Sunday, 15 August 2021

ಈಶ್ವರಮಂಗಲ ತ್ವೈಬ ಸೆಂಟರ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ


ಈಶ್ವರಮಂಗಲ ತ್ವೈಬ ಸೆಂಟರ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಈಶ್ವರಮಂಗಲ: ತ್ವೈಬ ಎಜ್ಯುಕೇಶನ್ ಸೆಂಟರ್ ವಿದ್ಯಾರ್ಥಿ ಸಂಘಟನೆಯಾದ ತ್ವೀಬುಲ್ ಹಿಮ್ಮ ವತಿಯಿಂದ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಕೆಸಿಎಫ್ ಯುಎಇ ನ್ಯಾಶನಲ್ ಸಮಿತಿ ನಾಯಕರಾದ ಆದಂ ಕೆಪಿ ಧ್ವಜಾರೋಹಣವನ್ನು ನೆರವೇರಿಸಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯವನ್ನು ಕೋರಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಿಸ್ಬಾಹಿ ಅಧ್ಯಕ್ಷತೆ ವಹಿಸಿ ಸ್ವಾತಂತ್ರ್ಯ ದಿನಾಚರಣೆಯ ಸಂದೇಶವನ್ನು ನೀಡಿದರು. ಸಂಸ್ಥೆಯ ಮದರ್ರಿಸರಾದ ದಾವೂದುಲ್ ಹಕೀಂ ಹಿಮಮಿ ಸಖಾಫಿ ಉದ್ಘಾಟಿಸಿದರು. ಅಲ್ ಹಾಫಿಝ್ ಅನಸ್ ಖಿರಾಅತ್ ಪಾರಾಯಣ ಮಾಡಿದರು.  ತ್ವೀಬುಲ್ ಹಿಮ್ಮ  ಸ್ಟೂಡೆಂಟ್ಸ್ ವಿಂಗ್ ನಿಂದ ವೈವಿಧ್ಯ ಕಾರ್ಯಕ್ರಮಗಳು ನಡೆಯಿತು. ಸದರ್ ಉಸ್ತಾದ್ ತಾಹ ಸಅದಿ, ತಖ್ಯುದ್ದೀನ್ ಮದನಿ, ಅಬ್ದುಲ್ಲಾ ಪಟ್ಲ, ಅಲ್ ಹಾಫಿಝ್ ಅಸದುಲ್ಲಾ, ಮುಸ್ತಫಾ, ತನ್ಝೀಲ್ ಭಾಷಣ ಮಾಡಿದರು. ಎಸ್ ವೈ ಎಸ್ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಜಲೀಲ್ ಸಖಾಫಿ ಕರ್ನೂರ್, ಕರ್ನಾಟಕ ಮುಸ್ಲಿಂ ಜಮಾಅತ್ ಈಶ್ವರಮಂಗಲ ವಲಯ ಅಧ್ಯಕ್ಷರಾದ ಅಬೂಬಕರ್ ಸಿಎಂ, ಎಸ್ ವೈ ಎಸ್ ಮೀನಾವು ಬ್ರಾಂಚ್ ಅಧ್ಯಕ್ಷರಾದ ಅಬ್ದುಲ್ ಲತೀಫ್ ಮುಸ್ಲಿಯಾರ್,  ಅಬ್ಬಾಸ್ ರೋಯಲ್, ಮುಹಮ್ಮದ್ ಮೀನಾವು, ಶರೀಫ್ ಪಿಎಚ್ಚ್, ರಫೀಖ್ ಕಾವುಂಜ ಮುದಲಾದವರು ಉಪಸ್ಥಿತರಿದ್ದರು. ಇದು ಭಾರತ ಎಂಬ ಹಸ್ತ ಕೃತಿಯನ್ನು ಕೆಸಿಎಫ್ ನಾಯಕರುಗಳಾದ ಮೂಸಾ ಮೀನಾವು ರವರು ಲತೀಫ್  ಕನ್ನಡ್ಕರವರಿಗೆ ನೀಡಿ ಪ್ರಕಾಶನ ಮಾಡಿದರು. ತ್ವೀಬುಲ್ ಹಿಮ್ಮ ಪ್ರಧಾನ ಕಾರ್ಯದರ್ಶಿ ಅಶ್ಫಾಖ್ ಸ್ವಾಗತಿಸಿ, ಸಿಟಿ ಮುಝ್ಝಮ್ಮಿಲ್ ವಂದಿಸಿದರು.


SHARE THIS

Author:

0 التعليقات: