Sunday, 15 August 2021

ದ.ಕ. ಜಿಲ್ಲಾ ಉಸ್ತುವಾರಿ ಸಚಿವರಿಂದ ಮಹಾತ್ಮಾಗಾಂಧಿಗೆ ಅವಮಾನ: ಹರೀಶ್ ಕುಮಾರ್ ಆರೋಪ


 ದ.ಕ. ಜಿಲ್ಲಾ ಉಸ್ತುವಾರಿ ಸಚಿವರಿಂದ ಮಹಾತ್ಮಾಗಾಂಧಿಗೆ ಅವಮಾನ: ಹರೀಶ್ ಕುಮಾರ್ ಆರೋಪ

ಮಂಗಳೂರು: ದ.ಕ. ಜಿಲ್ಲಾಡಳಿತದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಮಹಾತ್ಮ ಗಾಂಧಿಯ ಹೆಸರನ್ನು ಕೊನೆಯಲ್ಲಿ ಉಲ್ಲೇಖಿಸುವ ಮೂಲಕ ಅವಮಾನಿಸಿದ್ದಾರೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಡಿಸಿಸಿ ಅಧ್ಯಕ್ಷ ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ರವಿವಾರ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಮಹಾತ್ಮ ಗಾಂಧಿ ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಅಪಹಾಸ್ಯ ಮಾಡುವವರು ದೇಶ ಪ್ರೇಮಿಗಳಲ್ಲ, ದೇಶದ್ರೋಹಿಗಳು. ಇಂತಹವರ ವಿರುದ್ಧ ಜಾಗೃತಗೊಂಡು ಪ್ರತಿ ಗ್ರಾಮಗಳಲ್ಲಿ ಎದೆಗಾರಿಕೆ ತೋರಿಸುವ ಅಗತ್ಯವಿದೆ ಎಂದು ಕರೆ ನೀಡಿದರು.

ಈ ಸಂದರ್ಭ ಶಾಸಕ ಯು.ಟಿ ಖಾದರ್, ಮಾಜಿ ಶಾಸಕರಾದ ಐವನ್ ಡಿಸೋಜ, ಶಕುಂತಳಾ ಶೆಟ್ಟಿ, ಪಿ.ವಿ ಮೋಹನ್, ಸದಾಶಿವ್ ಉಳ್ಳಾಲ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್, ಶುಭೋದಯ ಆಳ್ವ, ವಿಶ್ವಾಸ್ ಕುಮಾರ್ ದಾಸ್, ಡಾ. ಶೇಖರ್ ಪೂಜಾರಿ, ಮೋಹನ್ ಗೌಡ, ಬ್ಲಾಕ್ ಅಧ್ಯಕ್ಷರಾದ ಸುರೇಂದ್ರ ಕಂಬಳಿ, ಜೆ. ಅಬ್ದುಲ್ ಸಲೀಂ, ಅಪ್ಪಿ, ನವೀನ್ ಡಿಸೋಜ, ಸಂತೋಷ್ ಕುಮಾರ್ ಶೆಟ್ಟಿ, ನೀರಜ್‌ಪಾಲ್, ಹರಿನಾಥ್, ದೀಪಕ್ ಪೂಜಾರಿ, ಜಯಶೀಲ ಅಡ್ಯಂತಾಯ, ವಿವೇಕ್‌ ರಾಜ್ ಪೂಜಾರಿ, ನವೀನ್ ಭಂಡಾರಿ, ಗಣೇಶ್ ಪೂಜಾರಿ, ಸವಾದ್ ಸುಳ್ಯ, ರಮಾನಂದ ಪೂಜಾರಿ, ಅಶಿತ್ ಜಿ. ಪಿರೇರಾ, ಜೆಸಿಂತಾ ಆಲ್ಫ್ರೆಡಾ, ವೆಂಕಪ್ಪಪೂಜಾರಿ, ಶಬ್ಬೀರ್ ಎಸ್., ನಮೀತಾ ಡಿ. ರಾವ್, ಎನ್.ಪಿ. ಮನುರಾಜ್, ಆಲ್ವಿನ್ ಪ್ರಕಾಶ್, ಸಬಿತಾ ಮಿಸ್ಕಿತ್, ಸಿ.ಎಂ. ಮುಸ್ತಫಾ, ಶೋಭಾ ಪಡೀಲ್, ಸತೀಶ್ ಪೆಂಗಲ್, ಸೇವಾದಳದ ಸಂತೋಷ್ ಭಂಡಾರಿ, ಹಂಝ ಕೂಡುರಸ್ತೆ, ವಿಕ್ಟರ್ ಪಾಯಿಸ್, ಪ್ರತಿಮಾ ನಝ್ರತ್, ನವೀನ್, ರೋಣಿ, ಜೋಸೆಫ್ ರೇಗೋ, ಚಿನ್ನಪ್ಪ, ಸಲೀಂ ಪಾಂಡೇಶ್ವರ, ಗೀತಾ, ಮುಹಮ್ಮದ್ ಬಪ್ಪಳಿಗೆ, ಶಾಂತಳಾ ಗಟ್ಟಿ, ಶಶಿಕಲಾ ಪದ್ಮನಾಭ, ಮಲ್ಲಿಕ ಪಕ್ಕಳ, ವಿದ್ಯಾ, ಚಂದ್ರಕಲಾ, ಪ್ರವೀತಾ, ಟಿ.ಕೆ. ಶೈಲಜಾ, ಗೀತಾ ಅತ್ತಾವರ, ಲಕ್ಷ್ಮಿ ನಾಯರ್ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಕಾಂಗ್ರೆಸ್ ಸೇವಾದಳ ಮುಖ್ಯಸ್ಥ ಜೋಕ್ಕಿಂ ಡಿಸೋಜ ಸ್ವಾಗತಿಸಿದರು. ಶಾಲೆಟ್ ಪಿಂಟೊ ವಂದಿಸಿದರು.


SHARE THIS

Author:

0 التعليقات: