Saturday, 7 August 2021

ತಮಿಳುನಾಡು ನಿವಾಸಿ ದಮ್ಮಾಮ್ ನಲ್ಲಿ ನಿಧನ, ಅಂತ್ಯಕ್ರಿಯೆಗೆ ಸಹಕರಿಸಿದ ಕೆ.ಸಿ.ಎಫ್


ತಮಿಳುನಾಡು ನಿವಾಸಿ ದಮ್ಮಾಮ್ ನಲ್ಲಿ ನಿಧನ, ಅಂತ್ಯಕ್ರಿಯೆಗೆ ಸಹಕರಿಸಿದ ಕೆ.ಸಿ.ಎಫ್

ಕಳೆದ ತಿಂಗಳು ಸ್ನೇಹಿತನ ದಫನಕ್ಕಾಗಿ ದಾಖಲೆ ಪತ್ರಕ್ಕೆ ಸಾಕ್ಷಿಯಾಗಿದ್ದ ವ್ಯಕ್ತಿತಾನು ಮರಣಹೊಂದಿದರೆ ತನ್ನ ದಫನ ಕಾರ್ಯವನ್ನು ಕೆ.ಸಿ.ಎಫ್ ನಿರ್ವಹಿಸಬೇಕೆಂದು ಕೇಳಿಕೊಂಡಿದ್ದ ಝೈನುದ್ದಿನ್

ಸೌದಿ ಅರೇಬಿಯಾ: ದಮ್ಮಾಮ್ ನಲ್ಲಿ ಸುಮಾರು 20 ವರ್ಷಗಳಿಂದ ಸ್ವಂತ ಉದ್ಯೋಗ ನಿರ್ವಹಿಸುತ್ತಿದ್ದ ತಮಿಳುನಾಡು ತಂಜಾವೂರು ನಿವಾಸಿ ಝೈನುದ್ದೀನ್ ಅಬ್ದುಲ್ ಖಾದರ್ (ವ:57) ಎಂಬುವವರು ತಾ: ಆಗಸ್ಟ್ 3 ರಂದು ಹೃದಯಾಘಾತದಿಂದ ಮರಣಹೊಂದಿರುತ್ತಾರೆ. ಮೃತರು ಪತ್ನಿ ಹಾಗು 4 ಮಕ್ಕಳನ್ನು ಅಗಲಿದ್ದಾರೆ.

ಮರಣೋತ್ತರ ಕ್ರಿಯೆಗೆ ಬೇಕಾದ ವ್ಯವಸ್ಥೆ ಕಲ್ಪಿಸಲು ಕೂಡಲೆ ಸ್ಪಂದಿಸಿ ಕಾರ್ಯ ಪ್ರವರ್ತರಾದ ಕೆ.ಸಿ.ಎಫ್ ದಮ್ಮಾಮ್ ಝೋನ್ ಸಾಂತ್ವನ ತಂಡವು, ಭಾರತೀಯ ರಾಯಬಾರಿ ಕಛೇರಿ ಹಾಗೂ ಊರಿನಿಂದ ಬೇಕಾದ ದಾಖಲೆ ಪತ್ರವನ್ನು ತ್ವರಿತಗತಿಯಲ್ಲಿ ಸರಿಪಡಿಸಿ ಒಂದೆರಡು ದಿನಗಳೊಳಗೆ, ಅಂದರೆ ತಾ: ಆಗಸ್ಟ್ 5 ರಂದು ಅಲ್ ಕೋಬರ್ ನಲ್ಲಿ ದಫನ ಕಾರ್ಯ ನಿರ್ವಹಿಸಲಾಯಿತು. 

ಕಳೆದ ತಿಂಗಳು ಸ್ನೇಹಿತನ ಮರಣ ಸಂಭವಿಸಿದಾಗ ಕೆ.ಸಿ.ಎಫ್ ನೊಂದಿಗೆ ಉತ್ತಮ ರೀತಿಯಲ್ಲಿ ಕೈಜೋಡಿಸಿ ಅವಶ್ಯಕವಾದ ದಾಖಲೆ ಪತ್ರಕ್ಕೆ ಸಾಕ್ಷಿಯಾಗಿ ಕೆ.ಸಿ.ಎಫ್ ಕಾರ್ಯ ವೈಖರಿಯನ್ನು ಶ್ಲಾಘಿಸಿದ್ದರು. ತಾನು ಮರಣಹೊಂದಿದರೆ ತನ್ನ ದಫನ ಕಾರ್ಯವನ್ನು ತಾವುಗಳು ನಿರ್ವಹಿಸಬೇಕೆಂದು ಕೆ.ಸಿ.ಎಫ್ ಸಾಂತ್ವನ ತಂಡದೊಂದಿಗೆ ಕೇಳಿಕೊಂಡಿದ್ದು, ಉತ್ತಮ ಬಂಧವನ್ನು ಹೊಂದಿರುವ ವ್ಯಕ್ತಿಯಾಗಿದ್ದ ಝೈನುದ್ದೀನ್ ಇಂದು ನಮ್ಮಿಂದ ಅಗಲಿದ್ದಾರೆ.

ಮಯ್ಯತ್ ದಫನ ಕಾರ್ಯಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ನೀಡಿ ಕೆ.ಸಿ.ಎಫ್ ನೊಂದಿಗೆ ಸಹಕರಿಸಿದ ಮೃತರ ಕುಟುಂಬದವರಾದ ಅಕ್ಬರ್ ಅಲಿ ಹಾಗೂ ದಮ್ಮಾಮ್ ಝೋನ್ ಸಾಂತ್ವನ ಇಲಾಖೆಯ ಚೇರ್ಮನ್ ಬಾಷಾ ಗಂಗಾವಳಿ ಇವರುಗಳಿಗೆ ಹೃತ್ಪೂರ್ವಕವಾದ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ. 

ಮೃತರ ಕುಟುಂಬದವರು, ಗೆಳೆಯರು ಹಾಗು ಕೆ.ಸಿ.ಎಫ್ ದಮ್ಮಾಮ್ ಝೋನಲ್ ನಾಯಕರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಮೃತರಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.SHARE THIS

Author:

0 التعليقات: