Sunday, 15 August 2021

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹೊಸನಗರದ ಸಾರ್ವಜನಿಕ ಆಸ್ಪತ್ರೆಗೆ ಮುಸ್ಲಿಂ ಬಾಂಧವರಿಂದ ಶುದ್ದ ಕುಡಿಯುವ ನೀರಿನ ಘಟಕ ಅಳವಡಿಕೆ


 ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹೊಸನಗರದ ಸಾರ್ವಜನಿಕ ಆಸ್ಪತ್ರೆಗೆ ಮುಸ್ಲಿಂ ಬಾಂಧವರಿಂದ ಶುದ್ದ ಕುಡಿಯುವ ನೀರಿನ ಘಟಕ ಅಳವಡಿಕೆ

ಹೊಸನಗರ: 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹೊಸನಗರದ ಸಾರ್ವಜನಿಕ ಆಸ್ಪತ್ರೆಗೆ ಮುಸ್ಲಿಂ ಬಾಂಧವರು ಹೊಸನಗರ, ಇವರ ವತಿಯಿಂದ ಶುದ್ದ ಕುಡಿಯುವ ನೀರಿನ ಘಟಕ (RO Plant) ವನ್ನು ನೀಡಲಾಯಿತು. ಘಟಕದ ಉದ್ಘಾಟನೆಯನ್ನು ಹೊಸನಗರದ ವೀರ ಯೋಧ, ರಾಷ್ಟಪತಿಯವರಿಂದ ಪುರಸ್ಕೃತ  ಜಿ. ಸುಬ್ರಹ್ಮಣ್ಯ ನೆರವೇರಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಕ್ಕಳ ತಜ್ಞ ಶಾಂತರಾಜ್ ರವರು ಸ್ವಾತಂತ್ರ್ಯ ಹೋರಾಟದ ಹೆಜ್ಜೆ ಗುರುತುಗಳನ್ನು ಎಳೆ ಎಳೆಯಾಗಿ ವಿವರಿಸಿದರು.

 ತಾII ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಇಲಿಯಾಸ್ ರವರು ಮಾತನಾಡಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೊಸನಗರ,

ಬಿದನೂರು,ಈಸೂರು ಮುಂತಾದ ಗ್ರಾಮಗಳಲ್ಲಿ ನಡೆದ ಹೋರಾಟಗಳನ್ನು ವಿವರಿಸಿ, ಶತಕಗಳ ಕಾಲ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ  ಬಲಿಯಾದ ವೀರರನ್ನು ನಾವು ಇಂದು ಸ್ಮರಿಸಬೇಕಿದೆ ಎಂದರು.

ಇದೇ ಸಂಧರ್ಭದಲ್ಲಿ ಹಿರಿಯ ವೈದ್ಯರಾದ ಡಾII. ಲಿಂಗರಾಜ್ ರವರನ್ನು ಸನ್ಮಾನಿಸಲಾಯಿತು.

ಕಳೂರು ಜುಮ್ಮಾ ಮಸೀದಿಯ ಖತೀಬರಾದ  ಹಾಫಿಝ್ ಅಬ್ದುಲ್ಲಾ, ಬದ್ರಿಯಾ ಶಾಫಿ ಜುಮ್ಮಾ ಮಸೀದಿ ಖತೀಬರಾದ ಮೌಲಾನ ಬದ್ರುದ್ದೀನ್  ಝೊಹ್ರಿ,ಮೊಹಮ್ಮದೀಯ ಮಸೀದಿಯ ಖತೀಬರಾದ ಷಾದಾಬ್ ರಾಹಿ. ಪ್ರಮುಖರಾದ ಬಾಷಾ ಸಾಬ್,ಅಮಾನುಲ್ಲಾ,ಅನ್ವರ್ ಸಿದ್ದೀಕ್,ಅಹಮದ್ ಸಾಬ್,ಸಲೀಂ,ಯಾಸಿರ್,ಅಬ್ದುಲ್ ರಜಾಕ್,ಸೈಯದ್,ಫಾರೂಕ್,ಶಾಬುದ್ದೀನ್, ಇಸ್ಮಾಯಿಲ್,ಮಹಮ್ಮದ್ ಅಲಿ,ಉಬೇದುಲ್ಲ, ಸದ್ದಾಂ,ರಿಹಾಬ್ ಮತ್ತಿತರು ಭಾಗವಹಿಸಿದ್ದರು.SHARE THIS

Author:

0 التعليقات: