Sunday, 8 August 2021

ಕೋವಿಡ್‌ ನಿಯಮ ಉಲ್ಲಂಘನೆ: ನಟ ಮಮ್ಮುಟ್ಟಿ ಸಹಿತ ಹಲವರ ವಿರುದ್ಧ ಪ್ರಕರಣ ದಾಖಲು


 ಕೋವಿಡ್‌ ನಿಯಮ ಉಲ್ಲಂಘನೆ: ನಟ ಮಮ್ಮುಟ್ಟಿ ಸಹಿತ ಹಲವರ ವಿರುದ್ಧ ಪ್ರಕರಣ ದಾಖಲು

ಕ್ಯಾಲಿಕಟ್‌: ಇಲ್ಲಿನ ಸಮೀಪದ  ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸೌಲಭ್ಯದ ಉದ್ಘಾಟನೆಯ ಸಂದರ್ಭದಲ್ಲಿ ಕೋವಿಡ್ -19 ಆರೋಗ್ಯ ನಿಯಮಗಳನ್ನು ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಸಿನಿಮಾ ನಟರಾದ ಮಮ್ಮುಟ್ಟಿ, ರಮೇಶ್ ಪಿಶಾರಡಿ ಮತ್ತು 300 ಇತರರ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಜಾಯಿಂಟ್ ಬದಲಿ ಶಸ್ತ್ರಚಿಕಿತ್ಸೆಗೆ ರೋಬೋಟ್ ನೆರವಿನ ನೂತನ ಆಧುನಿಕ ಸೇವೆಯ ಉದ್ಘಾಟನೆಗಾಗಿ ನಟ ಖಾಸಗಿ ಆಸ್ಪತ್ರೆಗೆ ಾಗಮಿಸಿದ್ದರು ಮತ್ತು ಸಮಾರಂಭದಲ್ಲಿ ಸುಮಾರು 300 ಜನರು ಸೇರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಕ್ರಮವು ಆಗಸ್ಟ್ 3 ರಂದು ನಡೆದಿತ್ತು.

"ನಟ ಮಮ್ಮುಟ್ಟಿ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಸುಮಾರು 300 ಜನರು ಭಾಗವಹಿಸಿದ್ದರು. ನಾವು ಆಸ್ಪತ್ರೆಯ ಎಂಡಿ, ಸಿಇಒ ಮತ್ತು ಇತರರ ವಿರುದ್ಧ ಕೇರಳ ಸಾಂಕ್ರಾಮಿಕ ರೋಗಗಳ ಕಾಯಿದೆಯ ವಿವಿಧ ಪ್ರಕರಣಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ" ಎಂದು ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ.


SHARE THIS

Author:

0 التعليقات: