Friday, 6 August 2021

ಕುಖ್ಯಾತ ಐಸಿಸ್ ಉಗ್ರ ಉತ್ತರಕನ್ನಡದಲ್ಲಿ ಸಿಕ್ಕಿಬಿದ್ದ; ಎನ್​ಐಎ ಹಾಗೂ ಕರ್ನಾಟಕ ಪೊಲೀಸ್ ಜಂಟಿ ಕಾರ್ಯಾಚರಣೆ

ಕುಖ್ಯಾತ ಐಸಿಸ್ ಉಗ್ರ ಉತ್ತರಕನ್ನಡದಲ್ಲಿ ಸಿಕ್ಕಿಬಿದ್ದ; 
ಎನ್​ಐಎ ಹಾಗೂ ಕರ್ನಾಟಕ ಪೊಲೀಸ್ ಜಂಟಿ ಕಾರ್ಯಾಚರಣೆ

ಉತ್ತರಕನ್ನಡ: ಉಗ್ರ ಚಟುವಟಿಕೆಯಲ್ಲಿ ನಿರತರ ವಿರುದ್ಧ ರಾಷ್ಟ್ರೀಯ ತನಿಖಾ ದಳ(ಎನ್​​ಐಎ)ದ ಕಾರ್ಯಾಚರಣೆ ಮುಂದುವರಿದಿದ್ದು, ಇಂದು ಮತ್ತೊಬ್ಬ ಉಗ್ರ ಸಿಕ್ಕಿಬಿದ್ದಿದ್ದಾನೆ. ಉತ್ತರಕನ್ನಡದಲ್ಲಿ ಎನ್​ಐಎ ಹಾಗೂ ಕರ್ನಾಟಕ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಈತನನ್ನು ಬಂಧಿಸಲಾಗಿದೆ.

ಭಟ್ಕಳ ಮೂಲದ ಜಫ್ರಿ ಜಹ್ವಾರ್ ದಾಮುದಿ ಎಂಬಾತ ಬಂಧಿತ. ಈತ ಅಬು ಹಾಜಿರ್ ಅಲ್​ ಬದ್ರಿ ಎಂಬ ಹೆಸರಿನ ಪ್ರತ್ಯೇಕ ಸೈಬರ್ ಘಟಕ ಹೊಂದಿದ್ದು, ಆ ಮೂಲಕ ಭಾರತದಲ್ಲಿ ಐಸಿಸ್​ ಸಂಘಟನೆಗೆ ನೇಮಕಾತಿ ನೋಡಿಕೊಳ್ಳುತ್ತಿದ್ದ. ಅಲ್ಲದೆ ಎನ್​ಕ್ರಿಪ್ಟೆಡ್​ ಚಾಟಿಂಗ್ ಸಿಸ್ಟಮ್​ಗಳಲ್ಲಿ ಸಕ್ರಿಯನಾಗಿದ್ದ ಈತ ಐಸಿಸ್ ವಿಚಾರಧಾರೆಗಳನ್ನು ದಕ್ಷಿಣ ಭಾರತದ ವಿವಿಧ ಭಾಷೆಗಳಿಗೆ ಭಾಷಾಂತರಿಸುತ್ತಿದ್ದ.

ಎನ್​ಐಎ ತನಿಖಾ ತಂಡ ಕರ್ನಾಟಕದ ಎರಡು ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ದಾಳಿ ವೇಳೆ ಮೊಬೈಲ್​ಫೋನ್​ಗಳು, ಹಾರ್ಡ್ ಡಿಸ್ಕ್ ಹಾಗೂ ಎಸ್​ಡಿ ಕಾರ್ಡುಗಳನ್ನು ವಶಕ್ಕೆ ಪಡೆದಿದೆ.SHARE THIS

Author:

0 التعليقات: