ಪ್ರಧಾನಿ ಮೋದಿಯೊಂದಿಗೆ ಫೋನ್ ಸಂಭಾಷಣೆ ವೇಳೆ ಕಣ್ಣೀರಿಟ್ಟ ಭಾರತದ ಹಾಕಿ ಆಟಗಾರ್ತಿಯರು
ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಶುಕ್ರವಾರ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ಬ್ರಿಟನ್ ತಂಡದ ವಿರುದ್ಧ 3-4 ಗೋಲುಗಳ ಅಂತರದಿಂದ ವೀರೋಚಿತ ಸೋಲನುಭವಿಸಿತು. ಪಂದ್ಯದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಫೋನ್ ಮೂಲಕ ಭಾರತದ ಹಾಕಿ ಆಟಗಾರ್ತಿಯರೊಂದಿಗೆ ಮಾತನಾಡಿದರು.
ಒಲಿಂಪಿಕ್ಸ್ ನಲ್ಲಿ ಭಾರತೀಯ ಮಹಿಳಾ ಹಾಕಿ ಆಟಗಾರ್ತಿಯರ ಹೋರಾಟವನ್ನು ಪ್ರಧಾನಿ ಶ್ಲಾಘಿಸುತ್ತಿರುವಾಗ ಆಟಗಾರ್ತಿಯರು ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು.
ಭಾರತದ ಮಹಿಳಾ ಹಾಕಿ ತಂಡವು ಕೂದಲೆಳೆ ಅಂತರದಿಂದ ಐತಿಹಾಸಿಕ ಕಂಚು ವಂಚಿತವಾಗಿ 4ನೇ ಸ್ಥಾನ ಪಡೆಯಿತು. ಆದಾಗ್ಯೂ ಎಲ್ಲರ ಹೃದಯ ಗೆಲ್ಲಲು ಸಮರ್ಥವಾಗಿದೆ. ಇತಿಹಾಸದಲ್ಲಿ 3ನೇ ಬಾರಿ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಭಾರತದ ಮಹಿಳಾ ತಂಡ ಮೊದಲ ಬಾರಿ ಸೆಮಿ ಫೈನಲ್ ಗೆ ತಲುಪಿತ್ತು.
0 التعليقات: