Sunday, 15 August 2021

ಸ್ವಾತಂತ್ರ್ಯೋತ್ಸವ ದಿನದಂದು ಪಾಕ್ ಸೈನಿಕರಿಗೆ ಸಿಹಿ ಹಂಚಿದ ಭಾರತೀಯ ಯೋಧರು


ಸ್ವಾತಂತ್ರ್ಯೋತ್ಸವ ದಿನದಂದು ಪಾಕ್ ಸೈನಿಕರಿಗೆ ಸಿಹಿ ಹಂಚಿದ ಭಾರತೀಯ ಯೋಧರು

ಅಟ್ಟಾರಿ: 75ನೇ ಭಾರತ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಗಡಿ ಭದ್ರತಾ ಪಡೆ ಭಾನುವಾರ ಅತ್ತಾರಿ-ವಾಘಾ ಗಡಿಯಲ್ಲಿ ಪಾಕಿಸ್ತಾನದ ರೇಂಜರ್‌ಗಳಿಗೆ ಸಿಹಿ ತಿಂಡಿ ಹಂಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಮ್ಮ ದೇಶದ ಸ್ವಾತಂತ್ರ್ಯ ದಿನದಂದು ಭಾರತೀಯ ಸೇನಾಪಡೆಗಳು ಪಾಕಿಸ್ತಾನದ ಸೈನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದೆ. ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಮತ್ತು ಅಂತರಾಷ್ಟ್ರೀಯ ಗಡಿಯಲ್ಲಿ ಕೂಡ ಸಿಹಿ ಹಂಚಿ ಸಂಭ್ರಮಿಸಲಾಯಿತು.

ಅತ್ತಾರಿ-ವಾಘಾ ಗಡಿಯಲ್ಲಿ ಪಾಕಿಸ್ತಾನದ ರೇಂಜರ್‌ಗಳು ಬಿಎಸ್‌ಎಫ್‌ಗೆ ಸಿಹಿ ಹಂಚಿದ್ದರು. ಇದೀಗ ಭಾನುವಾರದಂದು ಭಾರತದ ಯೋಧರು ಕೂಡ ಪಾಕಿಸ್ತಾನ ಸೈನಿಕರಿಗೆ ಸಿಹಿ ಹಂಚಿದ್ದಾರೆ. ಅಲ್ಲದೆ ಎರಡೂ ಕಡೆಯ ಅಧಿಕಾರಿಗಳು ಪರಸ್ಪರ ಕೈಕುಲುಕಿ ಅಭಿನಂದಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.SHARE THIS

Author:

0 التعليقات: