Monday, 2 August 2021

ಇಶಾಅತುಸ್ಸುನ್ನ ವತಿಯಿಂದ ಕ್ಯಾಮರಾಡೇರಿಯಾ ಕಾರ್ಯಕ್ರಮ


 
ಇಶಾಅತುಸ್ಸುನ್ನ ವತಿಯಿಂದ ಕ್ಯಾಮರಾಡೇರಿಯಾ ಕಾರ್ಯಕ್ರಮ

ಕಾಸರಗೋಡು: 30/7/2021 ಮುಹಿಮ್ಮಾತ್ ಮುತಅಲ್ಲಿಂ ವಿದ್ಯಾರ್ಥಿ ಸಂಘಟನೆಯಾದ ಇಶಾಅತುಸ್ಸುನ್ನ,  friendship day ಅನುಬಂಧವಾಗಿ "ಕ್ಯಾಮರಾಡೇರಿಯಾ" (camaredrie) ಎಂಬ ಶೀರ್ಷಿಕೆಯಲ್ಲಿ  ಪ್ರತ್ಯೇಕ ಕಾರ್ಯಕ್ರಮಗಳನ್ನು ಗೂಗಲ್ ಮೀಟ್ ಮೂಲಕ ನಡೆಸಿದರು. ಸಂಘಟನೆಯ ಅಧ್ಯಕ್ಷರು ಹಾಫಿಝ್ ಯಹ್ಯಾ ಉಸ್ತಾದರು ಅಧ್ಯಕ್ಷತೆ ವಹಿಸಿದರು. ಮೊಹಮ್ಮದ್ ಶಾಕಿರ್ ಸ್ವಾಗತ ಭಾಷಣ ನಡೆಸಿದರು. ಅಧ್ಯಕ್ಷ ಭಾಷಣದ ನಂತರ ಪ್ರಮುಖ ಯೂಟ್ಯೂಬರ್ "ಹಾಫಿಝ್ ಕಬೀರ್ ಹಿಮಮಿ" ಉಸ್ತಾದರು ಉತ್ತಮ ಸ್ನೇಹಿತ ಹೇಗಿರಬೇಕು ಎಂಬ ವಿಷಯವನ್ನು ವಿಸ್ತರಿಸಿ ಮಾತನಾಡಿದರು. ತಮ್ಮ ಭಾಷಣದ ಎಡೆಯಲ್ಲಿ "ನಿಮ್ಮ ಸ್ನೇಹಬಂಧವು ಆತ್ಮೀಯತೆಯಲ್ಲಿರಲಿ" ಎಂದು ಅವರು ನೆನಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಹಾಝಿಮ್ ತುರ್ಕಲಿಕೆ  ಧನ್ಯವಾದ ಹೇಳಿದರು.

SHARE THIS

Author:

0 التعليقات: