Sunday, 8 August 2021

ಡಾ. ಕಫೀಲ್‌ ಖಾನ್‌ ವಿರುದ್ಧದ ಮರು ವಿಚಾರಣೆಯನ್ನು‌ ಕೈಬಿಟ್ಟ ಉತ್ತರಪ್ರದೇಶ ಸರಕಾರ


 ಡಾ. ಕಫೀಲ್‌ ಖಾನ್‌ ವಿರುದ್ಧದ ಮರು ವಿಚಾರಣೆಯನ್ನು‌ ಕೈಬಿಟ್ಟ ಉತ್ತರಪ್ರದೇಶ ಸರಕಾರ

ಲಕ್ನೋ: ಕಳೆದ ವರ್ಷ ಅಮಾನತುಗೊಂಡಿದ್ದ ಮಕ್ಕಳ ವೈದ್ಯ ಡಾ. ಕಫೀಲ್‌ ಖಾನ್‌ ವಿರುದ್ಧದ ಮರು ವಿಚಾರಣೆಯನ್ನು ರಾಜ್ಯ ಸರಕಾರ ಕೈಬಿಟ್ಟಿದೆ ಎಂದು ಅಲಹಾಬಾದ್‌ ಹೈಕೋರ್ಟ್‌ ಗೆ ಮಾಹಿತಿ ನೀಡಿದೆ. ಅವರ ಅಮಾನತಿನ ಕುರಿತಾದಂತೆ ಮೂರು ತಿಂಗಳೊಳಗಡೆ ಸರಕಾರ ನಿರ್ಧರಿಸಲಿದೆ ಎಂದು ತಿಳಿದು ಬಂದಿದೆ.

ಈ ಕುರಿತು‌ ಹೈಕೋರ್ಟ್‌ ಗೆ ಮಾಹಿತಿ ನೀಡಿದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಮನೀಶ್‌ ಗೋಯೆಲ್, "24 ಫೆಬ್ರವರಿ 2020ರ ಆದೇಶವನ್ನು ಈ ಅರ್ಜಿಯಲ್ಲಿ ಹಿಂಪಡೆಯಲಾಗಿದೆ.  ಪ್ರತಿವಾದಿಗಳು (ರಾಜ್ಯ) ಈ ಪ್ರಕರಣದಲ್ಲಿ ಹೊಸದಾಗಿ ಮುಂದುವರಿಯುವ ಸ್ವಾತಂತ್ರ್ಯವನ್ನು ಕಾಯ್ದಿರಿಸಲಾಗಿದೆ" ಎಂದು ಹೇಳಿದ್ದಾರೆ.

ಗೋರಖ್‌ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಹಲವಾರು ಮಕ್ಕಳ ಸಾವಿಗೆ ಸಂಬಂಧಿಸಿದಂತೆ ಆಗಸ್ಟ್ 22, 2017 ರಂದು ತನ್ನ ಅಮಾನತನ್ನು ಪ್ರಶ್ನಿಸಿ ಕಫೀಲ್‌ ಖಾನ್‌ ಅರ್ಜಿ ಸಲ್ಲಿಸಿದ್ದರು. ಕಳೆದ ವರ್ಷದ ಫೆಬ್ರವರಿಯಲ್ಲಿ ಶಿಸ್ತು ಪ್ರಾಧಿಕಾರವು ಖಾನ್‌ ವಿರುದ್ಧ ಮತ್ತೊಂದು ತನಿಖೆಗೆ ಆದೇಶಿಸಿತ್ತು ಮತ್ತು ಕಫೀಲ್‌ ಖಾನ್‌ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ಈ ಪ್ರಕರಣವನ್ನು ಜುಲೈ 29ರಂದು ಆಲಿಸಿದ್ದ ಹೈಕೋರ್ಟ್‌ ಸರಕಾರದಿಂದ ಪ್ರತಿಕ್ರಿಯೆ ಕೇಳಿತ್ತು. ಡಾ. ಕಫೀಲ್‌ ಖಾನ್‌ ವಿರುದ್ಧದ ಎಲ್ಲ ಶಿಸ್ತುಕ್ರಮ ಪ್ರಯತ್ನಗಳನ್ನು ಮೂರು ತಿಂಗಳ ಅವಧಿಯಲ್ಲಿ ಮುಕ್ತಾಯಗೊಳಿಸಬೇಕು ಎಂದು ಹೇಳಿತ್ತು. ಆಕ್ಸಿಜನ್‌ ದುರಂತದ ಬಳಿಕ ಖಾನ್‌ ರನ್ನು ಆಗಸ್ಟ್‌ 2017ರಲ್ಲಿ ಅಮಾನತುಗೊಳಿಸಲಾಗಿತ್ತು ಮತ್ತು ನಂತರ ಅವರು ಎಲ್ಲಾ ಪ್ರಕರಣಗಳಿಂದ ಮುಕ್ತರಾಗಿದ್ದರು. 

"22 ಆಗಸ್ಟ್ 2017 ರಂದು ನೀಡಲಾದ ಆದೇಶದ ಅನುಸಾರವಾಗಿ ಅರ್ಜಿದಾರರ ಅಮಾನತು ಮುಂದುವರಿಸುವಿಕೆಯ ಸಮರ್ಥನೆಯನ್ನು ನಾವು ಈಗ ಪರಿಗಣಿಸಬೇಕಾಗಿದೆ" ಎಂದು ನ್ಯಾಯಾಧೀಶರಾದ ಯಶವಂತ್‌ ಶರ್ಮಾ ಹೇಳಿದ್ದಾರೆ.


SHARE THIS

Author:

0 التعليقات: