Sunday, 8 August 2021

ಕೇರಳ ತುಳು ಅಕಾಡಮಿಯ ಕೆಲಸ ಶ್ಲಾಘನೀಯ- ಕೆ ಆರ್‌ ಜಯಾನಂದ


ಕೇರಳ ತುಳು ಅಕಾಡಮಿಯ ಕೆಲಸ ಶ್ಲಾಘನೀಯ- ಕೆ ಆರ್‌ ಜಯಾನಂದ

ಮಂಜೇಶ್ವರ: ವೈವಿಧ್ಯಮಯ ಆಚಾರವಿಚಾರಗಳಿಂದ ಸಂಪನ್ನವಾದ ತುಳುನಾಡು ಸಾಂಸ್ಕೃತಿಕ , ಸಾಮಾಜಿಕ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಮಹತ್ತಾದುದು ಎಂದು ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್‌ ಜಯಾನಂದ ಹೇಳಿದರು. ಕೇರಳ ತುಳು ಅಕಾಡಮಿ ಆಶ್ರಯದಲ್ಲಿ ಮಂಜೇಶ್ವರದ ದುರ್ಗಿಪಳ್ಳದ ತುಳುಭವನದಲ್ಲಿ ನಡೆದ ‘ಆಟಿದ ಒರ್ಮೆʼ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮೊದಲ ಸ್ವಾತಂತ್ರ್ಯ ಹೋರಾಟ ಮತ್ತು ಮೊದಲ ಸಾಮೂಹಿಕ ಭೋಜನ ನಡೆಸಿದ ಮಹನೀಯರು ತುಳುನಾಡಿನ ಇತಿಹಾಸದಲ್ಲಿ ಮೆರುಗಿ ಸ್ಥಾನ ಪಡೆದಿದ್ದಾರೆ. ಹಲವು ಭಾಷೆ , ಮತ ಧರ್ಮಗಳ ಸಂಗಮ ಭೂಮಿಯಾದ ಇಲ್ಲಿನ ಸಾಂಸ್ಕೃತಿಕ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ತಿಳಿಯಪಡಿಸುವ ಕೆಲಸವನ್ನು ಕೇರಳ ತುಳು ಅಕಾಡಮಿ ನೀಡುತ್ತಾ ಬರುತ್ತಿರುವುದು ಶ್ಲಾಘನೀಯ ಎಂದು ಕೆ.ಆರ್‌ ಜಯಾನಂದ ಹೇಳಿದರು.

ಹಿರಿಯ ರಂಗಕರ್ಮಿ, ಕೇರಳ ತುಳು ಅಕಾಡಮಿಯ ಅಧ್ಯಕ್ಷ ಉಮೇಶ್‌ ಎಂ ಸಾಲ್ಯಾನ್‌ ಅಧ್ಯಕ್ಷತೆ ವಹಿಸಿದರು. ತುಳು ಸಂಸ್ಕೃತಿ ವಿಶ್ವಕ್ಕೇ ಮಾದರಿಯಾದ ಸಮೃದ್ಧ ಸಂಸ್ಕೃತಿ. ಹಿಂದಿನ ಕಾಲದಲ್ಲಿ ಆಟಿ ತಿಂಗಳು ದಾರಿದ್ರ್ಯ, ರೋಗ ರುಜಿನಗಳ ತಿಂಗಳು. ನಮ್ಮ ಹಿರಿಯರು ಒಂದು ತಿಂಗಳು ಮಾತ್ರ ಸಂಕಷ್ಟ ಅನುಭವಿಸುತ್ತಿದ್ದರು. ನಾವೀಗ ಕೊರೋನ ಹಾವಳಿಯಿಂದ ತಿಂಗಳುಗಟ್ಟಲೆ ಕಷ್ಟ ಅನುಭವಿಸುತ್ತಿದ್ದೇವೆ. ಇತರ ಪ್ರದೇಶಗಳಿಗೆ ಹೋಲಿಸಿದರೆ ತುಳುನಾಡಿನಲ್ಲಿ ಈ ರೋಗ ಹತೋಟಿಗೆ ಬಂದಿದೆ. ಅದಕ್ಕೆ ಕಾರಣ ಇಲ್ಲಿನ ಕೃಷಿ , ಪ್ರಕೃತಿ, ಆರಾಧನೆ, ಆಚರಣೆಗಳು ಎಂದು ಉಮೇಶ್‌ ಸಾಲ್ಯಾನ್‌ ಹೇಳಿದರು.

ಕೇರಳ ಸರಕಾರದ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಕಾರ್ಯದರ್ಶಿ ಡಿ.ಬೂಬ ಅವರು ಮಾತನಾಡಿ ಪರಂಪರೆಗೆ ಮರು ಮೌಲೀಕರಣ ಕಲ್ಲಿಸುತ್ತಿರುವ ಕೇರಳ ತುಳು ಅಕಾಡಮಿಯು ತುಳುನಾಡಿನ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿರುವುದು ಅಭಿಮಾನದ ವಿಷಯ ಎಂದರು. ಅಕಾಡಮಿಯ ಸದಸ್ಯರಾದ ರಾಧಾಕೃಷ್ಣ .ಕೆ ಉಳಿಯತ್ತಡ್ಕ, ವಿಶ್ವನಾಥ ಕುದುರು, ಸಾಹಿತಿ ಸತೀಶ್‌ ಸಾಲ್ಯಾನ್‌ ನೆಲ್ಲಿಕುಂಜೆ ಶುಭ ಹಾರೈಸಿದರು.

ಆಟಿಯ ಮಹತ್ವದ ಬಗ್ಗೆ ಕಾಸರಗೋಡು ಸಹಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ.ಆಶಾಲತಾ ಚೇವಾರ್‌ ವಿಸ್ತೃತವಾಗಿ ಮಾತನಾಡಿದರು. ಆಚರಣೆ ನಂಬಿಕೆಯ ಮೂಲಕ ಬದುಕು ಕಟ್ಟಿದ ಹಿರಿಯರು ಎಲ್ಲವನ್ನೂ ವೈಜ್ಞಾನಿಕ ನೆಲೆಯಲ್ಲಿ ಕಂಡರು. ಸಾಂಸ್ಕೃತಿಕವಾಗಿ ಅವರದು ಶ್ರೀಮಂತ ಬದುಕು. ತುಳುವರಿಗೆ ಪ್ರತಿ ತಿಂಗಳೂ ಮಹತ್ವದ್ದು. ಆಟಿ ತಿಂಗಳ ಆಚರಣೆಯಲ್ಲಿನ ಆರಾಧನೆ, ಆಹಾರ ಪದ್ಧತಿ, ಕೆಲವು ಕಟ್ಟುಪ್ಪಾಡುಗಳನ್ನು ಡಾ. ಆಶಾಲತಾ ಅವರು ಉದಾಹರಣೆ ಸಮೇತವಾಗಿ ತಿಳಿಸಿದರು.

ಅಕಾಡಮಿ ಸದಸ್ಯೆ ಗೀತಾಸಾಮಾನಿ, ಸ್ವಾಗತಿಸಿದರು. ಸದಸ್ಯ ಬಾಲಕೃಷ್ಣ ಶೆಟ್ಟಿಗಾರ್‌ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪ್ರದೀಪ್‌ ಕುಮಾರ್‌ ವಂದಿಸಿದರು.


SHARE THIS

Author:

0 التعليقات: