ತ್ರಿಪುರಾ:ಹೊಂಚು ದಾಳಿಯಲ್ಲಿ ಇಬ್ಬರು ಬಿಎಸ್ಎಫ್ ಯೋಧರು ಹುತಾತ್ಮ
ಅಗರ್ತಲಾ : ಅಗರ್ತಲಾದಿಂದ 90 ಕಿ.ಮೀ. ದೂರದಲ್ಲಿರುವ ತ್ರಿಪುರಾದ ಧಲೈ ಜಿಲ್ಲೆಯ ಗಡಿ ಹೊರಠಾಣೆ ಬಳಿ ಮಂಗಳವಾರ ಮುಂಜಾನೆ ಗಸ್ತು ಕರ್ತವ್ಯದಲ್ಲಿದ್ದಾಗ ಓರ್ವ ಸಬ್ ಇನ್ಸ್ಪೆಕ್ಟರ್ ಮಟ್ಟದ ಅಧಿಕಾರಿ ಸೇರಿದಂತೆ ಇಬ್ಬರು ಗಡಿ ಭದ್ರತಾ ಪಡೆ (ಬಿಎಸ್ಎಫ್) ಯೋಧರು ಉಗ್ರರ ಹೊಂಚು ದಾಳಿಗೆ ಹುತಾತ್ಮರಾಗಿದ್ದಾರೆ.
ನಿಷೇಧಿತ ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರಾ (ಎನ್ ಎಲ್ ಎಫ್ ಟಿ) ಘಟನೆಯಲ್ಲಿ ಭಾಗಿಯಾಗಿರುವ ಶಂಕೆ ಇದೆ.
ಬಿಎಸ್ಎಫ್ ಕಾನ್ಸ್ಟೇಬಲ್ ಹಾಗೂ ಧಲೈ ಜಿಲ್ಲೆಯ ಚವ್ಮಾನು ಪೊಲೀಸ್ ಠಾಣೆ ವ್ಯಾಪ್ತಿಯ ಆರ್.ಸಿ. ನಾಥ್ ಗಡಿ ಹೊರಠಾಣೆಯಲ್ಲಿ (ಬಿಒಪಿ) ಕರ್ತವ್ಯದಲ್ಲಿದ್ದ ಸಬ್ ಇನ್ಸ್ಪೆಕ್ಟರ್ ಹೊಂಚು ದಾಳಿಯಲ್ಲಿ ಕೊಲ್ಲಲ್ಪಟ್ಟರು ಎಂದು ತ್ರಿಪುರಾ ಪೊಲೀಸ್ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ (ಕಾನೂನು ಹಾಗೂ ಸುವ್ಯವಸ್ಥೆ) ಅರಿಂದಮ್ ನಾಥ್ ಅವರು ತಿಳಿಸಿದ್ದಾರೆ.
0 التعليقات: