ನೀರಜ್ ಚೋಪ್ರಾ ಅವರನ್ನು ಅಭಿನಂದಿಸಿದ ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್
ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನ ಪುರುಷರ ಜಾವೆಲಿನ್ ಥ್ರೋನ ಫೈನಲ್ ನಲ್ಲಿ ಐದನೇ ಸ್ಥಾನ ಪಡೆದ ಪಾಕಿಸ್ತಾನದ ಅರ್ಷದ್ ನದೀಮ್, ಚಿನ್ನದ ಪದಕ ಗೆದ್ದ ಭಾರತದ ನೀರಜ್ ಚೋಪ್ರಾ ಅವರನ್ನು ಅಭಿನಂದಿಸಿದರು ಹಾಗೂ ಪದಕದ ಭರವಸೆಯನ್ನು ಈಡೇರಿಸದಿದ್ದಕ್ಕಾಗಿ ತಮ್ಮ ರಾಷ್ಟ್ರದ ಕ್ಷಮೆಯಾಚಿಸಿದರು.
ನದೀಮ್ ಒಲಿಂಪಿಕ್ಸ್ನಲ್ಲಿ ಪಾಕಿಸ್ತಾನದ ಅತಿದೊಡ್ಡ ಪದಕ ಭರವಸೆಯಾಗಿದ್ದರು. ಆದರೆ 84.62 ಅವರ ಅತ್ಯುತ್ತಮ ಥ್ರೋ ಆಗಿದ್ದು, ಅದು ಪದಕ ಗೆಲ್ಲಲು ಸಾಕಾಗಲಿಲ್ಲ. ಚೋಪ್ರಾ 87.58 ಮೀ.ಅತ್ಯುತ್ತಮ ಎಸೆತದೊಂದಿಗೆ ಚಿನ್ನ ಗೆದ್ದಿದ್ದರು. ಬೆಳ್ಳಿ ಮತ್ತು ಕಂಚಿನ ಪದಕಗಳು ಝೆಕ್ ಗಣರಾಜ್ಯದ ಪಾಲಾದರೆ, ನಾಲ್ಕನೇ ಸ್ಥಾನ ಜರ್ಮನಿ ಅತ್ಲೀಟ್ ಪಾಲಾಗಿದೆ.
"ಟೋಕಿಯೊ ಒಲಿಂಪಿಕ್ಸ್ ನ ಜಾವೆಲಿನ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದು ಚಿನ್ನದ ಪದಕ ಜಯಿಸಿರುವ ನೀರಜ್ ಚೋಪ್ರಾ ಗೆ ಅಭಿನಂದನೆಗಳು" ಎಂದು ನದೀಮ್ ಟ್ವೀಟ್ ಮಾಡಿದ್ದಾರೆ.
24 ವರ್ಷದ ನದೀಮ್ ಅವರು 23 ವರ್ಷದ ಚೋಪ್ರಾ ತನ್ನ ರೋಲ್ ಮಾಡೆಲ್ ಎಂದು ಪರಿಗಣಿಸಿದ್ದಾರೆ.
ಸ್ಪರ್ಧೆಗೆ ಮುನ್ನ ನದೀಮ್ ಅವರು 2018 ರ ಏಷ್ಯನ್ ಗೇಮ್ಸ್ನಲ್ಲಿ ಪದಕ ಪಡೆದಿರುವ ಚಿತ್ರವನ್ನು ಟ್ವೀಟಿಸಿದ್ದಾರೆ. ಏಶ್ಯನ್ ಗೇಮ್ಸ್ ನಲ್ಲಿ ಚೋಪ್ರಾ ಅವರು ಚಿನ್ನ ಗೆದ್ದಿದ್ದರು ಹಾಗೂ ನದೀಮ್ ಕಂಚು ಗೆದ್ದಿದ್ದರು.
0 التعليقات: