ಅಂಗಾಂಗ ದಾನದ ಘೋಷಣೆ ಮಾಡಿದ ಮುಖ್ಯಮಂತ್ರಿ ಬೊಮ್ಮಾಯಿ
ಉಡುಪಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂಗಾಂಗ ದಾನದ ಘೋಷಣೆ ಮಾಡಿದ್ದಾರೆ.
ಮಣಿಪಾಲದಲ್ಲಿಂದು ಬೆಳಗ್ಗೆ ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ಸುದ್ದಿಗಾರ ಜೊತೆ ಮಾತನಾಡಿದ ಮುಖ್ಯಮಂತ್ರಿ, ಇಂದು ವಿಶ್ವ ಅಂಗಾಂಗ ದಾನ ದಿನ. ಅಂಗಾಂಗ ದಾನದಿಂದ ಬಹಳಷ್ಟು ಜೀವಗಳನ್ನು ಉಳಿಸಬಹುದು. ಆದ್ದರಿಂದ ನಾನು ಕೂಡಾ ಅಂಗಾಂಗ ದಾನಕ್ಕೆ ನಿರ್ಧರಿಸಿದ್ದೇನೆ. ಇಂದು ಈ ಬಗ್ಗೆ ಸಹಿ ಹಾಕಲಿದ್ದೇನೆ. ಎಲ್ಲರೂ ಅಂಗಾಂಗ ದಾನದ ಸಂಕಲ್ಪ ಮಾಡಬೇಕು ಎಂದು ಕರೆ ನೀಡುತ್ತೇನೆ ಎಂದು ಹೇಳಿದರು.
0 التعليقات: