'ನೀರಜ್' ಹೆಸರಿರುವ ಎಲ್ಲರಿಗೂ ಉಚಿತ ಪೆಟ್ರೋಲ್ ವಿತರಿಸಿದ ಪೆಟ್ರೋಲ್ ಬಂಕ್ ಮಾಲಕ!
ಭರೂಚ್: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಚಿನ್ನ ಗೆದ್ದ ಖುಷಿಯಲ್ಲಿ ಗುಜರಾತ್ನ ಭರೂಚ್ ಎಂಬಲ್ಲಿನ ಪೆಟ್ರೋಲ್ ಬಂಕ್ ಮಾಲಕರೊಬ್ಬರು ನೀರಜ್ ಹೆಸರಿನ ಎಲ್ಲರಿಗೂ ರೂ. 501 ಬೆಲೆಯ ಪೆಟ್ರೋಲ್ ಅನ್ನು ಉಚಿತವಾಗಿ ಒದಗಿಸಿದ್ದಾರೆ.
ಮಾನ್ಯ ಗುರುತು ಕಾರ್ಡ್ ಹಾಜರುಪಡಿಸುವ ನೀರಜ್ ಹೆಸರಿನ ಎಲ್ಲರಿಗೂ ರೂ. 501 ಬೆಲೆಯ ಉಚಿತ ಪೆಟ್ರೊಲ್ ನೀಡುವುದಾಗಿ ನೆತ್ರಂಗ್ ಪಟ್ಟಣದ ಎಸ್ಪಿ ಪೆಟ್ರೋಲಿಯಂ ಮಾಲಕ ಅಯೂಬ್ ಪಠಾಣ್ ಶನಿವಾರ ಹೇಳಿದ್ದರು. ರವಿವಾರ ಆರಂಭಗೊಂಡ ಅವರ ಈ ವಿನೂತನ ಆಫರ್ ಸೋಮವಾರ ಸಂಜೆ ತನಕ ಮಾತ್ರ ಊರ್ಜಿತದಲ್ಲಿತ್ತು. ನೀರಜ್ ಹೆಸರಿನ ಒಟ್ಟು 30 ಮಂದಿ ಈ ಆಫರ್ನ ಪ್ರಯೋಜನ ಪಡೆದಿದ್ದಾರೆಂದು ಪಠಾಣ್ ಹೇಳಿದ್ದಾರೆ.
ನೀರಜ್ ಚಿನ್ನ ಗೆದ್ದು ಎಲ್ಲರಿಗೂ ಹೆಮ್ಮೆಯುಂಟು ಮಾಡಿದ್ದಾರೆ. ಅವರು ಚಿನ್ನ ಗೆದ್ದ ಸಂಭ್ರಮಾಚರಣೆಯ ಭಾಗವಾಗಿ ಉಚಿತ ಪೆಟ್ರೋಲ್ ಒದಗಿಸಿದೆ ಎಂದು ಅವರು ಹೇಳಿದ್ದಾರೆ.
0 التعليقات: