Wednesday, 11 August 2021

ಪ್ರಧಾನಿ ಭೇಟಿ ಮಾಡಿದ ಅಮರಿಂದರ್ ಸಿಂಗ್, ಕೃಷಿ ಕಾನೂನುಗಳ ರದ್ದತಿಗೆ ಕೋರಿಕೆ


ಪ್ರಧಾನಿ ಭೇಟಿ ಮಾಡಿದ ಅಮರಿಂದರ್ ಸಿಂಗ್, 
ಕೃಷಿ ಕಾನೂನುಗಳ ರದ್ದತಿಗೆ ಕೋರಿಕೆ

   

ಹೊಸದಿಲ್ಲಿ: ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಕ್ರಮಗಳನ್ನು ತಕ್ಷಣವೇ ಆರಂಭಿಸುವಂತೆ ಒತ್ತಾಯಿಸಿದರು.

ರೈತರನ್ನು ಉಚಿತ ಕಾನೂನು ನೆರವು ವಿಭಾಗದಲ್ಲಿ ಸೇರಿಸಲು ಸಂಬಂಧಿತ ಕಾನೂನಿಗೆ ತಿದ್ದುಪಡಿ ಮಾಡುವಂತೆ ಸಿಂಗ್ ಕೋರಿದರು ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಬುಧವಾರ ಸಂಜೆ ಪ್ರಧಾನಿಯವರನ್ನು ಭೇಟಿ ಮಾಡಿದ ಪಂಜಾಬ್ ಸಿಎಂ, ಎರಡು ಪ್ರತ್ಯೇಕ ಪತ್ರಗಳನ್ನು ಸಲ್ಲಿಸಿದರು. ಪಂಜಾಬ್ ಹಾಗೂ  ಇತರ ರಾಜ್ಯಗಳ ರೈತರಲ್ಲಿ ವ್ಯಾಪಕ ಅಸಮಾಧಾನವನ್ನು ಉಂಟು ಮಾಡಿದ ಮೂರು ಕೃಷಿ ಕಾನೂನುಗಳನ್ನು ತಕ್ಷಣ ಪರಿಶೀಲನೆ ಮಾಡಿ ರದ್ದುಗೊಳಿಸುವಂತೆ ಆಗ್ರಹಿಸಿದರು.

ಕಳೆದ ವರ್ಷ ನವೆಂಬರ್ 26 ರಿಂದ ರೈತರು ದಿಲ್ಲಿ ಗಡಿಗಳಲ್ಲಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಹಾಗೂ  ಅವುಗಳನ್ನು ತಕ್ಷಣವೇ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.

ರೈತರ ಆಂದೋಲನವು ಪಂಜಾಬ್ ಹಾಗೂ  ದೇಶಕ್ಕೆ ಭದ್ರತಾ ಬೆದರಿಕೆಯನ್ನು ಉಂಟು ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಮುಖ್ಯಮಂತ್ರಿ ಹೇಳಿದರು.  ಸರಕಾರದೊಂದಿಗೆ ರೈತರ ಅಸಮಾಧಾನವನ್ನು ಬಳಸಿಕೊಳ್ಳಲು ಪಾಕಿಸ್ತಾನ ಬೆಂಬಲಿತ ದೇಶ ವಿರೋಧಿ ಪಡೆಗಳು ಹೊಂಚುಹಾಕುತ್ತಿವೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ರೈತರ ಕಾಳಜಿಯ ತ್ವರಿತ ಪರಿಹಾರಕ್ಕಾಗಿ ಪ್ರಧಾನಿ ಮಧ್ಯಸ್ಥಿಕೆಗಾಗಿ ಅಮರಿಂದರ್ ಸಿಂಗ್  ಕರೆ ನೀಡಿದರು.SHARE THIS

Author:

0 التعليقات: