Monday, 2 August 2021

9 ವರ್ಷದ ಬಾಲಕಿಯ ಅತ್ಯಾಚಾರ

9 ವರ್ಷದ ಬಾಲಕಿಯ ಅತ್ಯಾಚಾರ

ಹೊಸದಿಲ್ಲ: ದುಷ್ಕರ್ಮಿಗಳು 9 ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ನಡೆಸಿ ಮೃತದೇಹವನ್ನು ಸುಟ್ಟು ಹಾಕಿದ ಘೋರ ಘಟನೆ ಹೊಸದಿಲ್ಲಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಅರ್ಚಕ ಹಾಗೂ ಇತರ ಮೂವರನ್ನು ಬಂಧಿಸಿದ್ದಾರೆ. ತನಿಖೆ ಮುಂದುವರಿದಿದೆ. ಬಾಲಕಿಗೆ ನ್ಯಾಯ ಒದಗಿಸುವಂತೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಸೇರಿದ ಬಾಲಕಿ ದಿಲ್ಲಿ ಕಂಟೋನ್ಮೆಂಟ್ ಪ್ರದೇಶದ ಪುರಾನಾ ನಂಗಲ್‌ನಲ್ಲಿ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದಳು. ಬಾಯಾರಿಕೆಯಾದ ಹಿನ್ನೆಲೆಯಲ್ಲಿ ರವಿವಾರ ಸಂಜೆ ಆಕೆ ನೀರು ಕುಡಿಯಲು ಸಮೀಪದ ಚಿತಾಗಾರಕ್ಕೆ ತೆರಳಿದ್ದಳು.

ಸುಮಾರು 6 ಗಂಟೆಗೆ ಚಿತಾಗಾರದ ಅರ್ಚಕನ ಪರಿಚಯವಿರುವ ಕೆಲವು ಸ್ಥಳೀಯರು ಬಾಲಕಿಯ ತಾಯಿಗೆ ಕರೆ ಮಾಡಿ ಬಾಲಕಿಯ ಸುಟ್ಟು ಕರಕಲಾದ ಮೃತದೇಹವನ್ನು ತೋರಿಸಿದ್ದರು. ಕೂಲರ್‌ನಿಂದ ನೀರು ಕುಡಿಯುವಾಗ ಬಾಲಕಿಗೆ ವಿದ್ಯುತ್ ಆಘಾತ ಉಂಟಾಗಿದೆ ಎಂದು ಹೇಳಿದ್ದರು.


  


SHARE THIS

Author:

0 التعليقات: