Sunday, 1 August 2021

ಟೋಕಿಯೊ ಒಲಿಂಪಿಕ್ಸ್: ಕ್ವಾರ್ಟರ್ ಫೈನಲ್ ನಲ್ಲಿ ಸೋತ ಬಾಕ್ಸರ್ ಸತೀಶ್ ಕುಮಾರ್


 ಟೋಕಿಯೊ ಒಲಿಂಪಿಕ್ಸ್: ಕ್ವಾರ್ಟರ್ ಫೈನಲ್ ನಲ್ಲಿ ಸೋತ ಬಾಕ್ಸರ್ ಸತೀಶ್ ಕುಮಾರ್

ಟೋಕಿಯೊ: ಭಾರತೀಯ ಬಾಕ್ಸರ್ ಸತೀಶ್ ಕುಮಾರ್  ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪುರುಷರ ಸೂಪರ್ ಹೇವಿ ವೇಟ್(+91ಕೆಜಿ)ವಿಭಾಗದ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಉಜ್ಬೇಕಿಸ್ತಾನದ ಬಖೋದಿರ್ ಜಲೊಲೊವ್  ವಿರುದ್ಧ 0-5 ಅಂತರದಿಂದ ಸೋತಿದ್ದಾರೆ.

ಸತೀಶ್ ಕುಮಾರ್ ಅವರು ರವಿವಾರ ನಡೆದ 8ರ ಸುತ್ತಿನ ಬಾಕ್ಸಿಂಗ್ ಸ್ಪರ್ಧೆಯ ರೌಂಡ್-1 ಹಾಗೂ ರೌಂಡ್-2ರಲ್ಲಿ ಸೋಲುಂಡಿದ್ದು, ಎಲ್ಲ ಐವರು  ತೀರ್ಪುಗಾರರು ಉಜ್ಬೇಕಿಸ್ತಾನದ ವಿಶ್ವಚಾಂಪಿಯನ್ ಬಾಕ್ಸರ್ ಪರ ತೀರ್ಪು ನೀಡಿದರು.

ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ಜಮೈಕಾದ ರಿಕಾರ್ಡೊ ಬ್ರೌನ್ ವಿರುದ್ಧ ಸೆಣಸುವಾಗ ಹಣೆ ಹಾಗೂ ಕೆನ್ನೆ ಆಗಿರುವ ಗಾಯಕ್ಕೆ ಹಲವು ಹೊಲಿಗೆಗಳನ್ನು ಹಾಕಿಕೊಂಡಿದ್ದ 32ರ ಹರೆಯದ ಸತೀಶ್ ಅವರು ಜಲೊಲೊವ್ ವಿರುದ್ಧ ಧೈರ್ಯಶಾಲಿ ಪ್ರದರ್ಶನ ನೀಡಿದರೂ ಗೆಲ್ಲಲು ಸಾಧ್ಯವಾಗಲಿಲ್ಲ.


SHARE THIS

Author:

0 التعليقات: