Friday, 6 August 2021

ವಿಕೆಟ್ ಗಳಿಕೆಯಲ್ಲಿ ಅನಿಲ್ ಕುಂಬ್ಳೆ ದಾಖಲೆ ಮುರಿದ ಆ್ಯಂಡರ್ಸನ್

ವಿಕೆಟ್ ಗಳಿಕೆಯಲ್ಲಿ ಅನಿಲ್ ಕುಂಬ್ಳೆ ದಾಖಲೆ ಮುರಿದ ಆ್ಯಂಡರ್ಸನ್ನಾಟಿಂಗ್ ಹ್ಯಾಮ್: ಇಂಗ್ಲೆಂಡ್ ನ ಹಿರಿಯ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಟೆಸ್ಟ್ ಕ್ರಿಕೆಟ್ ನಲ್ಲಿ ಒಟ್ಟು 621 ವಿಕೆಟ್ ಪಡೆಯುವ ಮೂಲಕ ಭಾರತದ ಸ್ಪಿನ್ ದಂತಕತೆ ಅನಿಲ್ ಕುಂಬ್ಳೆ(619 ವಿಕೆಟ್) ಅವರ ದಾಖಲೆಯೊಂದನ್ನು ಮುರಿದರು.

ಬಲಗೈ ವೇಗದ ಬೌಲರ್ ಆ್ಯಂಡರ್ಸನ್ ಭಾರತ ವಿರುದ್ಧ ಇಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ನ 3ನೇ ದಿನದಾಟದಲ್ಲಿ ಕೆ.ಎಲ್. ರಾಹುಲ್ (84) ವಿಕೆಟನ್ನು ಉರುಳಿಸುವುದರೊಂದಿಗೆ ಈ ಸಾಧನೆ ಮಾಡಿದರು.

ಶ್ರೀಲಂಕಾದ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್ (800 ವಿಕೆಟ್) ಹಾಗೂ ಆಸ್ಟ್ರೇಲಿಯ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ (708 ವಿಕೆಟ್) ಬಳಿಕ ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ಪಡೆದ ವಿಶ್ವದ ಮೂರನೇ ಬೌಲರ್ ಎಂಬ ಗೌರವಕ್ಕೆ  39ರ ಹರೆಯದ ಆ್ಯಂಡರ್ಸನ್ ಪಾತ್ರರಾಗಿದ್ದಾರೆ.

2003ರಲ್ಲಿ ಟೆಸ್ಟ್ ಗೆ ಕಾಲಿಟ್ಟಿರುವ ಆ್ಯಂಡರ್ಸನ್ 163ನೇ ಪಂದ್ಯವನ್ನಾಡುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ವಿಕೆಟ್ ಉರುಳಿಸುವ ವಿಚಾರದಲ್ಲಿ ಆ್ಯಂಡರ್ಸನ್ ಅತ್ಯಂತ ಯಶಸ್ವಿ ವೇಗದ ಬೌಲರ್ ಆಗಿದ್ದಾರೆ.  


SHARE THIS

Author:

0 التعليقات: