ದೇಶ ತೊರೆದ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ: ವರದಿ
ಕಾಬೂಲ್: ತಾಲಿಬಾನ್ ಬಂಡುಕೋರರು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ವಶಪಡಿಸಿಕೊಂಡ ಬೆನ್ನಿಗೇ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ತನ್ನ ಪ್ರಮುಖ ತಂಡದೊಂದಿಗೆ ದೇಶವನ್ನು ತೊರೆದಿದ್ದಾರೆ ಎಂದು TOLO News ರವಿವಾರ ವರದಿ ಮಾಡಿದೆ.
ತಾಲಿಬಾನ್ ಬಂಡುಕೋರರು ಎಲ್ಲಾ ಕಡೆಯಿಂದ ರಾಜಧಾನಿಗೆ ಬರುತ್ತಿದ್ದಾರೆ ಎಂದು ಹಿರಿಯ ಆಂತರಿಕ ಸಚಿವಾಲಯದ ಅಧಿಕಾರಿಯೊಬ್ಬರು ರಾಯಿಟರ್ಸ್ಗೆ ತಿಳಿಸಿದ್ದಾರೆ.
ಅಮೆರಿಕವು ತನ್ನ ರಾಯಭಾರ ಕಚೇರಿಯಿಂದ ಹೆಲಿಕಾಪ್ಟರ್ ಮೂಲಕ ರಾಜತಾಂತ್ರಿಕರನ್ನು ಸ್ಥಳಾಂತರಿಸಿತು ಮತ್ತು ಮಧ್ಯಂತರ ಆಡಳಿತಕ್ಕೆ ಅಧಿಕಾರವನ್ನು ಹಸ್ತಾಂತರಿಸಲಾಗುವುದು ಎಂದು ಸರಕಾರದ ಸಚಿವರು ಹೇಳಿದ್ದರು.
0 التعليقات: