ಖಾತೆ ಹಂಚಿಕೆ ಅಸಮಾಧಾನ: ಮುಖ್ಯಮಂತ್ರಿಯನ್ನು ಭೇಟಿಯಾದ ಎಂ.ಟಿ.ಬಿ.ನಾಗರಾಜ್
ಬೆಂಗಳೂರು: ತನ್ನ ಬೇಡಿಕೆಯ ಖಾತೆ ಲಭಿಸದ ಕಾರಣಕ್ಕೆ ಅಸಮಾಧಾನಗೊಂಡಿರುವ ನೂತನ ಸಚಿವ ಎಂ.ಟಿ.ಬಿ.ನಾಗರಾಜ್ ಇಂದು ಮಧ್ಯಾಹ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಶನಿವಾರ ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿದ್ದು, ಪೌರಾಡಳಿತ ಖಾತೆ ಲಭಿಸಿರುವ ಎಂ.ಟಿ.ಬಿ.ನಾಗರಾಜ್ ತನ್ನ ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ಅವರಿಂದು ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ಭೇಟಿಯಾದ ಎಂ.ಟಿ.ಬಿ., ತನಗೆ ವಸತಿ ಖಾತೆ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ಇದೇರೀತಿ ಪರಿಸರ, ಜೀವ ಶಾಸ್ತ್ರ ಮತ್ತು ಪ್ರವಾಸೋದ್ಯಮ ಖಾತೆ ಪಡೆದಿರುವ ಸಚಿವ ಆನಂದ್ ಸಿಂಗ್ ಕೂಡಾ ಅಸಮಾಧಾನಗೊಂಡಿದ್ದರು. ಇಂಧನ ಖಾತೆಯ ಬೇಡಿಕೆಯಿಟ್ಟಿರುವ ಆನಂದ್ ಸಿಂಗ್, ಬೇಡಿಕೆ ಈಡೇರದಿದ್ದರೆ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದರು. ಇಂದು ಅವರು ಆರ್.ಟಿ. ನಗರದಲ್ಲಿರುವ ಮುಖ್ಯಮಂತ್ರಿ ನಿವಾಸಕ್ಕೆ ಕುಟುಂಬ ಸಮೇತ ಆಗಮಿಸಿ ಖಾತೆ ಹಂಚಿಕೆ ವಿಚಾರವಾಗಿ ಚರ್ಚಿಸಿದ್ದಾರೆ.
0 التعليقات: