Tuesday, 17 August 2021

ಮುಹಿಮ್ಮಾತ್ ಮೂವತ್ತನೇ ವಾರ್ಷಿಕ ಸಮಾರೋಪ ಹಾಗೂ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಉರೂಸ್ ಮುಬಾರಕ್ ಮಾರ್ಚ್ ನಲ್ಲಿ


 ಮುಹಿಮ್ಮಾತ್ ಮೂವತ್ತನೇ ವಾರ್ಷಿಕ ಸಮಾರೋಪ ಹಾಗೂ 
ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಉರೂಸ್ ಮುಬಾರಕ್ ಮಾರ್ಚ್ ನಲ್ಲಿ 

ಕಾಸರಗೋಡು: ಮುಹಿಮ್ಮಾತ್ ಮೂವತ್ತನೇ ವಾರ್ಷಿಕ ಸಮಾರೋಪ ಸಮ್ಮೇಳನ  ಮತ್ತು ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್  ಹದಿನಾರನೇ ಉರೂಸ್ ಮುಬಾರಕ್  ಮಾರ್ಚ್ 4 ರಿಂದ 6 ರ ವರೆಗೆ ನಡೆಸಲು ಮುಹಿಮ್ಮಾತ್ ಪ್ರೆಸಿಡೆಂಟ್ ಸುಲ್ತಾನುಲ್ ಉಲಮ ಎ.ಪಿ ಅಬೂಬಕರ್ ಮುಸ್ಲಿಯಾರ್ ರವರ ಅಧ್ಯಕ್ಷತೆಯಲ್ಲಿ ಕೇಂದ್ರ ಕಮಿಟಿ ತೀರ್ಮಾನಿಸಿತು.

 ಮೂವತ್ತನೇ ವಾರ್ಷಿಕದ ಭಾಗವಾಗಿ ಏಳು ತಿಂಗಳು ಮುಂದುವರೆಯುವ ಕರ್ಮ ಪದ್ಧತಿಗಳನ್ನು ಜಾರಿಗೂಳಿಸಲಾಗುತ್ತದೆ. ವಿದ್ಯಾಭ್ಯಾಸ, ಜೀವ ಕಾರುಣ್ಯ ಕ್ಷೇತ್ರಗಳಲ್ಲಿ ಹೊಸ ಸೇವೆಗಳನ್ನು ಆರಂಭಿಸಲು ಯೋಜನೆಯಿದೆ. ಹೊಸ ಕ್ಯಾಂಪಸ್ ಗಳು ಮತ್ತು  ಕೋರ್ಸ್ ಗಳು  ಆರಂಭವಾಗಲಿದೆ. ಇದರ ಕುರಿತು ಚರ್ಚಿಸಲು ಕಾರಂದೂರ್ ಮರ್ಕಝ್ ನಲ್ಲಿ ಸೇರಿದ ಮುಹಿಮ್ಮಾತ್ ಸಮಿತಿ ಸಭೆಯಲ್ಲಿ ಮುಹಿಮ್ಮಾತ್ ವೈಸ್ ಪ್ರೆಸಿಡೆಂಟ್ ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ದುಆ ಮಾಡಿದರು, ಜನರಲ್ ಸೆಕ್ರೆಟರಿ ಬಿ.ಎಸ್ ಅಬ್ದುಲ್ಲಾ ಕುಞ್ಞಿ ಫೈಝಿ ಸ್ವಾಗತಿಸಿದರು.

 ಸಯ್ಯಿದ್ ಇಬ್ರಾಹೀಂ ಹಾದಿ ತಂಙಳ್, ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್, ಸಯ್ಯಿದ್ ಹಾಮಿದ್ ಅನ್ವರ್ ಅಹ್ದಲ್ ತಂಙಳ್, ಹಾಜಿ ಅಮೀರಲಿ ಚೂರಿ, ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್, ಪಿ.ಬಿ ಬಶೀರ್ ಪುಳಿಕ್ಕೂರ್, ವೈ.ಎಂ ಅಬ್ದುರ್ರಹ್ಮಾನ್ ಅಹ್ಸನಿ, ಮೂಸ ಸಖಾಫಿ ಕಳತ್ತೂರ್, ಅಬೂಬಕರ್ ಕಾಮಿಲ್ ಸಖಾಫಿ ಮುಂತಾದವರು ಭಾಗವಹಿಸಿದರು.  ಸುಲೈಮಾನ್ ಕರಿವೆಲ್ಲೂರ್ ಕೃತಜ್ಞತೆ ಸಲ್ಲಿಸಿದರು.


SHARE THIS

Author:

0 التعليقات: