Sunday, 8 August 2021

ಭಾರತೀಯರ ಪ್ರಯಾಣದ ಮೇಲಿನ ನಿರ್ಬಂಧ ಸಡಿಲಿಸಿದ ಬ್ರಿಟನ್


 ಭಾರತೀಯರ ಪ್ರಯಾಣದ ಮೇಲಿನ ನಿರ್ಬಂಧ ಸಡಿಲಿಸಿದ ಬ್ರಿಟನ್

ಲಂಡನ್: ಭಾರತೀಯರು ಬ್ರಿಟನ್ ಗೆ ಪ್ರಯಾಣಿಸುವುದರ ಮೇಲೆ ಹೇರಲಾಗಿದ್ದ ನಿರ್ಬಂಧಗಳನ್ನು ರವಿವಾರ ಸಡಿಸಲಾಗಿದೆ. ಭಾರತವನ್ನು ಕೆಂಪುಪಟ್ಟಿಯಿಂದ ಹಳದಿ ಪಟ್ಟಿಗೆ ಸೇರಿಸಲಾಗಿದೆ.

ಈ ನಿರ್ಧಾರದಿಂದಾಗಿ ಪೂರ್ಣ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಪಡೆದಿರುವ ಭಾರತದ ಪ್ರಯಾಣಿಕರು ಬ್ರಿಟನ್ ನಲ್ಲಿ 10 ದಿನಗಳ ಕಾಲ ಹೊಟೇಲ್ ಕ್ವಾರಂಟೈನ್ ನಲ್ಲಿ ಇರಬೇಕಾದ ಅಗತ್ಯವಿಲ್ಲ.ಅದರ ಬದಲಿಗೆ ಅವರು 10 ದಿನಗಳ ಕಾಲ  ಹೋಮ್ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ ಎಂದು ಆರೋಗ್ಯ ಹಾಗೂ ಸಾಮಾಜಿಕ ಸಂರಕ್ಷಣೆ ಇಲಾಖೆ ತಿಳಿಸಿದೆ.

ಬ್ರಿಟನ್ ಗೆ ಬಂದ ನಂತರ ಸರಕಾರ ಅನುಮೋದಿಸಿದ ಆರೈಕೆ ಕೇಂದ್ರಗಳಲ್ಲಿ 10 ದಿನಗಳ ಕಾಲ ಪ್ರತ್ಯೇಕವಾಸದಲ್ಲಿ ಇರಬೇಕು ಎಂಬ  ನಿರ್ಬಂಧ ಇತ್ತು. ಇದಕ್ಕಾಗಿ ಹೆಚ್ಚುವರಿಯಾಗಿ ತಲಾ 1.80 ಲಕ್ಷ ರೂ. ಶುಲ್ಕ ನೀಡಬೇಕಾಗಿತ್ತು. ಈಗ ಈ ನಿಯಮ ಅನ್ವಯವಾಗುವುದಿಲ್ಲ ಎಂದು ಇಲಾಖೆ ತಿಳಿಸಿದೆ.


SHARE THIS

Author:

0 التعليقات: