Wednesday, 11 August 2021

ಹಿಮಾಚಲದಲ್ಲಿ ಭೂಕುಸಿತ: ಅವಶೇಷಗಳ ಅಡಿಯಲ್ಲಿ ಹಲವು ಜನರು, ವಾಹನಗಳು ಸಿಲುಕಿರುವ ಶಂಕೆ,ಓರ್ವ ಮೃತ್ಯು

ಹಿಮಾಚಲದಲ್ಲಿ ಭೂಕುಸಿತ: ಅವಶೇಷಗಳ ಅಡಿಯಲ್ಲಿ ಹಲವು ಜನರು, ವಾಹನಗಳು ಸಿಲುಕಿರುವ ಶಂಕೆ,ಓರ್ವ ಮೃತ್ಯು

ಶಿಮ್ಲಾ: ಹಿಮಾಚಲ ಪ್ರದೇಶದ ಕಿನ್ನೌರ್ ನಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ  ಭಾರೀ ಭೂಕುಸಿತದಲ್ಲಿ ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆ (ಎಚ್‌ಆರ್‌ಟಿಸಿ) ಬಸ್  ಸೇರಿದಂತೆ ಐದು ವಾಹನಗಳು  ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದು,  ಕನಿಷ್ಠ 35 ಜನರು ಸಿಕ್ಕಿಬಿದ್ದಿರುವ ಭೀತಿ ಎದುರಾಗಿದೆ. ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆಂದು ವರದಿಯಾಗಿದೆ

ಕಿನ್ನೌರ್ ನ ರೆಕಾಂಗ್ ಪಿಯೋ-ಶಿಮ್ಲಾ ಹೆದ್ದಾರಿಯಲ್ಲಿ ಮಧ್ಯಾಹ್ನ 12.45 ರ ಸುಮಾರಿಗೆ ಭೂಕುಸಿತ ಸಂಭವಿಸಿದೆ. ಒಂದು ಟ್ರಕ್, ಸರಕಾರಿ ಬಸ್ ಹಾಗೂ  ಇತರ ವಾಹನಗಳು ಅವಶೇಷಗಳಲ್ಲಿ ಹೂತುಹೋಗಿವೆ ಎಂದು ನಂಬಲಾಗಿದೆ.

ಶಿಮ್ಲಾಕ್ಕೆ ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ 40 ಜನರಿದ್ದರು ಎಂದು ವರದಿಗಳು ತಿಳಿಸಿವೆ.

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ತಂಡಗಳನ್ನು ರಕ್ಷಣಾ ಕಾರ್ಯಾಚರಣೆಗಾಗಿ ಪ್ರದೇಶಕ್ಕೆ ಕಳುಹಿಸಲಾಗಿದೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯನ್ನೂ (ಎನ್ ಡಿ ಆರ್ ಎಫ್) ಕರೆಸಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಜೈರಾಮ್ ಠಾಕೂರ್ ಹೇಳಿದ್ದಾರೆ.


SHARE THIS

Author:

0 التعليقات: