Saturday, 14 August 2021

ಭಾರತದ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸುತ್ತೇವೆ ಆದರೆ, ಮಿಲಿಟರಿ ಪಾತ್ರ ನಿರ್ವಹಿಸದಿರಲಿ: ತಾಲಿಬಾನ್‌


 ಭಾರತದ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸುತ್ತೇವೆ ಆದರೆ, ಮಿಲಿಟರಿ ಪಾತ್ರ ನಿರ್ವಹಿಸದಿರಲಿ: ತಾಲಿಬಾನ್‌

ಕಾಬುಲ್ : ಅಫ್ಗಾನಿಸ್ತಾನದಲ್ಲಿ ಭಾರತ ಕೈಗೊಂಡಿರುವ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿರುವ ತಾಲಿಬಾನ್, ಅದೇ ಸಮಯ  ಅಫ್ಗಾನಿಸ್ತಾನದಲ್ಲಿ ಯಾವುದೇ ಮಿಲಿಟರಿ ಪಾತ್ರ ನಿರ್ವಹಿಸುವುದರ ವಿರುದ್ಧ ಭಾರತವನ್ನು ಎಚ್ಚರಿಸಿದೆ.

"ಮಿಲಿಟರಿ ಪಾತ್ರವೆಂದರೇನು? ಅಫ್ಗಾನಿಸ್ತಾನದಲ್ಲಿ ಅವರ ಮಿಲಿಟರಿ ಅಸ್ತಿತ್ವವಿದ್ದರೆ ಅದು ಅವರಿಗೆ ಒಳ್ಳೆಯದಲ್ಲ, ಅಫ್ಗಾನಿಸ್ತಾನದಲ್ಲಿ ಇತರ ದೇಶಗಳ ಮಿಲಿಟರಿ ಉಪಸ್ಥಿತಿಯ ಗತಿಯನ್ನು ಅವರು ನೋಡಿದ್ದಾರೆ. ಭಾರತ ಅಫ್ಗಾನಿಸ್ತಾನದ ಜನರಿಗೆ ಹಾಗೂ ಇಲ್ಲಿನ ಯೋಜನೆಗಳಿಗೆ ಮಾಡಿದ ಸಹಾಯವನ್ನು ಶ್ಲಾಘಿಸಲಾಗಿದೆ" ಎಂದು ತಾಲಿಬಾನ್‍ನ  ವಕ್ತಾರ ಸುಹೈಲ್ ಶಹೀನ್ ಹೇಳಿದ್ದಾರೆ.

ಅಫ್ಗಾನಿಸ್ತಾನದಲ್ಲಿನ ಸಂಘರ್ಷಮಯ ಸ್ಥಿತಿ ಇನ್ನೂ ಗಂಭೀರವಾಗಬಹುದು ಎಂದು ಭೀತಿ ಪಟ್ಟು ಭಾರತ ಸಹಿತ ಹಲವು ದೇಶಗಳು ತಮ್ಮ ರಾಜತಾಂತ್ರಿಕ ಸಿಬ್ಬಂದಿಗಳನ್ನು ವಾಪಸ್ ಕರೆಸಿವೆ. ಆದರೆ ರಾಜತಾಂತ್ರಿಕರನ್ನು ಹಾಗೂ ದೂತಾವಾಸಗಳನ್ನು ಗುರಿಯಾಗಿಸುವುದಿಲ್ಲ ಎಂದು ತಾಲಿಬಾನ್ ಹೇಳಿದೆ.


SHARE THIS

Author:

0 التعليقات: