ಮಂಗಳೂರು : ಸಿಟಿ ಬಸ್ ಮೇಲೆ ಬಿದ್ದ ತೆಂಗಿನಮರ
ಮಂಗಳೂರು : ನಗರದ ಮಲ್ಲಿಕಟ್ಟೆಯ ಸರ್ಕಲ್ನಲ್ಲಿ ಸಿಟಿ ಬಸ್ ಮೇಲೆ ತೆಂಗಿನಮರ ಬಿದ್ದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಸಿಟಿ ಬಸ್ ನಂತೂರು ಕಡೆಗೆ ತೆರಳುತ್ತಿತ್ತು. ಈ ವೇಳೆ ಬೃಹತ್ ತೆಂಗಿನಮರ ಬಸ್ ಮೇಲೆ ಬಿದ್ದಿದೆ. ಮರ ಬಿದ್ದ ಪರಿಣಾಮ ವಿದ್ಯುತ್ ಲೈನ್ಗಳು ಜಖಂಗೊಂಡಿವೆ.
ಇನ್ನು ರಸ್ತೆಗೆ ಬಿದ್ದ ಮರದಿಂದ ತೆಂಗಿನಕಾಯಿಗಳನ್ನು ಸಾರ್ವಜನಿಕರು ಕಿತ್ತು ಕೊಂಡೊಯ್ದರು. ನಂತರ ಸಾರ್ವಕನಿಕರ ಸಹಕಾರದಲ್ಲಿ ಸಂಚಾರ ಪೊಲೀಸರು ಬಿದ್ದಿದ್ದ ತೆಂಗಿನಮರ ತೆರವು ಕಾರ್ಯಾಚರಣೆಯಲ್ಲಿದ್ದಾರೆ.
0 التعليقات: