Thursday, 5 August 2021

ಆಗುಂಬೆ ಘಾಟಿಯಲ್ಲಿ ತಡೆಗೋಡೆಗೆ ಢಿಕ್ಕಿಯಾದ ಲಾರಿ


 ಆಗುಂಬೆ ಘಾಟಿಯಲ್ಲಿ ತಡೆಗೋಡೆಗೆ ಢಿಕ್ಕಿಯಾದ ಲಾರಿ

ಶಿವಮೊಗ್ಗ : ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್ ಲಾರಿಯೊಂದು ಆಗುಂಬೆ ಘಾಟಿಯಲ್ಲಿ ತಡೆಗೋಡೆಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಕೂದಲೆಳೆಯ ಅಂತರದಲ್ಲಿ ಭಾರಿ ದುರಂತ ತಪ್ಪಿದೆ.

ಆಗುಂಬೆ ಘಾಟ್‌ನ ಆರು ಹಾಗೂ ಏಳನೆ ತಿರುವಿನ ಮಧ್ಯದಲ್ಲಿ ಘಟನೆ ನಡೆದಿದ್ದು, ಕ್ಯಾಂಟರ್ ಲಾರಿ ರಸ್ತೆಯಿಂದ ಪ್ರಪಾತದತ್ತ ಮುಖಮಾಡಿ ನಿಂತಿದೆ. ಭತ್ತ ತುಂಬಿದ್ದ ಲಾರಿ ಶಿವಮೊಗ್ಗದಿಂದ ಹೆಬ್ರಿಗೆ ತೆರಳುತ್ತಿತ್ತು. ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದು ಮುನ್ನುಗ್ಗಿದೆ.

ಕ್ಯಾಂಟರ್ ಲಾರಿಯ ಮುಂದಿನ ಚಕ್ರಗಳು ಪ್ರಪಾತದ ಕಡೆಗೆ ಮುಖ ಮಾಡಿವೆ. ತಡೆಗೋಡೆಯ ಕಲ್ಲುಗಳು ಲಾರಿಯ ಛಾಸಿಗೆ ತಾಗಿದ್ದರಿಂದ ಲಾರಿ ನಿಂತಿದೆ. ಕ್ಯಾಂಟರ್‌ನಲ್ಲಿ ಭತ್ತದ ಲೋಡ್ ಇದ್ದಿದ್ದರಿಂದ ಲಾರಿ ಪ್ರಪಾತಕ್ಕೆ ಧುಮಕಿದೆ ನಿಂತಿದೆ. ಚಾಲಕ ಹಾಗೂ ಕ್ಲಿನರ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ರಕ್ಷಣೆ ಮಾಡಲಾಗಿದೆ. ಅಪಘಾತದಿಂದಾಗಿ ಕೆಲಕಾಲ ಘಾಟಿಯಲ್ಲಿ ವಾಹನ ಸಂಚಾರ ವ್ಯತ್ಯಯವಾಗಿತ್ತು.

ಘಟನಾ ಸ್ಥಳಕ್ಕೆ ಆಗುಂಬೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


SHARE THIS

Author:

0 التعليقات: