Sunday, 1 August 2021

ಇಸ್ರೇಲಿ ನಿರ್ವಹಣೆಯ ಟ್ಯಾಂಕರ್ ಹಡಗಿನ ಮೇಲೆ ಡ್ರೋನ್ ದಾಳಿ ಇಬ್ಬರು ನಾವಿಕರ ಮೃತ್ಯು.


ಇಸ್ರೇಲಿ ನಿರ್ವಹಣೆಯ ಟ್ಯಾಂಕರ್ ಹಡಗಿನ ಮೇಲೆ ಡ್ರೋನ್ ದಾಳಿ
ಇಬ್ಬರು ನಾವಿಕರ ಮೃತ್ಯು.

ದುಬೈ: ಅಮೆರಿಕದ ನೌಕಾಪಡೆಯ ಬೆಂಗಾವಲಿನೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಇಸ್ರೇಲಿ ನಿರ್ವಹಣೆಯ ತೈಲ ಟ್ಯಾಂಕರ್ ಹಡಗಿನ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಇಬ್ಬರು ನಾವಿಕರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ಸೇನೆ ಶನಿವಾರ ತಿಳಿಸಿದೆ. ಒಮಾನ್ ಕೊಲ್ಲಿಯ ಸಮೀಪ ಗುರುವಾರ ದಾಳಿ ನಡೆದಿರುವುದಾಗಿ ಅದು ಹೇಳಿದೆ. ಈ ದಾಳಿಯ ಹಿಂದೆ ಇರಾನ್‌ನ ಕೈವಾಡವಿದೆಯೆಂದು ಇಸ್ರೇಲ್ ಆಪಾದಿಸಿದೆ.

ದಾಳಿಗೆ ಗುರಿಯಾಗಿದ್ದ ಮೆರ್ಸೆರ್ ಸ್ಟ್ರೀಟ್ ನೌಕೆಯ ಲೈಬೀರಿಯದ ಧ್ವಜಹೊಂದಿದ್ದು, ಜಪಾನಿ ಕಂಪೆನಿಯ ಒಡೆತನ ಹೊಂದಿದೆ. ಈ ತೈಲಟ್ಯಾಂಕರ್ ಹಡಗಿಗೆ ಅಮೆರಿಕದ ನೌಕಾಪಡೆಯ ವಿಮಾನವಾಹನ ಹಡಗು ಯುಎಸ್ಎಸ್ ರೋನಾಲ್ಡ್ ರೇಗನ್ ನ ಬೆಂಗಾವಲಿತ್ತೆಂದು, ಅಮೆರಿಕದ ಸೆಂಟ್ರಲ್ ಕಮಾಂಡ್‌ ಹೇಳಿಕೆ ತಿಳಿಸಿದೆ.

  ದಾಳಿ ಘಟನೆಯ ಬಗ್ಗೆ ತನಿಖೆ ನಡೆಸಲು ತಾನು ಸಿದ್ಧತೆ ನಡೆಸುತ್ತಿರುವುದಾಗಿ ಮಧ್ಯ ಪ್ರಾಚ್ಯ ಹಾಗೂ ಮಧ್ಯ ಏಶ್ಯದಲ್ಲಿ ಅಮೆರಿಕದ ಸೇನಾ ಕಾರ್ಯಾಚರಣೆಗಳ ಮೇಲೆ ಚಾರಣೆ ನಡೆಸುವ ಸೆಂಟ್ರಲ್ ಕಮಾಂಡ್‌ ನ ಹೇಳಿಕೆ ತಿಳಿಸಿದೆ. 

ಟ್ಯಾಂಕರ್ ಹಡಗಿನ ಮೇಲೆ ನಡೆದ ಡ್ರೋನ್ ದಾಳಿಯನ್ನು ಇರಾನ್ ಆಯೋಜಿಸಿತ್ತೆಂದು ಇಸ್ರೇಲಿ ವಿದೇಶಾಂಗ ಸಚಿವ ಯಾಯಿರ್ ಲ್ಯಾಪಿಡ್ ಆಪಾದಿಸಿದ್ದಾರೆ. ಆದಾಗ್ಯೂ ಇರಾನ್ ಈ ವಿಷಯವಾಗಿ ಯಾವುದೇ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿಲ್ಲ.

  ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರು ದಾಳಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ‘‘ ಇರಾನ್‌ ನ ಭಯೋತ್ಪಾದನೆ ವಿರುದ್ಧ ನೈಜ ಹಾಗೂ ಪರಿಣಾಮಕಾರಿ ಅಂತಾರಾಷ್ಟ್ರೀಯ ಪ್ರತಿಕ್ರಿಯೆ ನೀಡುವ ನಿಟ್ಟಿಲ್ಲಿ ಶ್ರಮಿಸುತ್ತಿದ್ದೇವೆ’’ ಎಂದವರು ಹೇಳಿದ್ದಾರೆ.

ದಾಳಿಯಲ್ಲಿ ತನ್ನ ಪಾತ್ರ ನಿರಾಕರಿಸಿದ ಇರಾನ್

ಓಮನ್ ಸಮೀಪದ ಮೆಡಿಟರೇನಿಯನ್ ಸಮುದ್ರದಲ್ಲಿ ಇಸ್ರೇಲಿ ನಿರ್ವಹಣೆಯ ಹಡಗಿನ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ತನ್ನ ಕೈವಾಡವಿದೆಯೆಂಬ ಆರೋಪವನ್ನು ಇರಾನ್ ನಿರಾಕರಿಸಿದೆ. ಈ ಬಗ್ಗೆ ರವಿವಾರ ಇರಾನ್‌ ನ ವಿದೇಶಾಂಗ ಸಚಿವಾಲಯದ ವಕ್ತಾರ ಖತೀಬ್  ಝಾದೆಹ್ ಅವರು ಹೇಳಿಕೆ ನೀಡಿ, ‘‘ ಜೆರುಸಲೇಂ ಅನ್ನು ಅತಿಕ್ರಮಿಸಿಕೊಂಡಿರುವ ಝಿಯೋನಿಸ್ಟ್ ಆಡಳಿತವು ಇರಾನ್‌ ನ ಇಸ್ಲಾಮಿಕ್ ಗಣರಾಜ್ಯದ ವಿರುದ್ಧ ಇಂತಹ ಪೊಳ್ಳು ಆರೋಪಗಳನ್ನು ಮಾಡುತ್ತಿರುವುದು ಇದು ಮೊದಲೇನಲ್ಲ. ಇಸ್ರೇಲಿ ಆಡಳಿತವು ಹೋದಲ್ಲೆಲ್ಲ ಅಸ್ಥಿರತೆ, ಭಯೋತ್ಪಾದನೆ ಹಾಗೂ ಹಿಂಸಾಚಾರವನ್ನು ತನ್ನೊಂದಿಗೆ ಒಯ್ಯಲಿದ್ದಾರೆ.


SHARE THIS

Author:

0 التعليقات: