Sunday, 8 August 2021

ಮೊದಲ ಟೆಸ್ಟ್: ಭಾರತದ ಗೆಲುವಿಗೆ ಮಳೆ ಅಡ್ಡಿ, ಪಂದ್ಯ ಡ್ರಾ

ಮೊದಲ ಟೆಸ್ಟ್: ಭಾರತದ ಗೆಲುವಿಗೆ ಮಳೆ ಅಡ್ಡಿ, ಪಂದ್ಯ ಡ್ರಾ

ಭಾರತದ ಸಹಾಯಕ ಸಿಬ್ಬಂದಿಯೊಂದಿಗೆ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ.

ನಾಟಿಂಗ್‌ಹ್ಯಾಮ್, ಆ.8: ಎಡಬಿಡದೆ ಸುರಿದ ಮಳೆಯು ಮೊದಲ ಟೆಸ್ಟ್ ನಲ್ಲಿ ಭಾರತದ ಕೈಯಿಂದ ಗೆಲುವನ್ನು ಕಸಿದುಕೊಂಡಿದೆ. ರವಿವಾರ 5ನೇ ದಿನದಾಟವು ಒಂದೂ ಎಸೆತ ಕಾಣದೆ ರದ್ದಾದ ಕಾರಣ ಉಭಯ ತಂಡಗಳು ತಲಾ 4 ಅಂಕವನ್ನು ಹಂಚಿಕೊಂಡಿವೆ.

ಮೊದಲ ಟೆಸ್ಟ್ ಪಂದ್ಯದ ಗೆಲುವಿಗೆ 209 ರನ್ ಗುರಿ ಪಡೆದಿದ್ದ ಭಾರತವು 4ನೇ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿತ್ತು. ವಿರಾಟ್ ಕೊಹ್ಲಿ ಬಳಗವು ಅಂತಿಮ ದಿನವಾದ ರವಿವಾರ ಗೆಲ್ಲಲು 157 ರನ್ ಗಳಿಸಬೇಕಾಗಿತ್ತು. ಆದರೆ ಮಳೆರಾಯ ಒಂದೂ ಎಸೆತ ಎಸೆಯಲು ಅವಕಾಶ ನೀಡಲಿಲ್ಲ.

2ನೇ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಇಂಗ್ಲೆಂಡ್ ನಾಯಕ ಜೋ ರೂಟ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಆಗಸ್ಟ್ 12ರಿಂದ 5 ಪಂದ್ಯಗಳ ಸರಣಿಯ 2ನೇ ಪಂದ್ಯ ಆರಂಭವಾಗಲಿದೆ.


 



SHARE THIS

Author:

0 التعليقات: