Wednesday, 11 August 2021

ನ್ಯೂಯಾರ್ಕ್‌ಗೆ ಮಹಿಳಾ ಗವರ್ನರ್‌


 ನ್ಯೂಯಾರ್ಕ್‌ಗೆ ಮಹಿಳಾ ಗವರ್ನರ್‌

ನ್ಯೂಯಾರ್ಕ್‌: ನ್ಯೂಯಾರ್ಕ್‌ಗೆ ಮೊದಲ ಮಹಿಳಾ ಗವರ್ನರ್‌ ಆಗಿ ಕ್ಯಾತಿ ಹೊಚುಲ್‌ (62) ಆಯ್ಕೆಯಾಗಿದ್ದಾರೆ.

ಗವರ್ನರ್‌ ಆಂಡ್ರ್ಯೂ ಕ್ಯುಮೊ ರಾಜಿನಾಮೆ ನೀಡಿರುವ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಕ್ಯಾತಿಯನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.

ಅವರು 24ರಂದು ಅಧಿಕಾರ ಸ್ವೀಕರಿಸಲಿದ್ದಾರೆ. 2022 ಡಿಸೆಂಬರ್‌ನಲ್ಲಿ ಅಧಿಕಾರಾವಧಿ ಮುಗಿಯಲಿದೆ. ಬೆಳವಣಿಗೆ ಬಗ್ಗೆ ಮಾತನಾಡಿರುವ ಕ್ಯಾತಿ, “ಆರೋಪಗಳ ಹಿನ್ನೆಲೆಯಲ್ಲಿ ಆಂಡ್ರ್ಯೂ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ಸರ್ಕಾರದ ಎಲ್ಲ ಹಂತದ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿರುವ ನಾನು ನ್ಯೂಯಾರ್ಕ್‌ನ 57ನೇ ಗವರ್ನರ್‌ ಆಗಿ ಸೇವೆ ಸಲ್ಲಿಸಲು ಸಿದ್ಧಳಿದ್ದೇನೆ’ ಎಂದು ಹೇಳಿದ್ದಾರೆ.SHARE THIS

Author:

0 التعليقات: