Friday, 6 August 2021

ಒಲಿಂಪಿಕ್ಸ್: ಸೆಮಿ ಫೈನಲ್ ನಲ್ಲಿ ಸೋತ ಕುಸ್ತಿಪಟು ಬಜರಂಗ್ ಪುನಿಯಾ


 ಒಲಿಂಪಿಕ್ಸ್: ಸೆಮಿ ಫೈನಲ್ ನಲ್ಲಿ ಸೋತ ಕುಸ್ತಿಪಟು ಬಜರಂಗ್ ಪುನಿಯಾ

ಟೋಕಿಯೊ: ಭಾರತದ ಸ್ಟಾರ್ ಕುಸ್ತಿಪಟು ಬಜರಂಗ್ ಪುನಿಯಾ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪುರುಷರ ಫ್ರೀಸ್ಟೈಲ್ 65 ಕೆಜಿ ತೂಕ ವಿಭಾಗದಲ್ಲಿ ಸೆಮಿ ಫೈನಲ್ ನಲ್ಲಿ ಸೋಲನುಭವಿಸಿ ಭಾರೀ ನಿರಾಸೆ ಮೂಡಿಸಿದರು.

ವಿಶ್ವ ನಂ .2ನೇ ಕುಸ್ತಿಪಟು  ಬಜರಂಗ್ ಪುನಿಯಾ ಟೋಕಿಯೊದಲ್ಲಿ ಎರಡನೇ ಶ್ರೇಯಾಂಕ ಪಡೆದಿದ್ದು,ಫೈನಲ್ ತಲುಪಬಲ್ಲ ನೆಚ್ಚಿನ  ಕುಸ್ತಿಪಟುವಾಗಿದ್ದರು. ಪುನಿಯಾ ಶನಿವಾರ ರಶ್ಯದ ಗಡ್ಝಿಮುರಾದ್ ರಶಿದೋವ್ ವಿರುದ್ಧ ಕಂಚಿನ ಪದಕಕ್ಕಾಗಿ ಹೋರಾಡಲಿದ್ದಾರೆ.

ಶುಕ್ರವಾರ ನಡೆದ  ಸೆಮಿ ಫೈನಲ್ ನಲ್ಲಿ ಅಝರ್ ಬೈಜಾನ್ ನ ಹಾಜಿ ಅಲಿಯೇವ್ ಅವರ ವಿರುದ್ಧ 5-12 ಅಂಕಗಳ ಅಂತರದಿಂದ ಸೋತಿದ್ದಾರೆ.

ಇದಕ್ಕೂ ಮೊದಲು ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಬಜರಂಗ್ ಅವರು ಇರಾನ್ ನ ಮೊರ್ತೆಝಾ ಘಿಯಾಸಿ ಅವರನ್ನು 2-1 ಅಂತರದಿಂದ ಸೋಲಿಸಿ ಸೆಮಿ ಫೈನಲ್ ತಲುಪಿದ್ದರು.


SHARE THIS

Author:

0 التعليقات: