Wednesday, 4 August 2021

ಮುಂದಿನ ಬಾರಿ ಸಚಿವನಾಗುತ್ತೇನೆ: ಶಾಸಕ ರಾಜುಗೌಡ


 ಮುಂದಿನ ಬಾರಿ ಸಚಿವನಾಗುತ್ತೇನೆ: ಶಾಸಕ ರಾಜುಗೌಡ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಸ್ಥಾನಕ್ಕೆ ಮುಂದಿನ ಬಾರಿ ಅವಕಾಶ ನೀಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಶಾಸಕ ರಾಜು ಗೌಡ ನುಡಿದರು.

ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆ ನಗರದಲ್ಲಿ ರಾಜು ಗೌಡ ಬೆಂಬಲಿಗರು ಪ್ರತಿಭಟನೆ ನಡೆಸಿದ್ದು, ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಅವರು, "ಹಲವು ಬಾರಿ ಸಚಿವರ ಪಟ್ಟಿಯಲ್ಲಿ ನನ್ನ ಹೆಸರು ಇರುತ್ತೆ, ಆದರೆ, ರಾಜಭವನಕ್ಕೆ ಹೋಗುವಾಗ ಹೆಸರು ಇರಲ್ಲ. ಇದು ಮೊದಲನೆ ಸಲವೇನೂ ಅಲ್ಲ, ನನಗೆ ಇವೆಲ್ಲಾ ಅಭ್ಯಾಸವೂ ಆಗಿದೆ" ಎಂದರು.

"ನನ್ನ ತಾಯಿ ಎರಡು ವರ್ಷದಿಂದ ಹಾಸಿಗೆ ಹಿಡಿದಿದ್ದಾರೆ. ಕಳೆದ ಬಾರಿಯೇ ಸಚಿವನಾಗುವ ಭರವಸೆ ಇತ್ತು. ಅಲ್ಲದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನನಗಾಗಿ ಕಣ್ಣೀರು ಇಟ್ಟರು. ನನಗೆ ಲಾಬಿ ಮಾಡುವ ಅವಶ್ಯಕತೆ ಇಲ್ಲ" ಎಂದು ತಿಳಿಸಿದು.


SHARE THIS

Author:

0 التعليقات: