ದಕ್ಷಿಣ ಫ್ರಾನ್ಸ್ ನಲ್ಲಿ ಕಾಡ್ಗಿಚ್ಚು: ಸಾವಿರಾರು ಜನರ ಸ್ಥಳಾಂತರ
ಮಾರ್ಸೇ (ಫ್ರಾನ್ಸ್): ದಕ್ಷಿಣ ಫ್ರಾನ್ಸ್ ನ ಸೇಂಟ್ ಟ್ರೋಪೆಝ್ ರಿಸಾರ್ಟ್ ಸಮೀಪ ಕಾಡ್ಗಿಚ್ಚು ವ್ಯಾಪಿಸಿದ್ದು ಪ್ರವಾಸಿಗರು ಸೇರಿದಂತೆ ಸಾವಿರಾರು ಜನರನ್ನು ತೆರವುಗೊಳಿಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆ ಮಂಗಳವಾರ ತಿಳಿಸಿದೆ.
ಸುಮಾರು 750 ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಶ್ರಮಿಸುತ್ತಿದ್ದಾರೆ. ಹೆಲಿಕಾಪ್ಟರ್ಗಳು ಆಕಾಶದಿಂದ ನೀರು ಎರಚಿ ಬೆಂಕಿಯನ್ನು ನಂದಿಸಲು ಯತ್ನಿಸುತ್ತಿವೆ. ಸ್ಥಳದಲ್ಲಿ ಅಧಿಕ ಉಷ್ಣತೆ ನೆಲೆಸಿದೆ ಹಾಗೂ ಬಲವಾದ ಗಾಳಿ ಬೀಸುತ್ತಿದೆ. ಹಾಗಾಗಿ ಬೆಂಕಿಯನ್ನು ನಂದಿಸಲು ಕಷ್ಟವಾಗುತ್ತಿದೆ.
‘‘ಸಾವಿರಾರು ಜನರನ್ನು ಮುಂಜಾಗರೂಕತಾ ಕ್ರಮವಾಗಿ ಸ್ಥಳಾಂತರಿಸಲಾಗಿದೆ. ಆದರೆ, ಸಾವು-ನೋವು ಸಂಭವಿಸಿಲ್ಲ. ಆದರೂ ಪರಿಸ್ಥಿತಿ ಈಗಲೂ ಗಂಭೀರವಾಗಿದೆ’’ ಎಂದು ಅಗ್ನಿಶಾಮಕ ಇಲಾಖೆಯ ವಕ್ತಾರೆಯೋರ್ವರು ಹೇಳಿದರು.
0 التعليقات: