Thursday, 19 August 2021

ಅಂತರ್-ಧರ್ಮೀಯ ವಿವಾಹಕ್ಕೆ ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆಯ ಕೆಲ ನಿಬಂಧನೆಗಳು ಅನ್ವಯಿಸುವುದಿಲ್ಲ: ಹೈಕೋರ್ಟ್


 ಅಂತರ್-ಧರ್ಮೀಯ ವಿವಾಹಕ್ಕೆ ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆಯ ಕೆಲ ನಿಬಂಧನೆಗಳು ಅನ್ವಯಿಸುವುದಿಲ್ಲ: ಹೈಕೋರ್ಟ್

ಅಹ್ಮದಾಬಾದ್: ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ(ತಿದ್ದುಪಡಿ) ಕಾಯಿದೆ 2021 ಇದರ ಕೆಲ ನಿಬಂಧನೆಗಳು ಯಾವುದೇ ಬಲವಂತ, ಆಮಿಷ ಅಥವಾ ವಂಚನೆಯಿಲ್ಲದೆ ನಡೆಯುವ ಅಂತರ-ಧರ್ಮೀಯ ವಿವಾಹಗಳಿಗೆ ಅನ್ವಯಿಸುವುದಿಲ್ಲ ಎಂದು ಗುಜರಾತ್ ಹೈಕೋರ್ಟ್ ಇಂದು ಮಧ್ಯಂತರ ಆದೇಶವೊಂದರಲ್ಲಿ ಹೇಳಿದೆ.

ಅಂತರ-ಧರ್ಮೀಯ ವಿವಾಹವಾದವರನ್ನು ಅನಗತ್ಯ ಕಿರುಕುಳದಿಂದ ರಕ್ಷಿಸಲು ಈ ಮಧ್ಯಂತರ ಆದೇಶ ಹೊರಡಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ.

ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ(ತಿದ್ದುಪಡಿ)ಕಾಯಿದೆ 2021ರ ಕೆಲವೊಂದು ನಿಬಂಧನೆಗಳನ್ನು ಪ್ರಶ್ನಿಸಿ ಮುಹಮ್ಮದ್ ಐಸಾ ಎಂ ಹಕೀಂ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಪೀಠ ಮೇಲಿನ ಮಧ್ಯಂತರ ಆದೇಶ ಹೊರಡಿಸಿದೆ.

ಅಂತರ-ಧರ್ಮೀಯ ವಿವಾಹವು ಬಲವಂತದ ಮತಾಂತರಕ್ಕೆ ಕಾರಣವಾದಲ್ಲಿ ಮಾತ್ರ ಕಾಯಿದೆಯ ನಿಬಂಧನೆಗಳು ಅನ್ವಯವಾಗುತ್ತವೆ ಎಂದು ನ್ಯಾಯಾಲಯ ಹೇಳಿದೆ.

ಈ ವರ್ಷದ ಜೂನ್ 15ರಂದು ಗುಜರಾತ್‍ನಲ್ಲಿ ಈ ಕಾಯಿದೆಯು ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶಗಳಲ್ಲಿ ಜಾರಿಯಾದ `ಲವ್ ಜಿಹಾದ್ ವಿರೋಧಿ' ಕಾನೂನಿನ ಮಾದರಿಯಲ್ಲಿ ಜಾರಿಯಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಅಂತರ-ಧರ್ಮೀಯ ವಿವಾಹವು ಯಾವುದೇ ಬಲವಂತ, ಆಮಿಷ ಅಥವಾ ವಂಚನೆಯಿಂದ ನಡೆಸಲಾಗಿಲ್ಲದೇ ಇದ್ದಲ್ಲಿ ಕಾಯಿದೆಯ ಸೆಕ್ಷನ್ 3,4, 4ಎಯಿಂದ ಹಿಡಿದು 4ಸಿ,5, 6 ತನಕದ ನಿಬಂಧನೆಗಳು ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.


SHARE THIS

Author:

0 التعليقات: