Saturday, 7 August 2021

ಬ್ಲೂಟೂತ್ ಹೆಡ್‌ಫೋನ್ ಸ್ಫೋಟ: ಬಾಲಕ ಮೃತ್ಯು


 ಬ್ಲೂಟೂತ್ ಹೆಡ್‌ಫೋನ್ ಸ್ಫೋಟ: ಬಾಲಕ ಮೃತ್ಯು

ಜೈಪುರ: ಬ್ಲೂಟೂತ್ ಹೆಡ್‌ಫೋನ್ ಸಾಧನ ಸ್ಫೋಟಗೊಂಡು 15 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಜೈಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ವೈದ್ಯರ ಪ್ರಕಾರ, ಬಾಲಕನು ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾನೆ.

ಜೈಪುರದ ಚೋಮು ಪ್ರದೇಶದ ಉದೈಪುರಿಯಾ ಹಳ್ಳಿಯ ನಿವಾಸಿ ರಾಕೇಶ್ ನಗರ್ ಎಂಬಾತ ತನ್ನ ಬ್ಲೂಟೂತ್ ಇಯರ್‌ಫೋನ್‌ಗಳನ್ನು ಬಳಸಿ ಯಾರೊಂದಿಗೊ ಫೋನಿನಲ್ಲಿ ಮಾತನಾಡುತ್ತಿದ್ದಾಗ ಸಾಧನವು ಹಠಾತ್ತನೆ ಸ್ಫೋಟಗೊಂಡಿತು.

ರಾಕೇಶ್ ನನ್ನು ತಕ್ಷಣವೇ ಸಿದ್ಧಿವಿನಾಯಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಆತ ಚಿಕಿತ್ಸೆಯ ವೇಳೆ ಮೃತಪಟ್ಟಿದ್ದಾನೆ ಎಂದು  Times Now ವರದಿ ಮಾಡಿದೆ.

 "ಬಹುಶಃ ಇದು ದೇಶದಲ್ಲಿ ಇದೇ ಮೊದಲ ಪ್ರಕರಣ ... ಹೃದಯ ಸ್ತಂಭನದಿಂದಾಗಿ ಯುವಕ ಸಾವನ್ನಪ್ಪಿರಬಹುದು. ಸ್ಫೋಟದಿಂದಾಗಿ ಯುವಕನ ಎರಡೂ ಕಿವಿಗಳಿಗೆ ಗಾಯಗಳಾಗಿವೆ’’ ಎಂದು ಡಾ ಎಲ್. ಎನ್. ರುಂಡ್ಲಾ ಹೇಳಿದರು.


SHARE THIS

Author:

0 التعليقات: