ಬಂಟ್ವಾಳ: ಲಾರಿ ಢಿಕ್ಕಿ; ಸ್ಕೂಟರ್ ಸವಾರ ಸ್ಥಳದಲ್ಲೇ ಮೃತ್ಯು
ಬಂಟ್ವಾಳ: ಸ್ಕೂಟರ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಬುಡೋಳಿ ಸಮೀಪದ ಬೊಳ್ಳುಕಲ್ಲು ಸಮೀಪ ಗುರುವಾರ ಮಧ್ಯಾಹ್ನದ ವೇಳೆ ನಡೆದಿದೆ.
ಕನ್ಯಾನ ಪರಕಜೆ ನಿವಾಸಿ ಮಂಜು ಬೆಳ್ಚಾಡ ಎಂಬವರ ಪುತ್ರ ಗಣೇಶ್ ಬಂಗೇರ (54) ಮೃತಪಟ್ಟ ವ್ಯಕ್ತಿ.
ಉಪ್ಪಿನಂಗಡಿ ಕಡೆಗೆ ವೈಯಕ್ತಿಕ ಕೆಲಸದ ನಿಮಿತ್ತ ತನ್ನ ದ್ವಿಚಕ್ರ ವಾಹನದಲ್ಲಿ ಸಂಚರಿಸುವ ವೇಳೆ ಬುಡೋಳಿ ಸಮೀಪ ಮಂಗಳೂರು ಕಡೆಗೆ ಬರುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸ್ಕೂಟರ್ ಲಾರಿಯ ಅಡಿಯಲ್ಲಿ ಸಿಲುಕಿದ್ದು ಗಣೇಶ್ ಬಂಗೇರ ಸ್ಥಳದಲ್ಲೇ ಮೃತಪಟ್ಟಿ ದ್ದಾರೆ ಎಂದು ತಿಳಿದು ಬಂದಿದೆ.
ಅಪಘಾತ ಸುದ್ದಿ ತಿಳಿದು ಮಾಣಿ ಸೋಶಿಯಲ್ ಇಕ್ವಾ ಫೆಡರೇಶನ್ ನ ಕಾರ್ಯಕರ್ತರಾದ ಶರೀಫ್, ಶಂಶೀರ್ ಬುಡೋಳಿ ಹಾಗೂ ಅಟೋ ಚಾಲಕ ಇಕ್ಬಾಲ್ ಅವರು ಸ್ಥಳಕ್ಕೆ ಧಾವಿಸಿ ಇಕ್ವಾ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದರು. ಸ್ಥಳಕ್ಕೆ ವಿಟ್ಲ ಪೊಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಎಚ್. ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
0 التعليقات: