ಹಾವು ಕಡಿತದಿಂದ ಯುವಕ ಮೃತ್ಯು
ಬಂಟ್ವಾಳ, ಆ.31: ವಿಷಕಾರಿ ಹಾವಿನ ಕಡಿತಕ್ಕೊಳಗಾದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಮಂಗಳವಾರ ಸಂಜೆಯ ಸುಮಾರಿಗೆ ಸಂಭವಿಸಿದೆ.
ಬಡಗಕಜೆಕಾರು ಗ್ರಾಮದ ಪಾಂಡವರ ಕಲ್ಲು ನಿವಾಸಿ ಉಸ್ಮಾನ್ ಅವರ ಪುತ್ರ ಆಸಿದ್ ( 26) ಮೃತಪಟ್ಟವರು.
ಆಸಿದ್ ಅವರು ಕೂಲಿ ಕಾರ್ಮಿಕನಾಗಿದ್ದು, ವಾಮದಪದವು ಬಳಿ ಮಂಗಳವಾರ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಹಾವಿನ ಕಡಿತಕ್ಕೊಳಗಾಗಿದ್ದರು. ಬಳಿಕ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಅವರು ಉಸ್ಮಾನ್ ಅವರ ಮೂವರು ಪುತ್ರರಲ್ಲಿ ಕೊನೆಯವರಾಗಿದ್ದು, ಅವಿವಾಹಿತರಾಗಿದ್ದರು.
0 التعليقات: