Thursday, 12 August 2021

ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಸುಫ್ಫಾ ಮೀಟ್: ಮುತಅಲ್ಲಿಂ ಸಂಗಮ


 ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಸುಫ್ಫಾ ಮೀಟ್: ಮುತಅಲ್ಲಿಂ ಸಂಗಮ

ಆಗಸ್ಟ್ 11, ಸುರತ್ಕಲ್ : ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಇದರ ವತಿಯಿಂದ "ಸುಫ್ಫಾ ಮೀಟ್" ಮುತಅಲ್ಲಿಂ ಸಂಗಮವು ಆಗಸ್ಟ್ 11 ಬುಧವಾರ ಅಸರ್ ನಮಾಝ್ ಬಳಿಕ ಮದೀನತುಲ್ ಉಲೂಂ ದರ್ಸ್ ಸಭಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. 

ಪ್ರಸ್ತುತ  ಸಂಗಮವನ್ನು ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ದಅ್‌ವಾ ಕಾರ್ಯದರ್ಶಿ ಆರಿಫ್ ಝುಹ್ರಿ ಮುಕ್ಕ ಉದ್ಘಾಟಿಸಿದರು. 

ಸಂಪನ್ಮೂಲ ವ್ಯಕ್ತಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ದಅ್‌ವಾ ಕನ್ವೀನರ್ ಉಮರುಲ್  ಫಾರೂಖ್  ಸಖಾಫಿ ಕಾಟಿಪಳ್ಳ "ನಾಳೆಯ ಖಾಝಿ " ಎಂಬ ಶೀರ್ಷಿಕೆಯಲ್ಲಿ ಸವಿಸ್ತಾರವಾಗಿ ತರಗತಿ ಮಂಡಿಸಿದರು.  ಇಂದಿನ ಮುತಅಲ್ಲಿಮರೇ ನಾಳೆಯ ಖಾಝಿಗಳಾಗಬೇಕಾದವರು ಹಾಗೂ ಮುತಅಲ್ಲಿಮರ ಬದುಕು, ಕಲಿಯಬೇಕಾದ ರೀತಿ - ನೀತಿಗಳು ಅತ್ಯಂತ ಮಾದರಿ ಯೋಗ್ಯವಾಗಿರಲಿ ಎಂದು ಹಿತವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಪ್ರಧಾನ ಕಾರ್ಯದರ್ಶಿ ತನ್ಸೀರ್ ಕಾಟಿಪಳ್ಳ,ಮದೀನತುನ್ನೂರ್ ದರ್ಸ್ ಮುದರ್ರಿಸ್ ನೌರಿನ್ ಸಖಾಫಿ, ಸುರತ್ಕಲ್ ಡಿವಿಷನ್ ರೀಡ್ ಪ್ಲಸ್ ಕನ್ವೀನರ್ ಅಲಿ ಸಅದಿ ಕಾಟಿಪಳ್ಳ ಭಾಗವಹಿಸಿದ್ದರು. 

ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ದಅ್‌ವಾ ಕನ್ವೀನರ್ ರವೂಫ್ ಸಖಾಫಿ ಹಳೆಯಂಗಡಿ ಸ್ವಾಗತಿಸಿ. ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಕ್ಯೂ.ಡಿ ಕನ್ವೀನರ್ ರಶೀದ್ ಸಅದಿ ಅಂಗರಗುಂಡಿ ವಂದಿಸಿದರು.




SHARE THIS

Author:

0 التعليقات: