Friday, 6 August 2021

ಧೋನಿ ಖಾತೆಯಿಂದ ಬ್ಲೂ ಟಿಕ್ ತೆಗೆದ ಟ್ವಿಟರ್

 

ಧೋನಿ ಖಾತೆಯಿಂದ ಬ್ಲೂ ಟಿಕ್ ತೆಗೆದ ಟ್ವಿಟರ್

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಖಾತೆಯ ವೆರಿಫೈಯ್ಡ್ ಬ್ಯಾಡ್ಜ್ ಅಥವಾ ಬ್ಲೂ ಟಿಕ್ ಅನ್ನು ಟ್ವಿಟರ್ ಸಂಸ್ಥೆ ತೆಗೆದುಹಾಕಿದೆ.

ಈ ವರ್ಷ ಜನವರಿ 8 ರಂದು ಧೋನಿ ಕೊನೆಯ ಬಾರಿ ಟ್ವೀಟ್ ಮಾಡಿದ್ದಾರೆ. ಹೀಗಾಗಿ ಟ್ವಿಟರ್ ಕಂಪನಿಯು ಬ್ಲೂ ಟಿಕ್ ತೆಗೆದುಹಾಕಿದೆ ಎನ್ನಲಾಗಿದೆ.

ಜೂನ್ ನಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಆರೆಸ್ಟೆಸ್ ನ ಮೋಹನ್ ಭಾಗವತ್ ಅವರ ಖಾತೆಗಳಿಂದ ಬ್ಲೂ ಟಿಕ್ ತೆಗೆದುಹಾಕಲಾಗಿತ್ತು.

ಟ್ವಿಟರ್ ನಿಯಮಗಳ ಪ್ರಕಾರ, 6 ತಿಂಗಳ ಕಾಲ ಯಾವುದೇ ಖಾತೆ ನಿಷ್ಕ್ರೀಯವಾಗಿದ್ದರೆ ಆ ಖಾತೆಯಿಂದ ‘ನೀಲಿ ಟಿಕ್ ಅನ್ನು ತೆಗೆದುಹಾಕಲಾಗುತ್ತದೆ.


SHARE THIS

Author:

0 التعليقات: