Monday, 2 August 2021

ಎಸ್ಸೆಸ್ಸೆಫ್ ಕಬಕ ಶಾಖೆ: ರೈಂಬೋ ಟೀಮ್ ರಚನೆ


 ಎಸ್ಸೆಸ್ಸೆಫ್ ಕಬಕ ಶಾಖೆ: ರೈಂಬೋ ಟೀಮ್ ರಚನೆ 

ಪುತ್ತೂರು: ಎಸ್.ಎಸ್.ಎಫ್ ಕಬಕ ಶಾಖೆಯ ರೈಂಬೋ ವಿದ್ಯಾರ್ಥಿಗಳ ಟೀಂ ರಚನೆ ಕಾರ್ಯಕ್ರಮವು ಸುನ್ನಿ ಸೆಂಟರ್ ಕಬಕದಲ್ಲಿ ಆದಿತ್ಯವಾರ ಸಂಜೆ ಯಶಸ್ವಿಯಾಗಿ ನಡೆಯಿತು. ಎಸ್.ವೈ.ಎಸ್ ಕಬಕ ಬ್ರಾಂಚ್ ಕೋಶಾಧಿಕಾರಿ ಎಂ.ಅಬೂಬಕ್ಕರ್ ಕಬಕ ರವರ ಗಣ್ಯ ಅಧ್ಯಕ್ಷತೆಯಲ್ಲಿ ಸೈಫುಲ್ಲಾ ಸಅದಿ ಉಸ್ತಾದ್ ದುಆದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ  ವಿದ್ಯಾರ್ಥಿಗಳಿಗೆ ತರಗತಿ ನಡೆಸಿಕೊಟ್ಟರು.

ನಂತರ ಸೈಫುಲ್ಲಾ ಸಅದಿ ಉಸ್ತಾದರ ನೇತೃತ್ವದಲ್ಲಿ ರೈನ್ಬೋ ಟೀಮ್ ರಚನೆ ಕಾರ್ಯ ನಡೆಯಿತು. ಎಸ್ಸೆಸ್ಸೆಫ್ ಕಬಕದ ರೈಂಬೋ ಟೀಮ್  ಚೇರ್ಮೆನ್ ಆಗಿ ಮುಹಮ್ಮದ್ ಫಹದ್, ವೈಸ್ ಚೇರ್ಮೆನ್ ಮುಹಮ್ಮದ್ ಮಿದ್ಲಾಜ್ ಮತ್ತು  ಮುಹಮ್ಮದ್ ಹೈಮಾನ್, ಕನ್ವೀನರ್ ಆಗಿ ಮುಹಮ್ಮದ್ ಸಾಬಿತ್, ಜಾಯಿಂಟ್ ಕನ್ವೀನರ್ ಜಲಾಲುದ್ದೀನ್ ಮತ್ತು ಮುಹಮ್ಮದ್ ಸತ್ತಾರ್ ರವರನ್ನು  ಆಯ್ಕೆ ಮಾಡಲಾಯಿತು.

ಚಿತ್ರರಚನೆ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ,ಸ್ಥಾನವನ್ನು ಪಡೆದ ಮಹಮ್ಮದ್ ನಾಝಿಂ, ಮಹಮ್ಮದ್ ಮಿದ್ಲಾಜ್ ಮತ್ತು ಮಹಮ್ಮದ್ ಸಾಬಿತ್ ರವರಿಗೆ ಆಕರ್ಷಕ ಬಹುಮಾನವನ್ನು ನೀಡಲಾಯಿತು. ಎಸ್.ವೈ.ಎಸ್ ಕಬಕ ಶಾಖಾ ಕಾರ್ಯದರ್ಶಿ ಶಾಹುಲ್ ಹಮೀದ್ ಕಬಕ, ಇಬ್ರಾಹಿಂ ಬನ್ನೂರ್, ಕೆ.ಸಿ.ಎಫ್ ಕಾರ್ಯಕರ್ತರಾದ ಅಬೂಬಕರ್ ಕಬಕ ಹಾಗೂ ಇನ್ನಿತರ ಎಸ್.ಎಸ್.ಎಫ್  ಮತ್ತು ಎಸ್.ವೈ.ಎಸ್ ಕಾರ್ಯಕರ್ತರು ವೇದಿಕೆಯನ್ನು ಧನ್ಯಗೊಳಿಸಿದರು

ಬಲೂನ್ ಸ್ಪರ್ಧೆಯಲ್ಲಿ ಪ್ರಥಮ ಮಹಮ್ಮದ್ ಸತ್ತಾರ್, ದ್ವಿತೀಯ ಮಹಮ್ಮದ್ ನಜಾಫ್ ಮತ್ತು ಫಹದ್ ಮತ್ತು ತೃತೀಯ ಸ್ಥಾನವನ್ನು ಮಹಮ್ಮದ್ ಐಮನ್ ಮತ್ತು ಶಾಝಿಂ ಗಳಿಸಿದರು.

ಕಾರ್ಯಕ್ರಮಕ್ಕೆ ಬಂದ ಅತಿಥಿಗಳನ್ನು ಕಬಕ ಶಾಖೆಯ ರೈಂಬೋ ಟೀಮ್ ಕಾರ್ಯದರ್ಶಿ ಅಹ್ಮದ್ ಮನ್ಸೂರ್ ಮುಸ್ಲಿಯಾರ್ ಕಬಕ ರವರು ಸ್ವಾಗತಿಸಿದರು ಮತ್ತು 

ಕಾರ್ಯಕ್ರಮದ ಕೊನೆಯಲ್ಲಿ ಎಸ್.ಎಸ್.ಎಫ್ ಕಬಕ ಶಾಖೆಯ ಪ್ರ.ಕಾರ್ಯದರ್ಶಿ ಸಫ್ವಾನ್ ಕಬಕ ರವರು ಕೃತಜ್ಞತೆ ಸಲ್ಲಿಸಿದರು.













SHARE THIS

Author:

0 التعليقات: