Friday, 13 August 2021

ಮುಂಬೈ: ಕೋವಿಡ್ ಡೆಲ್ಟಾ ಪ್ಲಸ್ ರೂಪಾಂತರದಿಂದಾಗಿ ಮಹಿಳೆ ಮೃತ್ಯು

 

ಮುಂಬೈ: ಕೋವಿಡ್ ಡೆಲ್ಟಾ ಪ್ಲಸ್ ರೂಪಾಂತರದಿಂದಾಗಿ ಮಹಿಳೆ ಮೃತ್ಯು

ಮುಂಬೈ: ಕೋವಿಡ್ ಡೆಲ್ಟಾ ಪ್ಲಸ್ ರೂಪಾಂತರ ತಳಿಯ ಸೋಂಕಿನಿಂದಾಗಿ ಮುಂಬೈ ನಲ್ಲಿ ಮೊದಲ ಸಾವಿನ ಪ್ರಕರಣ ವರದಿಯಾಗಿದೆ. ಸಂಪೂರ್ಣ ಲಸಿಕೆ ಹಾಕಿಸಿದ್ದ 63 ವರ್ಷದ ಮಹಿಳೆಯೊಬ್ಬರು ಜುಲೈನಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದು ಡೆಲ್ಟಾ ಪ್ಲಸ್ ತಳಿಯಿಂದ ಮಹಾರಾಷ್ಟ್ರದಲ್ಲಿ ವರದಿಯಾಗಿರುವ ಎರಡನೇ ಸಾವಿನ ಪ್ರಕರಣವಾಗಿದೆ.

ಮಹಿಳೆಯ ಸಾವಿನ ನಂತರ  ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದ 6 ಮಂದಿಗೆ ಕೋವಿಡ್ ಸೋಂಕು ತಗಲಿದೆ. ಇದರಲ್ಲಿ ಇಬ್ಬರು ಡೆಲ್ಟಾ ಪ್ಲಸ್ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆ. ಇದನ್ನು ಹೆಚ್ಚು ಸಾಂಕ್ರಾಮಿಕ ಎಂದು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು.

ಜೂನ್ 13 ರಂದು ರತ್ನಗಿರಿ ಜಿಲ್ಲೆಯಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ತಳಿಗೆ ಮೊದಲ ಸಾವಿನ ಪ್ರಕರಣ ವರದಿಯಾಗಿತ್ತು. 80 ವರ್ಷದ ಮಹಿಳೆ ಮೃತಪಟ್ಟಿದ್ದರು. ಈ ಮಹಿಳೆ ಕೋವಿಡ್-19 ಲಸಿಕೆಯ ಒಂದೂ ಡೋಸ್ ಅನ್ನು ಪಡೆದಿರಲಿಲ್ಲ.

ಇದೀಗ ಪೂರ್ವ ಮುಂಬೈ ಉಪನಗರ ಘಾಟ್ಕೋಪರ್ ನಿವಾಸಿಯಾದ ಮಹಿಳೆ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಜುಲೈ 27ರಂದು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.


SHARE THIS

Author:

0 التعليقات: