಪೂರೈಸುವ ಹಿನ್ನೆಲೆಯಲ್ಲಿ ಸೋಮವಾರ (ಸೆಪ್ಟೆಂಬರ್ 27) ಭಾರತ್ ಬಂದ್‌ಗೆ ಕರೆ ನೀಡಲಾಗಿದೆ.

ಭಾರತೀಯ ಕಿಸಾನ್ ಯೂನಿಯನ್‌ನ ಹರ್ಯಾಣ ಘಟಕ ರ್ಯಾಲಿ ಆಯೋಜಿಸಿದ್ದು, ಸಂಯುಕ್ತ ಕಿಸಾನ್ ಮೋರ್ಚಾದ ಹಲವು ಮುಖಂಡರನ್ನು ಆಹ್ವಾನಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕರ್ನಲ್‌ನಲ್ಲಿ ಆಗಸ್ಟ್ 28ರಂದು ರೈತರ ಮೇಲೆ ನಡೆಸ ಲಾಠಿಪ್ರಹಾರವನ್ನು ಖಂಡಿಸಿ ಮೂರು ದಿನಗಳ ಪ್ರತಿಭಟನೆಯನ್ನು ಕೈಗೊಂಡ ಬಳಿಕ ಇದು ರೈತರು ಕೈಗೊಳ್ಳುತ್ತಿರುವ ಮೊದಲ ಪ್ರತಿಭಟನೆಯಾಗಿದೆ.

ಸೋಮವಾರ ನಡೆಯುವ ಭಾರತ ಬಂದ್‌ಗೆ ದೇಶದ ಜನತೆ ಕೈಜೋಡಿಸಬೇಕು ಎಂದು ಎಸ್‌ಕೆಎಂ ಮನವಿ ಮಾಡಿದೆ. ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಉಳಿಸಿಕೊಳ್ಳುವ ಸಲುವಾಗಿ ರಾಜಕೀಯ ಪಕ್ಷಗಳು ರೈತರ ನಿಲವುನ್ನು ಬೆಂಬಲಿಸಬೇಕು ಎಂದು ಕರೆ ನೀಡಿದೆ. ಸೋಮವಾರ ಬೆಳಗ್ಗೆ 6ರಿಂದ ಸಂಜೆ 4ರವರೆಗೆ ಬಂದ್ ಆಚರಿಸಲು ಎಸ್‌ಕೆಎಂ ಕರೆ ನೀಡಿದೆ.
 ಹೈದರಾಬಾದ್ ವಿರುದ್ಧ ಪಂಜಾಬ್ ಗೆ ರೋಚಕ ಜಯ

ಹೈದರಾಬಾದ್ ವಿರುದ್ಧ ಪಂಜಾಬ್ ಗೆ ರೋಚಕ ಜಯ

 

ಹೈದರಾಬಾದ್ ವಿರುದ್ಧ ಪಂಜಾಬ್ ಗೆ ರೋಚಕ ಜಯ

ಶಾರ್ಜಾ: ಕಡಿಮೆ ಸ್ಕೋರ್ ಗಳಿಸಿದ ಹೊರತಾಗಿಯೂ ಪಂಜಾಬ್ ಕಿಂಗ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಶನಿವಾರ ನಡೆದ ಐಪಿಎಲ್ ನ 37ನೇ ಪಂದ್ಯದಲ್ಲಿ 5 ರನ್ ಅಂತರದಿಂದ ರೋಚಕ ಜಯ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ತಂಡವನ್ನು ಕೇವಲ 125 ರನ್ ಗೆ ನಿಯಂತ್ರಿಸಿದ್ದ ಹೈದರಾಬಾದ್ ಸುಲಭ ಸವಾಲು ಪಡೆದಿತ್ತು. ಆದರೆ ಮುಹಮ್ಮದ್ ಶಮಿ(2-14) ನೇತೃತ್ವದ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿ ಸೋಲುಂಡಿತು.

ಸನ್ ರೈಸರ್ಸ್ ಪರ ಆಲ್ ರೌಂಡರ್ ಜೇಸನ್ ಹೋಲ್ಡರ್(ಔಟಾಗದೆ 47) ಕೊನೆ ತನಕ  ಹೋರಾಟ ನೀಡಿದರು. ಅಗ್ರ ಕ್ರಮಾಂಕದಲ್ಲಿ ವೃದ್ದಿ ಮಾನ್ ಸಹಾ(31)ಒಂದಷ್ಟು ಪ್ರತಿರೋಧ ಒಡ್ಡಿದರು.

ಪಂಜಾಬ್ ರೋಚಕ ಗೆಲುವು ಸಾಧಿಸಲು ಕಾರಣವಾದ ಬೌಲಿಂಗ್ ವಿಭಾಗದಲ್ಲಿ ರವಿ ಬಿಶ್ನೋಯ್(3-24)ಹಾಗೂ ಅರ್ಷದೀಪ್(1-22)ಇನ್ನು 4 ವಿಕೆಟ್ ಹಂಚಿಕೊಂಡರು.


 


 ಇಂದು ಗುಲಾಬ್‌ ಸೈಕ್ಲೋನ್‌ ಅಪ್ಪಳಿಸಲಿದೆ :   7 ಜಿಲ್ಲೆಗಳಲ್ಲಿ ಹೈಅಲರ್ಟ್‌

ಇಂದು ಗುಲಾಬ್‌ ಸೈಕ್ಲೋನ್‌ ಅಪ್ಪಳಿಸಲಿದೆ : 7 ಜಿಲ್ಲೆಗಳಲ್ಲಿ ಹೈಅಲರ್ಟ್‌


ಇಂದು ಗುಲಾಬ್‌ ಸೈಕ್ಲೋನ್‌ ಅಪ್ಪಳಿಸಲಿದೆ : 
7 ಜಿಲ್ಲೆಗಳಲ್ಲಿ ಹೈಅಲರ್ಟ್‌

ಹೊಸದಿಲ್ಲಿ: ಬಂಗಾಲ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ತೀವ್ರತೆ ಪಡೆಯುತ್ತಿದ್ದು, ಸೋಮವಾರ ಸಂಜೆ ವೇಳೆಗೆ ಇದು ಚಂಡಮಾರುತವಾಗಿ ಪರಿವರ್ತನೆಗೊಂಡು ಒಡಿಶಾ ಹಾಗೂ ಆಂಧ್ರಪ್ರದೇಶ ಕರಾವಳಿಯನ್ನು ಅಪ್ಪಳಿಸುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆಯೇ ಈ ಮಾಹಿತಿ ನೀಡಿದೆ.

ರವಿವಾರ ಅಪ್ಪಳಿಸಲಿರುವ “ಗುಲಾಬ್‌’ ಚಂಡಮಾರುತವು 2018ರಲ್ಲಿ ಒಡಿಶಾದಲ್ಲಿ ಅಬ್ಬರಿಸಿದ “ತಿತ್ಲಿ’ ಚಂಡಮಾರುತದಷ್ಟೇ ತೀವ್ರವಾಗಿರಲಿದೆ ಎಂದು ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಹೇಳಿದ್ದಾರೆ.

ಹಲವು ರಾಜ್ಯಗಳಲ್ಲಿ ಭಾರೀ ಮಳೆ: ಗುಲಾಬ್‌ ಚಂಡಮಾರುತದ ಪ್ರಭಾವದಿಂದಾಗಿ ಒಡಿಶಾ, ಆಂಧ್ರದಲ್ಲಿ ಗಂಟೆಗೆ 90-100 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಸೆ.26ರ ಸಂಜೆ ವೇಳೆಗೆ ಚಂಡಮಾರುತವು ವಿಶಾಖಪಟ್ಟಣ ಮತ್ತು ಗೋಪಾಲಪುರದ ಮಧ್ಯೆ ಅಂದರೆ ಕಾಳಿಂಗಪಟ್ಟಣಂನಲ್ಲಿ ಅಪ್ಪಳಿಸುವ ಸಾಧ್ಯತೆಯಿದೆ. ಇದರಿಂದಾಗಿ ಈ ಎರಡು ರಾಜ್ಯಗಳಲ್ಲದೇ ಪಶ್ಚಿಮ ಬಂಗಾಲ, ತೆಲಂಗಾಣ, ಛತ್ತೀಸ್‌ಗಢಗಳ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದೂ ಹವಾಮಾನ ಇಲಾಖೆ ಎಚ್ಚರಿಸಿದೆ.

ಮತ್ತೂಂದೆಡೆ, ಮ್ಯಾನ್ಮಾರ್‌ ಕರಾವಳಿಯಲ್ಲೂ ವಾಯುಭಾರ ಕುಸಿತ ಆರಂಭವಾಗಿದ್ದು, ಇದರ ಪರಿಣಾಮವೆಂಬಂತೆ ಪಶ್ಚಿಮ ಬಂಗಾಲದ ದಕ್ಷಿಣ ಭಾಗದಲ್ಲಿ ಭಾರೀ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

7 ಜಿಲ್ಲೆಗಳಲ್ಲಿ ಹೈಅಲರ್ಟ್‌

ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಒಡಿಶಾ ಸರಕಾರವು 7 ಜಿಲ್ಲೆಗಳಲ್ಲಿ ಹೈಅಲರ್ಟ್‌ ಘೋಷಿಸಿದೆ. ತಗ್ಗುಪ್ರದೇಶಗಳಲ್ಲಿದ್ದ ಜನರನ್ನು ಸ್ಥಳಾಂತರಿಸುವ ಕಾರ್ಯವೂ ಆರಂಭವಾಗಿದ್ದು, ರಕ್ಷಣೆ ಹಾಗೂ ಪರಿಹಾರ ತಂಡಗಳನ್ನೂ ನಿಯೋಜಿಸಲಾಗಿದೆ. ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯ ಪಡೆಯ 42 ತಂಡಗಳು, ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆಯ 24 ತಂಡಗಳು ಹಾಗೂ ಅಗ್ನಿಶಾಮಕ ಸಿಬಂದಿಯನ್ನು ಈ 7 ಜಿಲ್ಲೆಗಳಿಗೆ ರವಾನಿಸಲಾಗಿದೆ.


ಗರ್ಭಿಣಿ ಲಸಿಕೆ ಪಡೆದಿದ್ದರಿಂದ ನವಜಾತ ಶಿಶುವೂ ಕೋವಿಡ್‌ನಿಂದ ಸುರಕ್ಷಿತ.

ಗರ್ಭಿಣಿ ಲಸಿಕೆ ಪಡೆದಿದ್ದರಿಂದ ನವಜಾತ ಶಿಶುವೂ ಕೋವಿಡ್‌ನಿಂದ ಸುರಕ್ಷಿತ.


ಗರ್ಭಿಣಿ ಲಸಿಕೆ ಪಡೆದಿದ್ದರಿಂದ ನವಜಾತ ಶಿಶುವೂ ಕೋವಿಡ್‌ನಿಂದ ಸುರಕ್ಷಿತ.

ವಾಷಿಂಗ್ಟನ್‌: ಫಿಜರ್‌-ಬಯೋಎನ್‌ಟೆಕ್‌ ಅಥವಾ ಮೊಡೆರ್ನಾ ಕೋವಿಡ್‌-19 ಲಸಿಕೆ ಪಡೆದ ಗರ್ಭಿಣಿಯರಿಂದ ನವಜಾತ ಶಿಶುಗಳಲ್ಲಿ ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯಗಳ ಬೆಳವಣಿಗೆ ಆಗಿದೆ ಎಂದು ಅಧ್ಯಯನ ವರದಿ ಹೇಳಿದೆ.

36 ನವಜಾತ ಶಿಶುಗಳ ಮೇಲೆ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬಹಿರಂಗವಾಗಿದೆ. ನವಜಾತ ಮಗುವು ಗರ್ಭಾವಸ್ಥೆಯಲ್ಲಿದ್ದಾಗ ತಾಯಿಯು ಕೋವಿಡ್‌-19 ಲಸಿಕೆ ಪಡೆದಿದ್ದರು. ಇದರಿಂದ ಗರ್ಭಿಣಿ ಮಾತ್ರವಲ್ಲ, ಹುಟ್ಟಲಿರುವ ಮಗುವೂ ಸುರಕ್ಷಿತ ಎಂಬುದು ಅಧ್ಯಯನದಿಂದ ಸಾಬೀತಾಗಿದೆ.

ನೂತನ ಅಧ್ಯಯನ ವರದಿಯು ಹೆರಿಗೆ ಮತ್ತು ಗರ್ಭ ಶಾಸ್ತ್ರಕ್ಕೆ ಸಬಂಧಿಸಿದ 'ಅಮೆರಿಕನ್‌ ಜರ್ನಲ್‌ ಆಫ್‌ ಅಬ್ಸ್‌ಟೆಟ್ರಿಕ್ಸ್‌ ಆಯಂಡ್‌ ಗೈನೆಕಾಲಜಿ ಎಂಎಫ್‌ಎಂ'ನಲ್ಲಿ ಪ್ರಕಟಗೊಂಡಿದೆ ಎಂದು ಎಎನ್‌ಐ ವರದಿ ಮಾಡಿದೆ.

ಪ್ರತಿಕಾಯಗಳನ್ನು ಉತ್ಪಾದಿಸಲು ಪ್ರಚೋದಿಸುವಂತಹ ಗುಣಲಕ್ಷಣಗಳು ಮತ್ತು ನಿರ್ದಿಷ್ಟ ಸೋಂಕಿನಿಂದ ರಕ್ಷಣೆ ನೀಡುವ ರಕ್ತದ ಪ್ರೋಟಿನ್‌ಗಳು ನವಜಾತ ಶಿಶುಗಳಲ್ಲಿ ಇರುವುದನ್ನು ಅಧ್ಯಯನದಲ್ಲಿ ಕಂಡುಕೊಂಡಿರುವುದಾಗಿ ಸಂಶೋಧಕರು ತಿಳಿಸಿದ್ದಾರೆ.

ಇಂತಹ ಸುರಕ್ಷತೆ ವ್ಯವಸ್ಥೆಯು ಮಗುವಿಗೆ, ಅದು ಗರ್ಭಾವಸ್ಥೆಯಲ್ಲಿದ್ದಾಗ ತಾಯಿಯಿಂದಲೇ ಬಂದಿದ್ದಾಗಿದೆಯೇ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಅಧ್ಯಯನದಲ್ಲಿ ಭಾಗಿಯಾದ 36 ನವಜಾತ ಶಿಶುಗಳ ತಾಯಂದಿರು ಗರ್ಭಿಣಿಯರಾಗಿದ್ದಾಗ ಫಿಜರ್‌-ಬಯೋಎನ್‌ಟೆಕ್‌ ಅಥವಾ ಮೊಡೆರ್ನಾ ಕೋವಿಡ್‌-19 ಲಸಿಕೆ ಪಡೆದಿದ್ದರು.


 ಅಕ್ರಮ ಗುಡಿಸಲುಗಳ ತೆರವು ನಿಲ್ಲದು: ಅಸ್ಸಾಂ ಮುಖ್ಯಮಂತ್ರಿ

ಅಕ್ರಮ ಗುಡಿಸಲುಗಳ ತೆರವು ನಿಲ್ಲದು: ಅಸ್ಸಾಂ ಮುಖ್ಯಮಂತ್ರಿ


ಅಕ್ರಮ ಗುಡಿಸಲುಗಳ ತೆರವು ನಿಲ್ಲದು: ಅಸ್ಸಾಂ ಮುಖ್ಯಮಂತ್ರಿ

ಗುವಾಹಟಿ: ಸರ್ಕಾರಿ ಜಾಗವನ್ನು ಅತಿಕ್ರಮಿಸಿಕೊಂಡು ತಲೆ ಎತ್ತಿರುವ ಅಕ್ರಮ ಗುಡಿಸಲುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಶನಿವಾರ ತಿಳಿಸಿದ್ದಾರೆ.

ಅಸ್ಸಾಂನ ದರಾಂಗ್ ಜಿಲ್ಲೆಯಲ್ಲಿ ಗುರುವಾರ ಒತ್ತುವರಿ ತೆರವುಗೊಳಿಸುವ ವೇಳೆ ಪೊಲೀಸರು ನಡೆಸಿದ ಗೋಲಿಬಾರ್‌ನಿಂದ ಇಬ್ಬರು ಮೃತಪಟ್ಟಿದ್ದು, ತೆರವು ಕಾರ್ಯಾಚರಣೆಗೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಹಿಮಂತ ಬಿಸ್ವಾ ಶರ್ಮಾ ತಮ್ಮ ಸರ್ಕಾರದ ನಿಲುವನ್ನು ಪ್ರಕಟಿಸಿದ್ದಾರೆ.

'ಈ ಕಾರ್ಯಾಚರಣೆ ಮುಂದುವರಿಯುತ್ತದೆ. ಸರ್ಕಾರವು ಬಡ ಮತ್ತು ಭೂಹೀನ ಜನರ ಸಮಸ್ಯೆಗಳನ್ನು ಆಲಿಸಲಿದೆ. ಆದರೆ, ನಾವು ಒಬ್ಬ ವ್ಯಕ್ತಿ 100 ಬಿಘಾ, 200 ಬಿಘಾ ಸರ್ಕಾರಿ ಭೂಮಿಯನ್ನು ಆಕ್ರಮಿಸಿಕೊಳ್ಳಲು ಅವಕಾಶ ನೀಡುವುದಿಲ್ಲ. ನಮ್ಮ ಭೂ ಬಳಕೆಯ ನೀತಿಯ ಮಾನದಂಡದ ಪ್ರಕಾರ 6 ಬಿಘಾ ಭೂಮಿಯನ್ನು ನಿಜವಾದ ಭೂ ರಹಿತ ಜನರಿಗೆ ನೀಡುತ್ತೇವೆ. ಆದರೆ ಜನರು ಸರ್ಕಾರಿ ಭೂಮಿಯನ್ನು ಆಕ್ರಮಿಸಿಕೊಳ್ಳಲು ಅವಕಾಶ ನೀಡುವುದಿಲ್ಲ' ಎಂದು ಶರ್ಮಾ ಸುದ್ದಿಗಾರರಿಗೆ ತಿಳಿಸಿದರು.

ಪಿತೂರಿ ಸಿದ್ಧಾಂತ: 'ಒಂದು ವರ್ಗದ ಜನರ'ನ್ನು ತೆರವುಗೊಳಿಸುವುದನ್ನು ನಿಲ್ಲಿಸುವಂತೆ ಸರ್ಕಾರಕ್ಕೆ ಮನದಟ್ಟು ಮಾಡುವ ಭರವಸೆ ನೀಡಿ, ಕಳೆದ ಮೂರು ತಿಂಗಳಲ್ಲಿ ಆ ಜನರಿಂದ ₹28 ಲಕ್ಷ ಹಣವನ್ನು ಕೆಲವರು ಸಂಗ್ರಹಿಸಿರುವುದು ಸರ್ಕಾರಕ್ಕೆ ಗುಪ್ತಚರ ಇಲಾಖೆಯ ಮಾಹಿತಿಯಿಂದ ತಿಳಿದುಬಂದಿದೆ. ತೆರವು ಕಾರ್ಯಾಚರಣೆ ತಡೆಯಲು ಸಾಧ್ಯವಾಗದಿದ್ದಾಗ ಅವರು ಆ ಜನರನ್ನು ಎತ್ತಿಕಟ್ಟಿ ಗುರುವಾರ ವಿನಾಶ ಸೃಷ್ಟಿಸಿದರು. ಇದರಲ್ಲಿ ಪಿತೂರಿ ಸಿದ್ಧಾಂತ ಅಡಗಿದೆ ಎಂದು ಹಿಮಂತ ಬಿಸ್ವಾ ಶರ್ಮಾ ತಿಳಿಸಿದರು.

ಗುರುವಾರ ಕೇವಲ 60 ಕುಟುಂಬಗಳನ್ನು ತೆರವುಗೊಳಿಸಲಾಗಿತ್ತು. ಆದರೆ, ತೆರವು ಕಾರ್ಯಾಚರಣೆ ವಿರೋಧಿಸಲು 10,000 ಜನರು ಜಮಾಯಿಸಿದರು. ತೆರವುಗೊಳಿಸಲಾಗಿದ್ದ ಜನರಿಗೆ ಆಹಾರ ನೀಡುವ ನೆಪದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಇಸ್ಲಾಮಿಕ್ ಸಂಘಟನೆಗೆ ಸೇರಿದವರು ಈ ಪ್ರದೇಶಕ್ಕೆ ಭೇಟಿ ನೀಡಿರುವ ಬಗ್ಗೆ ಮಾಹಿತಿಯೂ ಸಿಕ್ಕಿದೆ. ಸರ್ಕಾರ ಈ ಬಗ್ಗೆ ತನಿಖೆ ನಡೆಸಲಿದೆ. ತನಿಖೆಯಿಂದ ಸ್ಫೋಟಕ ಮಾಹಿತಿಗಳು ಹೊರಬೀಳಲಿವೆ ಎಂದು ಶರ್ಮಾ ಹೇಳಿದರು.


Friday, 24 September 2021

ದಾವಣಗೆರೆ: ಮೊಬೈಲ್ ಟವರ್‌ಗೆ ಬೆಂಕಿ- ತಪ್ಪಿದ ಅನಾಹುತ

ದಾವಣಗೆರೆ: ಮೊಬೈಲ್ ಟವರ್‌ಗೆ ಬೆಂಕಿ- ತಪ್ಪಿದ ಅನಾಹುತ


ದಾವಣಗೆರೆ: ಮೊಬೈಲ್ ಟವರ್‌ಗೆ ಬೆಂಕಿ- ತಪ್ಪಿದ ಅನಾಹುತ 

ದಾವಣಗೆರೆ: ನಗರದ ಹಳೆ ಪ್ರವಾಸಿ ಮಂದಿರ ರಸ್ತೆಯ ಮಲ್ಲಿಕಾರ್ಜುನ ಲಾಡ್ಜ್ ಹಾಗೂ ಸಾರಸ್ವತ ಬ್ಯಾಂಕ್ ಹಿಂಭಾಗದಲ್ಲಿರುವ ಮೊಬೈಲ್ ಟವರ್‌ನಲ್ಲಿ ಶನಿವಾರ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.

ಅಗ್ನಿಶಾಮಕ ದಳ ಸಕಾಲದಲ್ಲಿ ಬೆಂಕಿ ನಂದಿಸುವ ಮೂಲಕ ಅಪಾಯವನ್ನು ತಪ್ಪಿಸಿದೆ. ಅಗ್ನಿಶಾಮಕದಳದವರು ಅಕ್ಕಪಕ್ಕದ ಕಟ್ಟಡಗಳಿಗೆ ಬೆಂಕಿಯ ಜ್ವಾಲೆ ಹರಡುವುದನ್ನು ತಪ್ಪಿಸಿದರು. ಬ್ಯಾಟರಿ, ಜನರೇಟರ್, ಕೇಬಲ್‌ಗಳು ಬೆಂಕಿಗೆ ಆಹುತಿಯಾಗಿದೆ ಎಂದು ಅಗ್ನಿಶಾಮಕ ದಳದ ಆಧಿಕಾರಿ ಬಸವಪ್ರಭು ಶರ್ಮಾ ತಿಳಿಸಿದ್ದಾರೆ.


ಅಂಡಾಮಾನ್-ನಿಕೋಬಾರ್ ದ್ವೀಪದಲ್ಲಿ ಭೂಕಂಪನ : ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆದಾಖಲು

ಅಂಡಾಮಾನ್-ನಿಕೋಬಾರ್ ದ್ವೀಪದಲ್ಲಿ ಭೂಕಂಪನ : ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆದಾಖಲು

ಅಂಡಾಮಾನ್-ನಿಕೋಬಾರ್ ದ್ವೀಪದಲ್ಲಿ ಭೂಕಂಪನ : ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆದಾಖಲು

ಅಂಡಾಮಾನ್ : ಅಂಡಾಮಾನ್ ನಿಕೋಬಾರ್ ದ್ವೀಪಗಳ ಕ್ಯಾಂಪ್ ಬೆಲ್ ಕೊಲ್ಲಿಯಲ್ಲಿ ನಿನ್ನೆ ರಾತ್ರಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆ ದಾಖಲಾಗಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ (ಎನ್ ಸಿಎಸ್) ತಿಳಿಸಿದೆ.

5.2 ತೀವ್ರತೆಯ ಭೂಕಂಪ, 24-09-2021, 20:34:27 ಸಮಯಕ್ಕೆ ಸಂಭವಿಸಿದ್ದು, ಐಎಸ್ ಟಿ, ಲ್ಯಾಟ್: 9.22 ಮತ್ತು ಉದ್ದ: 93.92, ಆಳ: 63 ಕಿ.ಮೀ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಉತ್ತರಕ್ಕೆ 246 ಕಿ.ಮೀ ಕ್ಯಾಂಪ್ ಬೆಲ್ ಕೊಲ್ಲಿಯಲ್ಲಿ ಭೂಕಂಪನ ಸಂಭವಿಸಿದೆ ಎಂದು ಎನ್ ಸಿಎಸ್ ಟ್ವೀಟ್ ನಲ್ಲಿ ತಿಳಿಸಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಆಗಾಗ್ಗೆ ಭೂಕಂಪನ ಸಂಭವಿಸುತ್ತಿರುತ್ತದೆ. ಈ ಹಿಂದೆ ಸೆಪ್ಟೆಂಬರ್ 22 ರಂದು ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆ ದಾಖಲಾಗಿತ್ತು.


 ಸೆ. 27ರಂದು `ಭಾರತ್ ಬಂದ್' :

ಸೆ. 27ರಂದು `ಭಾರತ್ ಬಂದ್' :


ಸೆ. 27ರಂದು `ಭಾರತ್ ಬಂದ್' : 

ನವದೆಹಲಿ : ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳ ಒಕ್ಕೂಟ ಕಿಸಾನ್ ಮೋರ್ಚಾ ಸೆ.27 ರಂದು ಭಾರತ್ ಬಂದ್ ಗೆ ಕರೆ ನೀಡಿದೆ.

ದೇಶದಾದ್ಯಂತ ಪ್ರಮುಖ 500 ಕ್ಕೂ ಹೆಚ್ಚು ರೈತಪರ ಸಂಘಟನೆಗಳು ಪ್ರತಿಭಟನೆ, ಧರಣಿ, ಮೆರವಣಿಗೆ ನಡೆಸಲಿವೆ. ಬೆಂಗಳೂರು ಮತ್ತು ರಾಜ್ಯದ ಇತರೆ ಪ್ರಮುಖ ಜಿಲ್ಲೆಗಳಲ್ಲಿಯೂ ಸಂಘಟನೆಗಳು ಮೆರವಣಿಗೆ ಹಮ್ಮಿಕೊಂಡಿದ್ದು, ಸಹಜವಾಗಿ ರಸ್ತೆ ಸಂಚಾರದಲ್ಲಿ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಸೆ. 27 ರ ಭಾರತ್ ಬಂದ್ ಗೆ ಹೋಟೆಲ್, ಸಾರಿಗೆ, ಲಾರಿ ಮಾಲೀಕರು ನೈತಿಕ ಬೆಂಬಲ ನೀಡಲು ನಿರ್ಧರಿಸಿದ್ದಾರೆ. ಹೀಗಾಗಿ ಬಸ್, ಟ್ಯಾಕ್ಸಿ ಸೇವೆ. ಹೋಟೆಲ್ ಸೇವೆ ಸೇರಿದಂತೆ ನಾನಾ ಸೇವೆಗಳು ಎಂದಿನಂತಿರುತ್ತವೆ. ಬಂದ್ ಹಿನ್ನೆಲೆಯಲ್ಲಿ ಹಾಲು, ತರಕಾರಿ, ಮೆಡಿಕಲ್ ಹೀಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ. ಕೋವಿಡ್‌ನಿಂದಾಗಿ ಹೋಟೆಲ್‌ ಉದ್ಯಮ ಸಂಪೂರ್ಣ ಸಂಕಷ್ಟದಲ್ಲಿದೆ. ಹೀಗಾಗಿ ಹೋಟೆಲ್‌ ಸೇವೆಯಲ್ಲಿ ರೈತ ಉತ್ಪನ್ನಗಳನ್ನು ಬಳಸುವ ಮೂಲಕ ನಾವು ರೈತರಿಗೆ ಬೆಂಬಲ ನೀಡುತ್ತೇವೆ. ಹೋಟೆಲ್‌ ಸೇವೆಯಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ.

ಕೆಎಸ್‌ಆರ್ ಟಿಸಿ ಬಸ್‌ ಸೇವೆ ಎಂದಿನಂತೆ ಮುಂದುವರಿಯುತ್ತದೆ. ಒಂದು ವೇಳೆ ಅಂದು ಪರಿಸ್ಥಿತಿ ಕ್ಲಿಷ್ಟಕರವಾಗಿದ್ದರೆ ಸೇವೆ ಸ್ಥಗಿತಗೊಳಿಸುತ್ತೇವೆ ಎಂದು ಕೆಎಸ್‌ಆರ್‌ಟಿಸಿ ನೌಕರರ ಒಕ್ಕೂಟದ ಅಧ್ಯಕ್ಷ ಆರ್‌. ಚಂದ್ರಶೇಖರ್‌ ತಿಳಿಸಿದರು.


ಬಿ ಎಸ್ ಎಫ್  ಕಾನ್ಸ್ಟೇಬಲ್ ನಿಂದ ಮೇಲಾಧಿಕಾರಿಯ ಹತ್ಯೆ: ಆರೋಪಿ ಯೋಧ ಕೂಡಾ ಗುಂಡೇಟಿಗೆ ಬಲಿ

ಬಿ ಎಸ್ ಎಫ್ ಕಾನ್ಸ್ಟೇಬಲ್ ನಿಂದ ಮೇಲಾಧಿಕಾರಿಯ ಹತ್ಯೆ: ಆರೋಪಿ ಯೋಧ ಕೂಡಾ ಗುಂಡೇಟಿಗೆ ಬಲಿ

ಬಿ ಎಸ್ ಎಫ್  ಕಾನ್ಸ್ಟೇಬಲ್ ನಿಂದ ಮೇಲಾಧಿಕಾರಿಯ ಹತ್ಯೆ: ಆರೋಪಿ ಯೋಧ ಕೂಡಾ ಗುಂಡೇಟಿಗೆ ಬಲಿ

ಹೊಸದಿಲ್ಲಿ: ತ್ರಿಪುರದಲ್ಲಿರುವ ಬಾಂಗ್ಲಾ ಅಂತರ್ ರಾಷ್ಟ್ರೀಯ ಗಡಿ ಸಮೀಪದ ಭಾರತೀಯ ಗಡಿಭದ್ರತಾ ಪಡೆಯ ಠಾಣೆಯಲ್ಲಿ ಯೋಧರಿಬ್ಬರ ನಡುವೆ ಸಂಭವಿಸಿದ ಮಾತಿನ ಚಕಮಕಿಯ ಬಳಿಕ ನಡೆದ ಶೂಟೌಟ್ನಲ್ಲಿ ಇಬ್ಬರು ಬಿ ಎಸ್ ಎಫ್ ಯೋಧರು ಸಾವನ್ನಪ್ಪಿದ್ದಾರೆ ಹಾಗೂ ಇನ್ನೋರ್ವ ಹಿರಿಯ ಅಧಿಕಾರಿ ಗಾಯಗೊಂಡಿದ್ದಾರೆ.

 ಗೋಮತಿ ಜಿಲ್ಲೆಯ ಕರ್ಬೂಕ್ ಉಪವಿಭಾಗದಲ್ಲಿರುವ ಖಾಗ್ರಾಚೇರಿ ಠಾಮೆಯಲ್ಲಿರುವ ಗಡಿ ಬೇಲಿ ಸಮೀಪ ಗುರುವಾರ ಸಂಜೆ ಈ ಘಟನೆ ನಡೆದಿದೆ. 20ನೇ ಬೆಟಾಲಿಯನ್ಗೆ ಸೇರಿದ ಹೆಡ್ಕಾನ್ಸ್ಟೇಬಲ್ ಸತ್ಬೀರ್ಸಿಂಗ್ ಹಾಗೂ ಕಾನ್ಸ್ಟೇಬಲ್ ಪ್ರತಾಪ್ಸಿಂಗ್ ನಡುವೆ  ಸಣ್ಣ ವಿಷಯಕ್ಕೆ ಸಂಬಂಧಿಸಿ ಜಗಳವುಂಟಾಗಿದ್ದು, ಆನಂತರ ವಿಕೋಪಕ್ಕೆ ತಿರುಗಿದೆ. ಈ ಸಂದರ್ಭ ಪ್ರತಾಪ್ ಸಿಂಗ್, ತನ್ನ ಸಹದ್ಯೋಗಿ ಸತ್ಬೀರ್‌ ಸಿಂಗ್‌ ಗೆ ಗುಂಡಿಕ್ಕಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆನಂತರ ಪ್ರತಾಪ್ ಸಿಂಗ್ನನ್ನು ಸ್ಥಳದಲ್ಲೇ ನಿಯೋಜಿತನಾಗಿದ್ದ ಬಿಎಸ್ಎಫ್ ಕಾವಲುಗಾರನೊಬ್ಬ ಗುಂಡಿಕ್ಕಿ ಸಾಯಿಸಿದ್ದಾಏನೆ.

ಘಟನೆಯ ಬಳಿಕ ಹಂತಕ ಯೋಧನನ್ನು ಸ್ಥಳಲ್ಲಿ ನಿಯೋಜಿತನಾಗಿದ್ದ ಕಾವಲುಗಾರನೊಬ್ಬ ಗುಂಡಿಕ್ಕಿ ಹತ್ಯೆಗೈದಿದ್ದಾನೆ. ಕಾನ್ಸ್ಸ್ಟೇಬಲ್ ಪ್ರತಾಪ್ ಸಿಂಗ್ ಸ್ಥಳದಲ್ಲಿದ ಠಾಣಾ ಕಮಾಂಡರ್ ಸಬ್ಇನ್ಸ್ಪೆಕ್ಟರ್ ರಾಮ್ ಕುಮಾರ್ ಮೇಲೂ ಗುಂಡು ಹಾರಿಸಿದ್ದರಿಂದ ಅವರ ಎರಡೂ ಕಾಲುಗಳಿಗೆ ಗುಂಡಿನ ಗಾಯಗಳಾಗಿವೆಯೆಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಗೆ ನೈಜ ಕಾರಣವನ್ನು ಪತ್ತೆಹಚ್ಚಲು ವಿಭಾಗೀಯ ತನಿಖೆಗೆ ನಡೆಸಲಾಗುವುದು ಹಾಗೂ ಸಿಲಾಚೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗುವುದೆಂದು ವಕ್ತಾರರು ತಿಳಿಸಿದ್ದಾರೆ.