Monday, 16 August 2021

ಮುಹಿಮ್ಮಾತ್ ಇಶಾಅತುಸ್ಸುನ್ನ ಉತ್ತರ ಕರ್ನಾಟಕದತ್ತ...


 ಮುಹಿಮ್ಮಾತ್ ಇಶಾಅತುಸ್ಸುನ್ನ ಉತ್ತರ ಕರ್ನಾಟಕದತ್ತ...

        ಕಂಡರೆ ಮುಸ್ಲಿಮರು ಯಾರು ಮುಸ್ಲಿಮೇತರರು ಯಾರು ಎಂದು ತಿಳಿಯದ ಒಂದು ಅತಿ ಶೋಚನೀಯ ಅವಸ್ಥೆ.ವಯಸ್ಸು 85 ಮೀರಿದರೂ ಅಲ್ಲಾಹನನ್ನು ಗೊತ್ತಿಲ್ಲ,ಪ್ರವಾದಿಗಳ ಬಗ್ಗೆ ಕೇಳಲಿಲ್ಲ,ನಮಾಜ್ ಉಪವಾಸದ ಬಗ್ಗೆ ತಿಳಿದೇ ಇಲ್ಲ  ಅಂತಹ ಜನ  ಹೆಸರಿಗೆ ಮಾತ್ರ ಮುಸ್ಲಿಂ! ಯಾರಾದರೂ ಒಬ್ಬರು ಮರಣಹೊಂದಿದರೆ ಮರಣಾ ನಂತರದ ಕರ್ಮವನ್ನು ಮಾಡಲಿಕ್ಕೆ ಅವರಿಗೆ ಗೊತ್ತೇ ಇಲ್ಲ. ಕರ್ಮಗಳನ್ನು ಮಾಡಲು ಎಲ್ಲಿಂದಲೋ ಒಬ್ಬ ಹಝ್ರತ್ ನನ್ನು  ಕರೆ ತರಬೇಕು. ಮಯ್ಯಿತ್ ಗೆ ಓದಲು ಹಳ್ಳೀ ಜನರಿಗೆ ಇನ್ನೂ  ತಿಳಿದಿಲ್ಲ. ಮಸೀದಿ ಮದ್ರಸಗಳ ಕೊರತೆಯಿಂದಾಗಿ ಜನರು ಅವೈಜ್ಞಾನಿಕವಾಗಿ ಬೆಳೆಯುತ್ತಿದ್ದಾರೆ. ಇಸ್ಲಾಮಿನ ಬಾಲ ಪಾಠವು ಅವರು ಅರಿತಿಲ್ಲ. ನಮಾಜ್,ಉಝೂ, ಫಾತಿಹ ಕಲಿಸಿದರೆ ಅವರ ಬಾಯಿಂದ ಬರುವ ಮಾತು "ಹಝ್ರತ್ ಇದು ನಮ್ಮ ಮೊದಲ ನಮಾಜ್, ಮೊದಲ ಉಝೂ,ಮೊದಲ ಫಾತಿಹ " ಅಂತ ಹೇಳಿ ಸಂತೋಷದಿಂದ ಕಣ್ಣೀರಿಡುತ್ತಾರೆ. ಅವರ ಮನೆಗಳಿಗೆ ಭೇಟಿ ಕೊಟ್ಟರೆ ಇದು ಮುಸ್ಲಿಮರ ಮನೆಯೋ? ಅಲ್ಲ ಮುಸ್ಲಿಮೇತರರ ಮನೆಯೋ? ಎಂದು ನಮಗೆ ಸಂಶಯದ ಕಣ್ಣು ಮೂಡಿಬರುತ್ತಿತ್ತು. ಕಾರಣ ಅವರ ಮನೆಯಲ್ಲಿರುವುದು ದೇವತೆಗಳ ಚಿತ್ರವಿರುವ ಫೋಟೋಗಳು, ಮೂರ್ತಿಗಳು. 

          ನೀವು ಬೆಳಿಗ್ಗೆ ಎದ್ದಾಕ್ಷಣ ಏನು ಮಾಡುವಿರಿ? ಎಂದು ಕೇಳಿದರೆ ಅವರು ನೀಡುವ ಉತ್ತರ" ಹಝ್ರತ್ ಮೊದಲು ನಾವು ಈ ಆ ಕಾಣುವ ದೇವತೆಗಳಿಗೆ ಪೂಜೆ ಮಾಡುತ್ತೇವೆ ನಂತರ ಎಲ್ಲಾ" ಎಂದು ಹೇಳಿ ಅತ್ತ ದೇವತೆ ರೂಮನ್ನು ತೋರಿಸುತ್ತಾರೆ. ಇದು ಹೇಳುವುದು ಒಂದು ಮುಸ್ಲಿಂ ಕುಟುಂಬದವರು ಅಲ್ಲಾಹ್!!!. ಮೊಹರ್ರಂ ತಿಂಗಳೇ ಇವರ ಹಬ್ಬದ ತಿಂಗಳು. ಆದರೆ ಹಬ್ಬ ಗಳೆಲ್ಲವೂ ಬರೀ ಅನಾಚಾರದಿಂದ ತುಂಬಿರುತ್ತೆ.  ಬೆಂಕಿ ಹಾಕಿ ಅದರಲ್ಲಿ ನಡೆದಾಡುವುದು,ಬ್ಯಾಂಡ್ ಬಾರಿಸಿ ಕುಣಿದಾಡುವುದು, ಮೂರ್ತಿ ಪೂಜೆ ಮಾಡುವುದು ಇನ್ನಿತರ..... ನಾವು ಅತ್ತ ಕಡೆಗೆ ಹೋದರೆ ಮಾತ್ರ ಅವರಿಗೆ ನಮಾಜ್,ರೋಜಾ ,ಸರಿಯಾದ ಹಬ್ಬ ಆಚರಣೆ ಎಲ್ಲಾ....ನಾನು ಈ ಹೇಳುವುದು ಕಟ್ಟು ಕಥೆಗಳನ್ನಲ್ಲ. ಇದು ಉತ್ತರ ಕರ್ನಾಟಕದಲ್ಲಿ ಕಂಡುಬರುವ ನೈಜ ಸ್ಥಿತಿ ಗತಿಗಳು. ಇದನ್ನು ಬಗೆಹರಿಸುವುದು, ಸರಿಪಡಿಸುವೂದು ನಮ್ಮ ಕರ್ತವ್ಯವೂ ಬಾದ್ಯತೆಯೂ ಕೂಡ.

      ಹಳ್ಳಿಯ ಮುಗ್ಧ ಜನ ಅವರಿಗೂ ಅವರ ಕಂದಮ್ಮಗಳಿಗೂ ಭವಿಷ್ಯದಲ್ಲಿ ಭಾರತದ  ಮಿನುಗು ತಾರೆಗಳಾಗಿ ಮಿನುಗಬೇಕೆಂಬ ಕನಸುಗಳನ್ನು ಅವರವರ ಮನಸ್ಸಲ್ಲಿ ಕಟ್ಟಿ ಬೆಳೆಸಿದ್ದಾರೆ. ನಾವು ಅವರನ್ನು ಭೇಟಿಯಾಗಿ " ನೀವು ಏನಾಗಬೇಕೆಂದು ಗುರಿ ಇಟ್ಟಿದ್ದೀರಿ?" ಆಗ" ಒಬ್ಬಳು ಹಝ್ರತ್ ನನಗೆ ಪೊಲೀಸ್ ಆಗಬೇಕು.ಮತ್ತೊಬ್ಬಳು ನನಗೆ ಜಿಲ್ಲಾಧಿಕಾರಿ ಆಗಬೇಕು ,ಇನ್ನಿಬ್ಬರು ಇಂಜಿನಿಯರ್, ಟೀಚರ್.... ಹೀಗೆ ಹಲವು ವಿದ್ಯಾರ್ಥಿಗಳಿಗೆ ಹಲವು ಗುರಿ ಅಲ್ಲದೆ ಅದರ ಕುರಿತಿರುವ ಮಾಹಿತಿಗಳು ಕೂಡ  ಅವರಲ್ಲಿತ್ತು. ನಮ್ಮನ್ನು, ನಮ್ಮ ಕಾರ್ಯಾಚರಣೆಗಳನ್ನು ಕಂಡ ಗಂಡು ಮಕ್ಕಳು ಹೇಳಿದ್ದು" ನನಗೆ ನಿಮ್ಮಂತೆ ಹಝ್ರತ್ ಆಗಿ ನಮ್ಮೂರನ್ನು ಒಂದು ದೀನೀ ಊರಾಗಿ ಮಾರ್ಪಾಡು ಮಾಡಬೇಕು ಎಂದಾಗಿತ್ತು.           

          ಒಂದು ಊರನ್ನು ದೀನೀ ವಿಚಾರದಲ್ಲಿ  ಬೆಳಗಿಸುವೂದು, ಆ ಊರನ್ನು ಒಂದುತ್ತಮ ಊರಾಗಿಸುವೂದು ನಮ್ಮೂರಿನಂತೆ ಒಬ್ಬರು ಖತೀಬರು .ಆದರೆ ಅಂತಹ ದಾರಿ ತೋರುವವರನ್ನೇ ಕೆಳವೆಡೆ ಕಾಣುತ್ತಿಲ್ಲ. ಉತ್ತರದ ಹಲವೆಡೆ ಹಳ್ಳಿ ಗಲ್ಲಿಗಳಲ್ಲಿ ಹಲವು ನಾಯಕರು,ಉಸ್ತಾದರು ಬೆವರಿಳಿಸಿ ನಿರಂತರ ಕಾರ್ಯಾಚರಣೆ ಮಾಡುತ್ತಿದ್ದಾರೆ. ಆದರೆ ಇನ್ನೂ ಕೂಡ ದೀನೀ ಬೆಳಕು ತಲುಪದ ಹಳ್ಳಿಗಳಿವೆ . ಇದನ್ನೆಲ್ಲ ಮನಗೊಂಡ ಮುಹಿಮ್ಮಾತ್ ಇಶಾಅತುಸ್ಸುನ್ನ ವಿದ್ಯಾರ್ಥಿ ಸಂಘವೂ ಉತ್ತರದ ಹಲವು ಹಳ್ಳಿಗಳಿಗೆ ಬೇಟಿ ಕೊಟ್ಟು ನಮ್ಮಿಂದಾಗುವ ಸೇವೆಯನ್ನು ನಾವು ಮಾಡಿದೆವು ..ಅಲ್ ಅಮ್ದುಲಿಲ್ಲಾಹ್..

  ಅಮೀನ್ ಕೊಳಕೆ
 ( ಮುಹಿಮ್ಮಾತ್ ಇಶಾಅತುಸ್ಸುನ್ನ ದಅವಾ ಕಾರ್ಯದರ್ಶಿ )

SHARE THIS

Author:

1 comment: