Thursday, 5 August 2021

ಬಾರ್ಸಿಲೋನಾ ತೊರೆಯಲಿದ್ದಾರೆ ಲಿಯೋನಲ್ ಮೆಸ್ಸಿ !


ಬಾರ್ಸಿಲೋನಾ  ತೊರೆಯಲಿದ್ದಾರೆ ಲಿಯೋನಲ್ ಮೆಸ್ಸಿ !

ಬಾರ್ಸಿಲೋನಾ : ಫುಟ್ಬಾಲ್ ಮಾಂತ್ರಿಕ ಲಿಯೋನಲ್ ಮೆಸ್ಸಿ ಬಾರ್ಸಿಲೋನಾ ಫುಟ್ಬಾಲ್ ಕ್ಲಬ್​ನ್ನು ತೊರೆಯಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕ್ಲಬ್​, ಆರ್ಥಿಕ ಮತ್ತು ರಚನಾತ್ಮಕ ಅಡೆತಡೆಗಳು ಈ ಬೆಳವಣಿಗೆಗೆ ಕಾರಣ ಎಂದು ತಿಳಿಸಿದೆ.

ಬಾರ್ಸಿಲೋನಾ ಮತ್ತು ಲಿಯೋನಲ್ ಮೆಸ್ಸಿ ಗುರುವಾರ ಹೊಸ ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧತೆ ನಡೆದಿತ್ತು. ಆದರೆ ನೋಂದಣಿಗೆ ಸ್ಪ್ಯಾನಿಷ್ ಲಾಲಿಗಾ ನಿಯಮಗಳು ಅಡ್ಡಿಯಾಗುತ್ತವೆ. ಹೀಗಾಗಿ ಮೆಸ್ಸಿ ಬಾರ್ಸಿಲೋನಾದೊಂದಿಗೆ ಮುಂದುವರೆಯುವುದಿಲ್ಲ. ಈ ಬಗ್ಗೆ ಎರಡೂ ಕಡೆಯವರು ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

'ಬಾರ್ಸಿಲೋನಾ ಕ್ಲಬ್‌ನ ಶ್ರೇಷ್ಠ ಕೊಡುಗೆ ನೀಡಿದ ಮೆಸ್ಸಿಯವರಿಗೆ ಹೃದಯಪೂರ್ವಕ ಕೃತಜ್ಞತೆಗಳು, ಮೆಸ್ಸಿಯವರ ಭವಿಷ್ಯದ ವೈಯಕ್ತಿಕ ಮತ್ತು ವೃತ್ತಿಪರ ಜೀವನಕ್ಕೆ ಶುಭ ಹಾರೈಸುತ್ತೇವೆ ಎಂದು ಎಫ್​ಸಿಬಾರ್ಸಿಲೋನಾ ಡಾಟ್​ ಕಾಮ್​ ಹೇಳಿದೆ.

2004ರಲ್ಲಿ ಬಾರ್ಸಿಲೋನಾ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದ ನಂತರ ಮೆಸ್ಸಿ ತಮ್ಮ ಸಂಪೂರ್ಣ ವೃತ್ತಿಜೀವನವನ್ನು ಈ ಕ್ಲಬ್​ನೊಂದಿಗೆ ಕಳೆದಿದ್ದಾರೆ. ಜೂನ್​ 30ಕ್ಕೆ ಲಿಯೋನಲ್​ ಮೆಸ್ಸಿ ಒಪ್ಪಂದ ಮುಕ್ತಾಯವಾಗಿತ್ತು.



SHARE THIS

Author:

0 التعليقات: