Thursday, 5 August 2021

ರಾಜಕೀಯ ವಿರೋಧಿಗಳು ನೀಡಿದ್ದ ದೂರು ಪರಿಗಣಿಸಿ ಈ.ಡಿ. ದಾಳಿ: ಶಾಸಕ ಝಮೀರ್ ಅಹ್ಮದ್


 ರಾಜಕೀಯ ವಿರೋಧಿಗಳು ನೀಡಿದ್ದ ದೂರು ಪರಿಗಣಿಸಿ ಈ.ಡಿ. ದಾಳಿ: ಶಾಸಕ ಝಮೀರ್ ಅಹ್ಮದ್

ಬೆಂಗಳೂರು: ನನ್ನ ರಾಜಕೀಯ ವಿರೋಧಿಗಳು ನೀಡಿದ್ದ ದೂರು ಪರಿಗಣಿಸಿ ಈ.ಡಿ. ದಾಳಿ ನಡೆದಿದೆ ಎಂದು ಶಾಸಕ, ಮಾಜಿ ಸಚಿವ ಝಮೀರ್ ಅಹ್ಮದ್ ತಿಳಿಸಿದ್ದಾರೆ.

ನಾನು ಯಾವುದೇ ಕಾನೂನುಬಾಹಿರ ಕೆಲಸ ಮಾಡಿಲ್ಲ. ಕಷ್ಟಪಟ್ಟು ದುಡಿದ ಹಣದಲ್ಲಿ ಮನೆ ನಿರ್ಮಿಸಿದ್ದೇನೆ.‌ ಈ.ಡಿ. ಅಧಿಕಾರಿಗಳು ಕೇಳಿದ ಎಲ್ಲ ಮಾಹಿತಿ ನೀಡಿದ್ದೇನೆ. ಐಎಂಎ ಹಗರಣಕ್ಕೆ ಸಂಬಂಧಿಸಿದ ಯಾವ ಮಾಹಿತಿಯನ್ನು ನನ್ನ ಬಳಿ ಅಧಿಕಾರಿಗಳು ಕೇಳಿಲ್ಲ.‌ ಅಗತ್ಯಬಿದ್ದರೆ ವಿಚಾರಣೆಗೆ ಬರುವಂತೆ ಸೂಚಿಸಿದ್ದು ನಾನು ಎಲ್ಲ ಸಹಕಾರ ನೀಡುತ್ತೇನೆ. ದಾಳಿಯಿಂದ ನನಗೆ ನೆಮ್ಮದಿಯಾಗಿದೆ ಎಂದರು.

ನನಗೆ ಈ.ಡಿ. ಅಧಿಕಾರಿಗಳು ಯಾವುದೇ ನೋಟಿಸ್ ನೀಡಿಲ್ಲ. ಮನೆ ನಿರ್ಮಾಣ ಸಂಪೂರ್ಣ ಪಾರದರ್ಶಕವಾಗಿದೆ. ಈ ಸಂಬಂಧ ಬ್ಯಾಂಕಿನಿಂದ ಹಣಕಾಸು ವಹಿವಾಟಿನ ಮಾಹಿತಿಯನ್ನು ಈ.ಡಿ. ಅಧಿಕಾರಿಗಳು ಪಡೆದಿದ್ದಾರೆ. ನಮ್ಮ ಮನೆಯನ್ನು ಸಂಪೂರ್ಣ ಪರಿಶೀಲನೆ ನಡೆಸಿದ್ದು ಅವರಿಗೆ ಏನೂ ಸಿಕ್ಕಿಲ್ಲ.‌ ನಾನು ಸಂಪೂರ್ಣ ಪಾರದರ್ಶಕವಾಗಿದ್ದೇನೆ.


SHARE THIS

Author:

0 التعليقات: