Monday, 9 August 2021

ವಾಹನ ಸವಾರರೇ ಗಮನಿಸಿ : ಇನ್ಮುಂದೆ ನಿಮ್ಮ ಮೇಲೆ ಕಣ್ಣಿಡುತ್ತೆ "ಸ್ಪೀಡ್ ಟ್ರ್ಯಾಕರ್ ಕ್ಯಾಮೆರಾ"...! ವೇಗವಾಗಿ ವಾಹನ ಓಡಿಸಿದ್ರೆ ಲೈಸನ್ಸ್‌ ರದ್ದು


 ವಾಹನ ಸವಾರರೇ ಗಮನಿಸಿ : ಇನ್ಮುಂದೆ ನಿಮ್ಮ ಮೇಲೆ ಕಣ್ಣಿಡುತ್ತೆ "ಸ್ಪೀಡ್ ಟ್ರ್ಯಾಕರ್ ಕ್ಯಾಮೆರಾ"...! ವೇಗವಾಗಿ ವಾಹನ ಓಡಿಸಿದ್ರೆ ಲೈಸನ್ಸ್‌ ರದ್ದು

ನವದೆಹಲಿ : ಇತರ ದೇಶಗಳಿಗಿಂತ ಭಾರತದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಿವೆ. ಇನ್ನು ಈ ರೀತಿಯ ಹೆಚ್ಚಿನ ಅಪಘಾತಗಳಿಗೆ ಕಾರಣ ಅತಿವೇಗ ಮತ್ತು ಸಂಚಾರ ನಿಯಮಗಳನ್ನ ಅನುಸರಿಸದಿರುವುದೇ ಆಗಿದೆ. ಸರ್ಕಾರ ಈ ಅಪಘಾತಗಳನ್ನ ಕಡಿಮೆ ಮಾಡಲು ನಿರಂತರ ಪ್ರಯತ್ನ ಮಾಡುತ್ಲೇ ಇದ್ದಾರೆ. ಸಧ್ಯ ಈ ಪ್ರಯತ್ನದ ಭಾಗವಾಗಿ ಅಧಿಕಾರಿಗಳು ರಸ್ತೆಯ ಮೇಲಿನ ಕಂಬಗಳಿಗೆ ಸ್ಪೀಡ್ ಟ್ರ್ಯಾಕರ್ ಕ್ಯಾಮೆರಾಗಳನ್ನು ಅಳವಡಿಸ್ತಿದ್ದಾರೆ. ಈ ಮೂಲಕ ವೇಗವಾಗಿ ಬರುವ ವಾಹನಗಳ ಮೇಲೆ ಕಣ್ಣಿಡಲಾಗ್ತಿದೆ. ಈ ಕ್ಯಾಮೆರಾಗಳು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತಿದ್ದು, ವೇಗವಾಗಿ ಓಡುವ ವಾಹನಗಳ ಅಗತ್ಯ ಮಾಹಿತಿಯನ್ನ ಪೊಲೀಸರಿಗೆ (ಸಿಸ್ಟಂ) ರವಾನಿಸುತ್ವೆ.

ಸಧ್ಯ ಈ ರಸ್ತೆಗಳಲ್ಲಿ ಸ್ಪೀಡ್ ಟ್ರ್ಯಾಕರ್ ಕ್ಯಾಮೆರಾಗಳನ್ನ ಅಳವಡಿಸಲಾಗಿದೆ..! ಸಧ್ಯ ದೆಹಲಿ ಮತ್ತು ಹರಿಯಾಣದ ಕೆಲವು ರಸ್ತೆಗಳಲ್ಲಿ ಈ ಕ್ಯಾಮೆರಾಗಳನ್ನ ಅಳವಡಿಸಿದ್ದು, ಯಶಸ್ವಿಯಾದ್ರೆ ಹಂತ ಹಂತವಾಗಿ ಎಲ್ಲ ದೇಶದ ಎಲ್ಲ ರಸ್ತೆಗಳಿಗೆ ಈ ಕ್ಯಾಮೆರ ಕಣ್ಣಿಡುತ್ತೆ. ಇನ್ನು ಈ ಕ್ಯಾಮೆರಾದಲ್ಲಿ ಪೊಲೀಸರು ವಾಹನದ ವೇಗ ಪತ್ತೆ ವ್ಯವಸ್ಥೆಯನ್ನ ಅಳವಡಿಸಿದ್ದು, ಅದರ ಮೇಲೆ ವೇಗವಾಗಿ ಚಲಿಸುವ ವಾಹನಗಳ ಬಗ್ಗೆ ಪೊಲೀಸರು ಮಾಹಿತಿ ಪಡೆಯುತ್ತಾರೆ.

ಪೊಲೀಸ್ ಇಲಾಖೆ ಈ ವೇಗ ಪತ್ತೆ ವ್ಯವಸ್ಥೆಯನ್ನ ಮಾರುತಿ ಸುಜುಕಿ ಎರ್ಟಿಂಗದಲ್ಲಿ ಅಳವಡಿಸಿದ್ದು, ಇದನ್ನು ಯಾವಾಗಲೂ ಪೊಲೀಸ್ ಕಾನ್ಸ್ಟೇಬಲ್ ಮೇಲ್ವಿಚಾರಣೆ ಮಾಡುತ್ತಾರೆ. ವ್ಯವಸ್ಥೆಯ ಮೂಲಕ ಅತಿ ವೇಗದಲ್ಲಿ ಓಡುತ್ತಿರುವ ವಾಹನಗಳನ್ನ ಪತ್ತೆಹಚ್ಚುವ ಮೂಲಕ, ಈ ಮಾಹಿತಿಯನ್ನು ಹಿರಿಯ ಅಧಿಕಾರಿಗೆ ನೀಡಲಾಗುತ್ತದೆ. ಅದರ ನಂತರ ಆ ವಾಹನವನ್ನ ನಿಲ್ಲಿಸಿ ಚಲನ್ ಮಾಡಲಾಗಿದೆ. ವೇಗದ ವಾಹನಗಳ ಸವಾರರಿಗೆ ರೂ. 2,000 ವರೆಗೆ ದಂಡ ವಿಧಿಸಬಹುದು. ಇನ್ನು ಪರವಾನಗಿಯನ್ನ ಮೂರು ತಿಂಗಳವರೆಗೆ ರದ್ದುಗೊಳಿಸಬಹುದು.

ಈ ಸ್ಪೀಡ್ ಟ್ರ್ಯಾಕರ್ ಕ್ಯಾಮೆರಾ ಹೇಗೆ ಕೆಲಸ ಮಾಡುತ್ತದೆ..!

ಪೊಲೀಸರು ಸ್ಥಾಪಿಸಿದ ಈ ಸ್ಪೀಡ್ ಟ್ರ್ಯಾಕರ್ ಕ್ಯಾಮೆರಾಗಳು ರೇಡಾರ್ ಅನ್ನು ಆಧರಿಸಿವೆ, ಇದರಲ್ಲಿ ಡಾಪ್ಲರ್ ಪರಿಣಾಮವನ್ನು ವೇಗವನ್ನು ಟ್ರ್ಯಾಕ್ ಮಾಡಲು ಬಳಸಲಾಗುತ್ತದೆ. ಈ ಕ್ಯಾಮೆರಾಗಳು ರೇಡಿಯೋ ತರಂಗಗಳಲ್ಲಿ ಕೆಲಸ ಮಾಡುತ್ತವೆ. ಈ ರೇಡಿಯೋ ತರಂಗಗಳು ಬೆಳಕಿನೊಂದಿಗೆ ಚಲಿಸುತ್ತವೆ. ಅಲ್ಲದೇ ನೈಜ ಸಮಯದ ವೇಗ ಮಾಹಿತಿಯನ್ನ ವ್ಯವಸ್ಥೆಗೆ ರವಾನಿಸುತ್ತವೆ.

ಪೊಲೀಸರು ಬಳಸುವ ಲೇಸರ್ ಗನ್ ಕೂಡ ಈ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತದೆ. ಈ ಸ್ಪೀಡ್ ಟ್ರ್ಯಾಕರ್ ಕ್ಯಾಮೆರಾಗಳು ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ ಸಿಸ್ಟಮ್ (ANPR) ನೊಂದಿಗೆ ಬರುತ್ವೆ. ಇದು ವಾಹನದ ವೇಗ ಹಾಗೂ ಸಂಖ್ಯೆಯನ್ನ ಟ್ರ್ಯಾಕ್ ಮಾಡುತ್ತದೆ. ವೇಗದ ಚಾಲಕರು ಈ ಕ್ಯಾಮೆರಾದ ದೃಷ್ಟಿಯಿಂದ ತಪ್ಪಿಸಿಕೊಳ್ಳೊದು ತುಂಬಾ ಕಷ್ಟವಾಗುತ್ತದೆ. ಸಮಯದ ಜೊತೆಗೆ, ಈ ಸ್ಪೀಡ್ ಟ್ರ್ಯಾಕರ್ ಕ್ಯಾಮೆರಾಗಳನ್ನ ಇತರ ಸ್ಥಳಗಳಲ್ಲಿ ಅಳವಡಿಸಲಾಗುವುದು. ಅಂದ್ಹಾಗೆ, ಇದು ಪೊಲೀಸರಿಗೆ ಬಹಳಷ್ಟು ಸಹಾಯ ಮಾಡುವ ನಿರೀಕ್ಷೆಯಿದೆ.


SHARE THIS

Author:

0 التعليقات: